ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೮ ಶ್ರೀಮದ್ಭಾಗವತವು [ಅಧ್ಯಾ, ೧ ಅಧರ್ಮಮಾರ್ಗವೇ ಆತನ ಬೆನ್ನು, ಪ್ರಜಾಪತಿಬ್ರಹ್ಮನೇ ಆತನ ಗುಹ್ಯವು, ಮಿತ್ರಾವರುಣರಿಬ್ಬರೂ ಆತನ ಅಂಡಬೀಜಗಳು. ಸಮುದ್ರವೇ ಆತನ ಜಠರ ವು. ಪರ್ವತಗಳೇ ಆತನ ಎಲುಬುಗಳು, ನದಿಗಳೆಲ್ಲವೂ ಆತನ ನಾಡಿಗಳು. ವ್ಯ ಕ್ಷಗಳೆಲ್ಲವೂ ವಿಶ್ವಾತ್ಮನಾದ ಆತನ ಮೈಕೂದಲುಗಳು, ವಾಯುಸಮೂಹವೇ ಆತನ ಉಸಿರಾಟವು, ಕಾಲವೇ ಆತನ ನಡೆ! ಪ್ರಾಣಿಗಳಿಗೆ ಸಾವಿತ್ರಿಗುಣ ಸಂಬಂಧದಿಂದುಂಟಾಗುವಸಂಸಾರವೆಂಬುದು, ಆತನುಕಾಲಕಾಲಕ್ಕೆನಡೆಸತಕ್ಕ ಲೀಲಾಕಾರಗಳು, ಮೇಘಸಮೂಹಗಳೇ ಆತನ ತಲೆಕೂದಲುಗಳು. ಸಂ ಧ್ಯಾಕಾಲಗಳೆರಡೂ ಆತನ ವಸ್ತ್ರಗಳು, ಅವ್ಯಕ್ತವೆನಿಸಿದ ಪ್ರಕೃತಿಯೇ ಆತನ ಹೃದಯವೆನಿಸುವುದು, ಸರೌಷಧಿಗಳ ವಿಕಾರಕ್ಕಾಶ್ರಯನಾದ ಚಂದ್ರನೇ ಆತನಮನಸ್ಸು.ಮಹತ್ತತ್ವವೆಂಬುದೇ ಆತನ ವಿಜ್ಞಾನವ್ಯವಸಾಯಶಕ್ತಿಯು. ರುದ್ರನೇ ಆತನ ಅಹಂಕಾರವು. ಕುದುರೆಗಳು, ಹೇಸರಗತ್ತೆಗಳು, ಒಂಟೆಗಳು, ಆನೆಗಳು, ಇವೆಲ್ಲವೂ ಆತನ ನಖಗಳು, ಇತರಪಶುಮ್ಮಗಾದಿಗಳೆಲ್ಲವೂ ಆ ಮಹಾತ್ಮನ ಶ್ರೇಣೀಭಾಗಗಳು, ಪಕ್ಷಿಜಾತಿಯೆಲ್ಲವೂ ಆತನ ಶಿಲ್ಪನೈಪುಣ್ಯ ವೆನಿಸುವುದು. ಮಂತ್ರಗಳೇ ಆತನ ಬುದ್ಧಿಯು. ಮನುಷ್ಯಜಾತಿಯೇ ಆತನಿಗೆ ನಿವಾಸಸ್ಥಾನವು ಗಂಧರ್ವಾದಿದೇವತೆಗಳು ಆತನ ಕಂಠಸ್ವರವು.ಪ್ರಹ್ಲಾದಾ ದಿಗಳೇ ಆತನ ಸ್ಮತಿಯು.ಇದಲ್ಲದೆ ಆ ಮಹಾತ್ಮಸಿಗೆ ಬ್ರಾಹ್ಮಣರು ಮುಖ ವೆಂದೂ, ಕ್ಷತ್ರಿಯರು ಭುಜಗಳೆಂದೂ, ವೈಶ್ಯರು ತೊಡೆಗಳೆಂದೂ, ಶೂದ್ರ ರು ಪಾದಗಳೆಂದೂ, ವಸುರುದ್ರಾದಿದೇವತೆಗಳ ಹೆಸರುಗಳೇ ಆತನ ಪರಾ ಯನಾಮಗಳೆಂದೂ, ಹವಿರ್ಭಾಗಳೆಲ್ಲವೂ ಪೂಜಾದ್ರವ್ಯಗಳೆಂದೂ, ಯಜ್ಞ ಪ್ರಯೋಗಗಳು ತದಾರಾಥನಕ್ರಿಯೆಗಳೆಂದೂ ಮಹರ್ಷಿಗಳು ಹೇಳುವರು. ಲೈ ರಾಜನೆ!ಇದೇ ಆ ಭಗವಂತನ ಅವಯವಸಂಸ್ಥಾನಗಳುಆತನ ಈ ರೂಪ ದಲ್ಲಿ ಬುದ್ಧಿಯನ್ನು ನೆಲೆಗೊಳಿಸಿದವನಿಗೆ, ಸರ್ವವೂ ಈಶ್ವರಾಂತರ್ಭೂತವೆಂ ದು ತೋರುವುದೇಹೊರತು, ಆ ಈಶ್ವರನಿಗಿಂತಲೂ ಭಿನ್ನವಾದ ಬೇರೆ ಯಾ ವ ವಸ್ತುವನ್ನೂ ಕಾಣುವುದಕ್ಕೆ ಅವಕಾಶವಿಲ್ಲ.*ಸ್ವಪ್ನ ಕಾಲಗಳಲ್ಲಿ ಒಂದೇ ಜೀವನು,ತನಗೆ ಅನುಭವಯೋಗ್ಯಗಳಾಗಿ, ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ

  • ಇಲ್ಲಿ ಅಧಿಷಾ ನಮಾತ್ರದಲ್ಲಿಯೇ ಜೀವಾತ್ಮ ದೃಷ್ಟಾಂತವೆಂದುತಿಳಿಯಬೇಕು.