ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಸನಕಾದಿಮಹರ್ಷಿಗಳು ಮುಂದೆ ಬರುತ್ತಿರುವುದನ್ನು ಕಂಡನು. ಒಡನೆಯೇ ನಾರದನು ಪರಮಸಂತೋಷದಿಂದ ಅವರನ್ನು ಕುರಿತು (ಎಲೈಋಷಿಕುಮಾ ರರೇ! ಭಾಗ್ಯವಶದಿಂದ ನಿಮ್ಮ ದರ್ಶನವು ನನಗೆ ಲಭಿಸಿತು. ಕೃಪೆಯಿಟ್ಟು, ನ ನ್ನ ಕೋರಿಕೆಯನ್ನು ನಡೆಸಿಕೊಡಬೇಕು. ಸಿವಾದರೋ ಮಹಾಯೋಗಿಗಳು. ಆನೇಕಶಾಸ್ತ್ರಗಳನ್ನು ಕೇಳಿ ಬಲ್ಲವರು. ಯಾವಾಗಲೂ ಹರಿಕೀರ್ತನೆಯಲ್ಲಿಯೇ ನಿರತರಾಗಿ ವೈಕುಂಠದಲ್ಲಿ ವಾಸಮಾಡತಕ್ಕವರು- ಹಿರಿಯರಿಗಿಂತಲೂ ಹಿರಿಯ ರೆಸಿಸಿಕೊಂಡರೂ ವಾರ್ಧಕಬಾಧೆಯಿಲ್ಲದೆ ಯಾವಾಗಲೂ ಐದುವರ್ಷದ ಕೌಮಾರಂತೆ ಕಾಣುತ್ತಿರುವಿರಿ! ಹರಿಕೀರ್ತನೆಯೊಂದೇ ನಿಮ್ಮ ಜೀವನವು. ಹರಿಯೊಬ್ಬನೇ ರಕ್ಷಕನೆಂದು ನಂಬಿದವರು ಎಲೈ ಮಹಾತ್ಮರೆ! ಪೂತ್ವದಲ್ಲಿ ಜಯವಿಜಯರೆಂಬ ವೈಕುಂಠ ದ್ವಾರಪಾಲಕರು ಕೊಪಸೂಚಕವಾದ ನಿಮ್ಮ ಭೂಭಂಗವನ್ನು ನೋಡಿದಮಾತ್ರದಿಂದಲೇ ಭೂಮಿಗೆ ಬಿದ್ದು, ಒಡನೆಯೇ ನಿಮ್ಮ ಕೃಪಾಬಲದಿಂದ ತಿರುಗಿ ಪೂರೈಸಾನವನ್ನು ಸೇರಿರು ವರು.ದಯಾಳುಗಳಾದ ನೀವು ನನ್ನಲ್ಲಿ ಅನುಗ್ರಹವನ್ನು ಮಾಡಿ ನನ್ನ ಕೋರಿಕೆ ಯನ್ನು ಈಡೇರಿಸಿ ಕೊಡಬೇಕು. ಅಶರೀರವಾಣಿಯು ಸೂಚಿಸಿದ ಉಕಾ ಯವನ್ನು ನಿಮ್ಮಿಂದಲೇ ನಾನು ತಿಳಿಯಬೇಕಾಗಿರುವುದು ಭಕ್ತಿ, ಜ್ಞಾನ, ವೈರಾಗ್ಯಗಳಿಗೆ ಕ್ಷೇಮವನ್ನು ಲಟುಮಾಡುವುದಕ್ಕೆ ನಾನು ನಡೆಸಬೇಕಾದ ಕರ್ಮವೇನೆಂಬುದನ್ನು ನೀವೇ ನನಗೆ ಉಪದೇತಿಸಬೇಕು”ಎಂದನು. ಅದಕ್ಕಾ ಕುಮಾರರು ನಾರದನನ್ನು ಕುರಿತು ( ಎಲೈ ಋಷಿಸಮನೆ ! ಚಿಂತಿಸ ಬೇಡ. ಇದಕ್ಕೆ ಸುಲಭಸಾಧ್ಯವಾದ ಒಂದುಪಾಯವಿರುವುದು. ಯಾವಾಗ ಲೂ ಹರಿಧ್ಯಾನನಿರತನಾಗಿ ವಿರಕ್ತರಿಗೆ ತಿರೋಗ ಪ್ರಾಯನಾಗಿರುವ ನಿನ್ನಂತೆ ಲೋಕದಲ್ಲಿ ಧನ್ಯನಾರುಂಟು?ಲೋಕದಲ್ಲಿ ವಿಷ್ಣು ಭಕ್ತಿಯನ್ನು ನೆಲೆ ಗೊಳಿಸುವುದಕ್ಕೆ ನೀನಲ್ಲದೆ ಬೇರೆ ಯಾರು ಸಮರ್ಥರು?ಪುರಾತನ ಮಹರ್ಷಿಗ ಳು ಪುಣ್ಯ ಸಂಪಾದನೆಗಾಗಿ ಎಷ್ಟೆಷ್ಟೋ ಮಾರ್ಗಗಳನ್ನು ಹೇಳಿರುವರು. ಅವೆಲ್ಲವೂ ಕೇವಲಶ್ರಮಸಾಧ್ಯಗಳು! ಶ್ರಮಪಟ್ಟು ಆ ಕರ್ಮಗಳನ್ನು ನಡೆಸಿ ದರೂ ಅವು ಆಶಾಶ್ವತಗಳಾದ ಸ್ವರ್ಗಾಹಫಲಗಳನ್ನು ಮಾತ್ರವೇ ಕೊ ಡತಕ್ಕುವು. ಎಲೈ ತಾಪಸೋತ್ತಮನೆ! ಮೋಕ್ಷಸಾಧಕವಾದ ಮಾರ್ಗವೇಬೇ