ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೪ ಶ್ರೀಮದ್ಭಾಗವತವು [ಅಧ್ಯಾ ೨. ಆದುದರಿಂದ ಈ ಜೀವನು ತನಗಾಯಶ್ರಭೂತನಾದ ಆ ಪರಮಾತ್ಮನನ್ನು ಆ ನುವರ್ತಿಸುವುದೇ ನ್ಯಾಯವು. ಆ ಪರಮಾತ್ಮನೇ ಜೀವಾತ್ಮನಿಗೆ ವಿಶೇಷ ಪ್ರೀತಿವಿಷಯನಾಗಿರಬೇಕಾದುದೂ ಯುಕ್ತವು. ಆ ಪರಮಾತ್ಮನು ನಿರತಿಶಯ ಸುಖಸ್ವರೂಪನು. ಆತನೇ ಪರಮಪುರುಷಾರ್ಥಸ್ವರೂಪನು. ಅಂತಹ ಭಗ ವಂತನನ್ನು ಸೇವಿಸಿ, ಆತನನ್ನು ಹೊಂದುವುದಕ್ಕೆ ವಿರೋಧಿಯಾದ ಅವಿದ್ಯೆ ಯ ಸಂಬಂಧವನ್ನು ತಪ್ಪಿಸಿಕೊಂಡು, ನಿರತಿಶಯಾನಂದಸ್ವರೂಪನಾದ ಭಗವಂತನ ಉಪಾಸನೆಯೆಂಬ ಪರಮಸುಖವನ್ನು ಹೊಂದಿ, ಫಲಾಂತರಗಳಲ್ಲಿ ವಿಮುಖನಾಗಿರಬೇಕು. ಇಂತಹ ಭಗವಂತನ ಚಿಂತೆಯನ್ನು ಬಿಟ್ಟು, ಫಲಾಂ ತರಗಳಲ್ಲಿ ಆಸೆಯಿಡುವವನು ಕೇವಲಪಶುಪ್ರಾಯನಲ್ಲದೆ ಬೇರೆಯಲ್ಲ. ಲೋ ಕದಲ್ಲಿ ಎಷ್ಟೋ ಮಂದಿ ಮೂಢರು, ಭಗವಂತನನ್ನು ಬಿಟ್ಟು, ಇವರ ವಸ್ತುಗ ಳಲ್ಲಿ ಆಸೆಯಿಟ್ಟು, ವೈತರಣಿನಡಿಯಂತಿರುವ ಸಂಸಾರದಲ್ಲಿ ಬಿದ್ದು, ತಮ್ಮ ತಮ್ಮ ಕರ್ಮಾನುಸಾರವಾಗಿ ಸಂಭವಿಸುವ ಆಧ್ಯಾತ್ಮಿಕಾದಿಬಾಧೆಗಳಲ್ಲಿ ಸಿಕ್ಕಿ ಶ್ರಮಪಡುವರು. ಇವರ ಸ್ಥಿತಿಯನ್ನು ನೋಡಿಯೂ ಆ ಮಾರ್ಗದಲ್ಲಿಯೇ ಪ್ರವರ್ತಿಸತಕ್ಕವನು ಪಶುವಲ್ಲದೆ ಬೇರೇನು ? ಜ್ಞಾನಿಯಾದ ಮನುಷ್ಯನೊ ಬ್ಬನೇ ಯಾವ ವಿಪತ್ತುಗಳಿಗೂ ಈಡಾಗದೆ, ತನ್ನ ಹೃದಯಾಕಾಶದಲ್ಲಿ ಅಡ ಗಿರುವ ಭಗವಂತನನ್ನು ಎಡೆಬಿಡದೆ ಸ್ತುತಿಸುತ್ತಿರುವನು. ಅಂತಹ ಜ್ಞಾನಿಗ ಳ ಹೃದಯಕಮಲದಲ್ಲಿರುವವನೇ ಪರಮಪುರುಷನಾದ ಆ ಭಗವಂತನು, ಆ ಪುರುಷನು ಶಂಖಚಕ್ರಗದಾಪದ್ಯಗಳಿಂದ ಶೋಭಿತಗಳಾದ ಚತರ್ಭುಜಗಳಿಂ ದೊಪ್ಪತ್ತಿರುವನು. ಅವನೇ ಪುಂಡರೀಕಾಕ್ಷನು. ಅವನ ಮುಖವು ಯಾವಾ ಗಲೂ ಪ್ರಸನ್ನ ವಾಗಿರುವುದು. ಆತನು ಧರಿಸಿದ ವಸ್ತ್ರವು ಕದಂಬಪಷ್ಟಗಳ ಕುಸುರಿಗಳಂತೆ ಹೊಂಬಣ್ಣದಿಂದೊಪ್ಪತ್ತಿರುವುವು. ಆತನ ತೋಳುಗಳು ರತ್ನಖಚಿತಗಳಾದ ಭುಜಕೀರ್ತಿಗಳಿಂದ ಪ್ರಕಾಶಿಸುತ್ತಿರುವುವ, ಆ ಮಹಾ ತ್ಯನ ಶಿರಸ್ಸಿನಲ್ಲಿ ಸುವರ್ಣಮಯವಾದ ಕೀರೀಟವು ಬೆಳಗುತ್ತಿರುವುದು, ಕಿವಿ ಗಳು ಕುಂಡಲಗಳಿಂದ ಶೋಭಿಸುತ್ತಿರುವುವು.ಆ ಮಹಾತ್ಮನ ಪಾದಪಲ್ಲವಳಗ ನೈ ಯೋಗೀಶ್ವರರೆಲ್ಲರೂ ಉಲ್ಲಾಸವಿಶಿಷ್ಟವಾದ ತಮ್ಮ ಹೃದಯಕಮಲ ದಲ್ಲಿಟ್ಟು ಪೂಜಿಸುತ್ತಿರುವರು, ಆ ಮಹಾತ್ಮನ ವಕ್ಷಸ್ಥಲವು ಶ್ರೀವತ್ಸವೆಂಬ 62