ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೫ ಅಧ್ಯಾ, ೨.) ದ್ವಿತೀಯಸ್ಕಂಧವು. ಮಚ್ಚೆಯಿಂದಲೂ, ಆತನ ಕಂಠಪ್ರದೇಶವು ಕ ಶಾಸ್ತುಭರತ್ನದಿಂದಲೂ ಪ್ರ ಕಾಶಿಸುತ್ತಿರುವುದು. ಶಂಖವನ್ನು ಹೋಲುತ್ತಿರುವ ಆತನ ಕಂಠವು ವಸ ಮಾಲಿಕೆಯಿಂದಲೂ, ಆತನ ಕಟಿಪ್ರದೇಶವು ಅಂದವಾದ ಕಟಿಸೂತ್ರ ಬಂದಲೂ, ಆತನ ಬೆರಳುಗಳು ಬೆಲೆಯುಳ್ಳ ಉಂಗುರಗಳಿಂದಲೂ ಒಪ್ಪ ತಿರುವುವು. ಆತನ ಮುಂಗೈಗಳು ಮನೋಹರಗಳಾದ ಕೈಬಳೆಗಳಿಂದಲೂ, ಆತನ ವಾದಗಳ ಅಂದವಾದ ಕಾಲಂದುಗೆಯಿಂದಲೂ ಶೋಭಿಸುತ್ತಿರುವು ದು. ಆ ಮಹಾತ್ಮನ ಮುಖವು ಸುರುಳಿಗಟ್ಟಿದ ಸೀಲಕುಂತಲಗಳಿಂದಲೂ, ಮಂ ದಹಾಸದಿಂದಲೂ ಪ್ರಕಾಶಿಸುತ್ತಿರುವುದು. ಆ ಮಹಾಪುರುಷನು, ತಪ್ಪ ದೃ ಷಿಯಿಂದಲೂ, ಹುಬ್ಬಿನಾಟಗಳಿಂದಲೂ ಕರುಣಾರಸವನ್ನು ಸುರಿಸುತಿರು ವನು. ಎಲೈ ಪರೀಕ್ಷಿದ್ರಾಜನೆ ! ಮನುಷ್ಯನು ಧಾರಣಶಕ್ತಿಯಿಂದ ಎಷ್ಟು ಕಾಲದವರೆಗೆ ತನ್ನ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಬಲ್ಲನೋ ಅದುವರೆಗೂ ಇಂತಹ ಸಶ್ವರನ ಮನೋಹರಾಕಾರವನ್ನು ಜ್ಞಾನದೃಷ್ಟಿಯಿಂದ ನೋಡುತ್ತಿರಬೇಕು. ಹೀಗೆ ಆ ಪರಮಪುರುಷನ ಹವ್ಯಸ್ವರೂಪದಲ್ಲಿ ಅಂಗು ಜ್ಞದಿಂದ ಹಿಡಿದು, ಮುಖಪಠ್ಯಂತವಾಗಿ ಒಂದೊಂದವಯವವನ್ನೂ ಬೇರೆಬೇರೆಯಾಗಿ ಮನಸ್ಸಿನಲ್ಲಿಟ್ಟುಕೊಂಡು ಧ್ಯಾನಿಸುತ್ತಿದ್ದು, ಈ ಭಾವನೆ ಯಿಂದ ಯಾವ ಯಾವ ಅವಯವಸೌಂದಯ್ಯವು ಮನಸ್ಸಿನಲ್ಲಿ ದೃಢಪಡುವು ದೋ, ಅದನ್ನು ಬಿಟ್ಟು ಕ್ರಮವಾಗಿ ಮುಂದುಮುಂದಿನ ಅವಯವಗಳನ್ನು ಭಾವನೆಗೆ ತಂದುಕೊಂಡು, ತನ್ನ ಬುದ್ಧಿಯು ಪ್ರಸನ್ನ ವಾಗುವವರೆಗೆ ಧಾರೆ ಣಾಯೋಗದಿಂದ ಅವುಗಳನ್ನು ಧ್ಯಾನಿಸುತ್ತ ಬರಬೇಕು.ಹೀಗೆ ದಿವ್ಯಾತ್ಮ ಸ್ವ ರೂಪದ ಒಂದೊಂದವಯವವನ್ನೂ ಪ್ರತ್ಯೇಕವಾಗಿ ಧ್ಯಾನಿಸಿ, ಬುದ್ಧಿಯನ್ನು ನಿಷ್ಕಲ್ಮಷವಾಗಿ ಮಾಡಿಕೊಂಡಮೇಲೆಯೂ ಬಿಡಬಾರದು. ಸರೇಶ್ವರನಾಗಿ ಯೂ,ಬ್ರಹ್ಮಾದಿದೇವತೆಗಳಿಗಿಂತಲೂ ಉತ್ತಮನಾಗಿಯೂ,ಸತ್ವನಿಯಾಮಕ ನಾಗಿಯೂ ಇರುವ ಆ ಭಗವಂತನಲ್ಲಿ ದೃಢವಾದ ಭಕ್ತಿಯೋಗವು ಹುಟ್ಟಲಾ ರಂಭಿಸುವವರೆಗೂ,ಮುಮುಕ್ಷುವಾದವನು ತನಗೆ ಅವಶ್ಯಕವೆನಿಸಿದ ಅನುಷ್ಠಾ ನವನ್ನು ಮುಗಿಸಿಕೊಂಡಮೇಲೆ, ಆ ದಿವ್ಯಾತ್ಮ ಸ್ವರೂಪದ ಸ್ಕೂಲಾಕೃತಿಯ ನ್ನು (ವಿರಾಡೂಪವನ್ನು) ದೃಢಮನಸ್ಸಿನಿಂದ ಧ್ಯಾನಿಸಬೇಕು. ಹೀಗೆ 15