ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೬ ಶ್ರೀಮದ್ಭಾಗವತವು [ಅಧ್ಯಾ, ೨ ಯೋಗಿಯಾದವನು ಪೂರ್ಣವಾದ ಭಕ್ತಿಯೋಗವನ್ನು ಸಂಪಾದಿಸಿ, ಈ ಶರೀ ರಕ್ಕೆ ಕಾರಣವಾದ ತನ್ನ ಪ್ರಾರಬ್ಬಕರವೂ ಮುಗಿಯುತ್ತ ಬಂದಮೇಲೆ, ಕಾಲದೇಶಗಳೊಂದನ್ನೂ ಗಮನಿಸದೆ, ದೇಹತ್ಯಾಗಕ್ಕೆ ನಿಶ್ಚಯಿಸಿ, ನಿರಾತಂಕ ವಾದ ಸ್ಥಳದಲ್ಲಿ ಸುಖವಾಗಿ ಕುಳಿತು, ಪ್ರಾಣಿಗಳನ್ನೂ, ಇಂದ್ರಿಯಗಳನ್ನೂ ನಿರ್ಬಂಧಿಸಿಡಬೇಕು. ಭಗವದುಪಾಸನದಿಂದ ಪಾಪವನ್ನು ನೀಗಿ ನಿಷ್ಕಲ್ಮ ಷವಾಗಿರುವ ಬುದ್ಧಿಯಿಂದ ಮನಸ್ಸನ್ನು ಕಟ್ಟಿ, ಆ ಬುದ್ಧಿಯನ್ನು ಕ್ಷೇತ್ರಜ್ಞ ನೆನಿಸಿದ ಜೀವಾತ್ಮನಲ್ಲಿ ಸೇರಿಸಿಡಬೇಕು,ಹೀಗೆ ಜೀವಾತ್ಮನನ್ನು ಪರಮಾತ್ಮನ ಲ್ಲಿ ಸಮರ್ಪಿಸಿದ ಮೇಲೆ, ಬ್ರಹ್ಮಪದದಲ್ಲಿ ಬ್ರಹ್ಮಾನಂದಸುಖವನ್ನ ನುಭವಿಸು ತ, ಸಮಸ್ತಕಗಳಿಂದಲೂ ನಿವೃತ್ತನಾಗುವನು. ಎಲೈ ಪರೀಕ್ಷೆ ಪ್ರಾಜ ನೆ ! ಸಮಸ್ತಲೋಕಗಳನ್ನೂ ನಿಯಮಿಸತಕ್ಕ ಬ್ರಹ್ಮಾದಿದೇವತೆಗಳೂ ಕೂಡ ಕಾಲಕ್ಕೆ ವಶವಾಗಿರುವರು. ಇನ್ನು ದೇವತೆಗಳಿಗಾಗಲಿಮನುಷ್ಯರಿಗಾಗಲಿ, ಆ ದರಮೇಲೆ ಯಾವಶಕ್ತಿಯೂ ಸಾಗದೆಂಬುದನ್ನು ಹೇಳತಕ್ಕದೇನು ? ಆ ಕಾಲ ವಾದರೂ ಬ್ರಹ್ಮ ಪದದಲ್ಲಿ ಯಾವಕಾರವನ್ನು ಸಾಧಿಸುವುದಕ್ಕೂ ಸಮರ್ಥ ವಲ್ಲ. ಆ ಬ್ರಹ್ಮಪದವೆಂಬುದು ಕೇವಲಶುದ್ಧಸತ್ವಮಯವಾದುದು. ಮಿಶ್ರಸ ತ್ವಗುಣಕ್ಕಾದರೂ ಅಲ್ಲಿ ಪ್ರವೇಶವಿಲ್ಲ.ಹೀಗಿರುವಾಗ ರಜಸ್ತಮೋಗುಣಗಳಿಗಾ ಗಲಿ, ಆದರಿಂದುಂಟಾಗಿರುವ ದೇವಮನುಷ್ಯಾರಗಾಗಲಿ, ಅಲ್ಲಿ ಪ್ರವೇಶವೆಲ್ಲಿಯ ದು?ಇವುಗಳ ವಿಷಯವೂ ಹಾಗಿರಲಿ!ಸಮಸ್ತಪ್ರಪಂಚದ ಸೃಷ್ಟಿಗೆ ಕಾರಣ ಭೂತವಾದ ಪ್ರಕೃತಿಯಾಗಲಿ, ಆ ಪ್ರಕೃತಿಗುಣಗಳಾದ ಸತ್ವರಜಸ್ತಮಸ್ಸು ಗಳಾಗಲಿ,ಆ ಗುಣ ಕಾರ್ಯಗಳಾದ ಮಹದಹಂಕಾರಗಳಾಗಲಿ,ಅಲ್ಲಿ ತಮ್ಮ ಕಾ ರ್ಯವನ್ನು ನಡೆಸುವುದಕ್ಕೆ ಸಮರ್ಥವಲ್ಲ. ಆ ಪರಬ್ರಹ್ಮವು ಅಪ್ರಾಕೃತವೆನಿ ಸಿರುವುದು. ಎಲೈ ರಾಜನೆ! ಮತ್ತೊಂದು ವಿಷಯವನ್ನು ಹೇಳುವೆನು ಕೇಳು. ವೇದಾಂತಗಳೆಲ್ಲವೂ ವಿಷ್ಣು ಸ್ಥಾನವಾದ ಪರಮಪದವೇ ನಮಗೆ ಪ್ರಾಪ್ಯವೇ ದು ಹೇಳುತ್ತಿರುವುವು.ಮತ್ತು ಬ್ರಹ್ಮಾತ್ಮಕವಿಲ್ಲದ ಸ್ವತಂತ್ರವಸ್ತುವೊಂದ ದರೂ ಪ್ರಪಂಚದಲ್ಲಿ ಇಲ್ಲವೇ ಇಲ್ಲವೆಂದೂ ಬೋಧಿಸುತ್ತಿರುವುವು. ಮತ್ತು ನಮಗೆ ಪ್ರಾಚ್ಯವಾದ ಆ ವಿಷ್ಣು ಸ್ವರೂಪವೇ ಕಾಲಾದಿಗಳಿಗೂ ನಿಯಾಮಃ ವಾಗಿರುವುದೆಂದೂ, ಅದಕ್ಕೆ ಸತ್ಯಾದಿಗುಣಕಾರಗಳ ಸಂಬಂಧವಿಲ್ಲವೆಂದು