ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೨.] ದ್ವಿತೀಯಸ್ಕಂಧವು. ೨೨೯ ಹೋಗತಕ್ಕ ಕ್ರಮವನ್ನೂ ಹೇಳುವೆನು ಕೇಳು. ಮುಮುಕ್ಷುವಾದವನು ತನ್ನ ಹೃದಯಕಮಲದಲ್ಲಿರುವ ಪರಮಾತ್ಮನ ಅನುಗ್ರಹಕ್ಕೆ ಪಾತ್ರನಾದೊಡನೆ, ಆ ಜೀವಕ್ಕೆ ಸ್ಥಾನಭೂತವಾದ ಹೃದಯಕಮಲದ ಅಗ್ರಭಾಗದಲ್ಲಿರುವ ಸುಷುಮ್ಮೆ ಯೆಂಬ ನಾಡಿಯ ದ್ವಾರವು ಪ್ರಕಾಶವಾಗಿ ತೆರೆಯಲ್ಪಡುವುದು. ಬ್ರಹ್ಮ ಪ್ರಾಪ್ತಿಗೆ ಇದೇ ದಾರಿಯೆನಿಸಿರುವುದು. ಈ ಮಾರ್ಗವಾಗಿ ದೇಹ ವನ್ನು ಬಿಟ್ಟು ಹೊರಟು, ಅಲ್ಲಿಂದ ಶೀರ್ಷಕಪಾಲಕ್ಕೆ ಹೊರಗಿರುವ ಆಕಾಶ ಮಾರ್ಗವಾಗಿ, ಆರಿಶ್ಯಬ್ದ ವಾಚ್ಯವಾದ ಅಗ್ನಿ ಯನ್ನು ಹೊಂದುವನು. ಅಲ್ಲಿ ಇ ವನಿಗೆ ಪುಣ್ಯಪಾಪಕಮ್ಮಗಳೆಲ್ಲವೂ ಬಿಟ್ಟು ಹೋಗುವುವು. ಈ ವಿಧವಾದ ಕವಿಮೋಚನವು ಧೂಮಾದಿಗತಿಯನ್ನವಲಂಬಿಸತಕ್ಕವರಿಗೆ ಸಂಭ ವಿಸದು. * ಈ ಕರವಿಮೋಚನವಾದಮೇಲೆ ಆತನು ಸೂರನಿಗೆ ಉಪರಿ ಭಾಗದಲ್ಲಿರುವ ಶಿಂಶುಮಾರಚಕ್ರವನ್ನು ಹೊಂದುವನು. ಈ ಚಕ್ರವು ವಿಷ್ಣು ವಿಗೆ ಸ್ಥಾನಭೂತವಾದುದು. ಮತ್ತು ಬ್ರಹ್ಮಜ್ಞಾನಿಗಳೆಲ್ಲರಿಗೂ ನಮಸ್ಕಾ ರಾರ್ಹವಾದುದು. ಗ್ರಹ ತಾರಕ ನಕ್ಷತ್ರಾದಿಗಳೆಲ್ಲಕ್ಕೂ ಆಶ್ರಯಭೂತವಾ ದುದು. ಮುಮುಕ್ಷುವು ಈ ಶಿಂಶುಮಾರಚಕ್ರವನ್ನ ತಿಕ್ರಮಿಸಿ, ಪುಣ್ಯಪಾಪ ರಹಿತವಾಗಿಯೂ, ಅತಿಸೂಕ್ಷವಾಗಿಯೂ ಇರುವ ಲಿಂಗಶರೀರದೊಡನೆ ಅಸಹಾಯನಾಗಿ ಒಬ್ಬನೇ ಹೋಗುತ್ತ, ಕಲ್ಪಾಂತದವರೆಗೆಮಾತ್ರವೇ ಆ ಯುಃಪ್ರಮಾಣವುಳ್ಳ, ದೇವತೆಗಳಿಗೆ ವಿಹಾರಸ್ಥಾನವಾದ ಜನಲೋಕವನ್ನು ಸೇರುವನು. ಈ ಲೋಕವು ಅವಾಂತರಪ್ರಳಯಕಾಲದಲ್ಲಿ ಆದಿಶೇಷನ ವಿ ಷಾಗ್ನಿಯಿಂದ ದಗ್ಧವಾಗಿ ನಾಶಹೊಂದುವುದೆಂದು ತನ್ನ ಜ್ಞಾನದೃಷ್ಟಿ ಯಿಂದ ತಿಳಿದು, ಅಲ್ಲಿ ನಿಲ್ಲದೆ ಒಡನೆಯೇ ಚತುರುಖಲೋಕವನ್ನು ಸೇರು ವನು. ಈ ಲೋಕವು ಸ್ವರ್ಗಾದಿಲೋಕಗಳಿಗಿಂತಲೂ ಹೆಚ್ಚು ಕಾಲವಿರತಕ್ಕು ದಾದರೂ, ಎರಡು ಪರಾರ ಕಾಲಕ್ಕಿಂತಲೂ ಹೆಚ್ಚಾಗಿ ನಿಲ್ಲತಕ್ಕುದಲ್ಲ. ಆದರೆ ಆ ಲೋದಲ್ಲಿ ದುಃಖವಾಗಲಿ, ಕಳವಳವಾಗಲಿ, ಬೇರೆ ಮನೋವಿಕಾರಗ ಳಾಗಲಿ, ಭಯವಾಗಲಿ, ಚಳಿ, ಗಾಳಿ, ಮಳೆ, ಬಿಸಿಲುಗಳಿಂದುಂಟಾಗುವ ಬಾ

  • ಈ ಶಿಂಶುಮಾರಚಕ್ರಸ್ವರೂಪನು ಮುಂದೆ ಐದನೆಯ ಸ್ಕಂಧದಲ್ಲಿ ವಿವರ ವಾಗಿ ತಿಳಿಸಲ್ಪಡುವುದು.