ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ರೆ! ಅದು ಕೇವಲಗೋಪ್ಯವಾಗಿರುವುದು, ಅದನ್ನು ಪದೇತಿಸತಕ್ಕ ಮಹಾಪು ರುಷನೂಕೂಡ ಭಾಗ್ಯದಿಂದಲ್ಲದೆ ಲಭಿಸಲಾರನು. ಮೊದಲು ಆಕಾಶವಾಣಿ ಯು ನಿನಗೆ ಯಾವ ಸತ್ಕರ್ಮವನ್ನು ಸಾಧಿಸಬೇಕೆಂದು ಸೂಚಿಸಿತೋ ಅದ ನ್ನು ಈಗ ನಾವು ವ್ಯಕ್ತವಾಗಿ ತಿಳಿಸುವೆವು ಕೇಳು. ಲೋಕದಲ್ಲಿ ದ್ರವ್ಯಯಜ್ಞ ಗಳೆಂದೂ, ತಪೋಯಜ್ಞಕಳೆಂದೂ, ಯೋಗಯಜ್ಞಗಳೆಂದೂ, ವೇದಾಧ್ಯ ಯನಗಳೆಂದೂ ಅನೇಕಸತ್ಕರ್ಮಗಳುಂಟು. ಇವೆಲ್ಲಕ್ಕಿಂಕಲೂ ಜ್ಞಾನಯ ಜ್ಯವೆಂಬುದೇ ಸರೊತ್ತಮವು- ಪೂಲ್ಯದಲ್ಲಿ ಶುಕಾದಿಮಹರ್ಷಿಗಳಿಂದ ಹೇಳ ಲ್ಪಟ್ಟ ಭಾಗವತಕಥಾಪ್ರಸಂಗವೇ ಈ ಜ್ಞಾನಯಜ್ಯಗಳಲ್ಲಿ ಅತ್ಯುತ್ತಮವೆ ನಿಸಿಕೊಳ್ಳುವುದು. ಅದರಿಂದ ಭಕ್ತಿಜ್ಞಾನವೈರಾಗ್ಯಗಳಿಗೂಪೂರ್ಣವಾದಬಲ ವುಂಟಾಗುವುದು ಈ ಭಾಗವತಪ್ರಸಂಗವನ್ನು ಕೇಳಿದೊಡನೆ ಸಿಂಹಗರ್ಜನೆ ಯನ್ನು ಕೇಳಿದ ನರಿಗಳಂತೆ ಈಗಿನ ಕಲಿದೋಷಗಳೆಲ್ಲವೂ ಓಡಿಹೋಗುವುವು. ಈಕಥಾಪ್ರಸಂಗವೆಂಬ ಜ್ಞಾನಯಜ್ಞವನ್ನು ಸಾಧಿಸಿದೊಡನೆಪ್ರತಿಯೊಂದು ಮನೆಯಲ್ಲಿಯೂ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಭಕ್ತಿಯೆಂಬುದು ನಲಿದಾ ಡುತ್ತಿರುವುದು.”ಎಂದರು.ಇದನ್ನು ಕೇಳಿ ನಾರದನು ತಿರುಗಿ ಋಷಿಕುಮಾರ ರನ್ನು ಕುರಿತು 'ಎಲೈ ಮಹಾತ್ಮರೆ ! ನಾನು ಹಿಂದೆ ಎಷ್ಟೆಷ್ಟೋ ವಿಧದಿಂದ ವೇದವೇದಾಂತಗಳನ್ನೂ, ಗೀತಾವಾಕ್ಯಗಳನ್ನೂ ಉಪದೇಶಿಸಿ, ಆ ಜ್ಞಾನವೈ ರಾಗ್ಯಗಳನ್ನು ಎಚ್ಚರಿಸುವುದಕ್ಕೆ ಪ್ರಯತ್ನಿಸಿದೆನು. ಆ ನನ್ನ ಪ್ರಯತ್ನ ವೊಂ ದೂ ಕೈಗೂಡಲಿಲ್ಲ. ಹೀಗಿರುವಾಗ ಈ ಭಾಗವತಕಥಾಪ್ರಸಂಗದಿಂದಮಾ ತ್ರ ಅವರಿಗೆ ಪ್ರಜ್ಞೆಯುಂಟಾಗುವುದು ಹೇಗೆ? ಆ ಭಾಗವತಕಥೆಯಲ್ಲಿಯಾದ ರೂ ಪ್ರತಿಶೋಕದಲ್ಲಿಯೂ, ಪ್ರತಿಪದದಲ್ಲಿಯೂ ವೇದಾರ್ಥಗಳಲ್ಲದೆ ಬೇರೆ ಯಲ್ಲ ! ಹೀಗಿರುವಾಗ ವೇದಾಂತಗಳಿಗಿಂತಲೂ ಗೀತಾವಾಕ್ಯಗಳಿಗಿಂತಲೂ ಭಾಗವತಕಥೆಯಲ್ಲಿರುವವಿಶೇಷವೇನೆಂದು ನನಗೆ ಸಂದೇಹವುಹುಟ್ಟಿರುವುದು. ಈ ಸಂದೇಹವನ್ನು ಪರಿಹರಿಸಬೇಕು”ಎಂದನು. ಅದಕ್ಕಾ ಋಷಿಕುಮಾರರು ((ಎಲೈ ಮಹರ್ಷಿಯೇ! ಕೇಳು! ವೇದೋಪನಿಷತ್ತುಗಳ ಮುಖ್ಯಸಾರವೇ ಈ ಭಾಗವತಕಥಾರೂಪವಾಗಿ ಹುಟ್ಟಿರುವುದು. ಅದರಿಂದಲೇ ಈ ಕಥೆಯು ಅವಕ್ಕಿಂತಲೂ ಅತ್ಯುತ್ತಮವೆನಿಸಿಕೊಂಡಿರುವುದು. ಇದರಿಂದುಂಟಾಗತಕ್ಕ