ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

31 ಅಧ್ಯಾ, ೨.} ದ್ವಿತೀಯಸ್ಕಂಧವು ೨೩೧ ಣವನ್ನು ಭೇದಿಸುವಾಗಲೂ, ಹೀಗೆ ತನ್ನ ಇಂದ್ರಿಯಗಳಿಂದ ಆಯಾಭೂತ ಗುಣವನ್ನು ಗ್ರಹಿಸುತ್ತ ಹೋಗುವುದಲ್ಲದೆ, ಅಂತಹ ಯೋಗಿಯು ಆಕಾಶಾ ದಿಭೂತಗಳಿಗೂ, ಶಬ್ದಾದಿತನಾತ್ರಗಳಿಗೂ, ಜ್ಞಾನಕರ್ಮೇಂದ್ರಿಯಗಳಿ ಗೂ ಕಾರಣವಾಗಿ, ಮತ್ತು ತನ್ನ ಕಾವ್ಯದಿಂದಲೇ ತಾನು ಮಾರ್ಪಡುತ್ತ, ದಿಕ್ಕು, ವಾಯು, ಮುಂತಾದ ದೇವತೆಗಳಿಂದಧಿಷ್ಟಿತಗಳಾದ ಇಂದ್ರಿಯಗ ಗೂ ಕಾರಣವಾಗಿ, ಸಾತ್ವಿಕ, ರಾಜಸ ತಾಮಸಗಳೆಂಬ ಮೂರು ವಿಭಾಗಗಳು ಕೃ ಅಹಂಕಾರತತ್ವವನ್ನು ಸೇರಿ, ಅದರೊಡನೆ ಸೇರಿದಂತೆಯೇ ವಿಜ್ಞಾನ ವೆಂಬ ಹೆಸರುಳ್ಳ ಮಹಾತಾವರಣನ್ನು ಹೊಂದುವನು. ಅಲ್ಲಿಂದಾ ಚೆಗೆ ಸತ್ವರಜಸ್ತಮೋಗುಣಗಳ ಸಮಸ್ಥಿತಿಗೆ ಆಶ್ರಯವಾದ ಪ್ರಕೃತಿ ಗೆ ಬಂದು ಸೇರುವನು. ಅಲ್ಲಿಂದ ಹೊರಟು, ಅದರ ಎಲ್ಲೆಯನ್ನು ದಾಟಿ ದೊಡನೆ, ಪುಣ್ಯಪಾಪಸಂಬಂಧವಿಲ್ಲದೆ ಪರಿಶುದ್ಧವಾಗಿರುವ ಸೂಕ್ಷ್ಮರೂಪ ವನ್ನು ಹೋಲು, ಹಸಿವು ಬಾಯಾರಿಕೆ ಮೊದಲಾದ ವಿಕಾರಗಳೊ೦ದಕ್ಕೂ ಈ ಡಾಗದ ನಿತ್ಯಾನಂದಸ್ವರೂಪನಾದ ಪರಮಾತ್ಮನನ್ನು ಅದೇ ವಿಧವಾದ ಆ ನಂದದೊಡನೆ ಬಂದುಸೇರುವನು ಎಲ್ಯ ಪರೀಕ್ಷಿದ್ರಾಜನಿ! ನಾನು ಹೇಳಿದ ಈ ಅರ್ಚಿರಾಮಮಾರ್ಗವನ್ನು ಪರಮಭಾಗವತೋತ್ತಮರೆಲ್ಲರೂ ಅತ್ಯಾದಿ ರದಿಂದ ಅನುಸರಿಸುವರು. ಈ ಮಾರ್ಗವನ್ನು ಹಿಡಿದು ಮುಕ್ತಿ ಹೊಂದಿದ ವನು ಪುನರ್ಜನ್ಮವಿಲ್ಲದೆ ಪರಮಾನಂದವನ್ನನುಭವಿಸುತ್ತಿರುವನೆಂಬುದಕ್ಕೆ ಎಷ್ಟು ಮಾತ್ರವೂ ಸಂದೇಹವಿಲ್ಲ. ಎಲೈ ರಾಜೇಂದ್ರನೆ: ನೀನು ತಿಳಿಯಬೇಕಾ ದ ವಿಷಯಗಳೇನೆಂದು ಕೇಳಿದೆಯಲ್ಲವೆ ? ಇದೇ ಸೀನು ಕೇಳಿ ತಿಳಿಯಬೇಕಾ ದ ಮುಖ್ಯ ವಿಷಯವು! ಅದನ್ನೇ ನಾನೂ ನಿನಗೆ ತಿಳಿಸಿರುವೆನು. ಧೂಮಾದಿಗ ತಿಯೆಂದೂ, ಅರ್ಚಿರಾದಿಗತಿಯೆಂದೂ ಹೇಳಲ್ಪಡುವ ಈ ಮಾರ್ಗಗಳೆರಡೂ ವೇದಗಳಲ್ಲಿ ವಿವರಿಸಲ್ಪಟ್ಟು ಅನಾದಿಯಾಗಿ ಬಂದಿರುವುವು. ಪೂತ್ವದಲ್ಲಿ ಬ್ರಹ್ಮದೇವನಿಂದ ಆರಾಧಿಸಲ್ಪಟ್ಟ ಶ್ರೀವಾಸುದೇವನು, ಅವನಲ್ಲಿ ಪ್ರಸನ್ನ ನಾಗಿ, ಈ ವಿವರಗಳೆಲ್ಲವನ್ನೂ ತಿಳಿಸಿದನು. ಸಂಸಾರಿಗಳಿಗೆ ಅರ್ಚಿರಾದಿಮಾ ರ್ಗಕ್ಕಿಂತಲೂ ಉತ್ತಮವಾದ ಮಾರ್ಗವಿಲ್ಲ. ಇದರ ಸ್ವರೂಪವನ್ನು ನೆನೆಸಿ ಕೊಂಡಾಗಲೇ ವಾಸುದೇವನಲ್ಲಿ ಭಕ್ತಿಯು ಜನಿಸುವುದು. ಇದಲ್ಲದೆ ಬ್ರಹ್ಮ