ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೨ ಶ್ರೀಮದ್ಭಾಗವತವು ಅಧ್ಯಾ, ೩೦ ದೇವನು ವೇದಗಳೆಲ್ಲವನ್ನೂ ಮೂರಾವರ್ತಿ ಮಗುಚಿನೋಡಿ, ಕೊನೆಗೆ ಮೋ ಕ್ಷವನ್ನು ಪಡೆಯುವುದಕ್ಕೆ ಭಕ್ತಿಗಿಂತಲೂ ಸುಲಭವಾದ ಬೇರೆ ಉಪಾಯ ವಿಲ್ಲವೆಂದು ನಿರ್ಧರಿಸಿರುವನು. ಈ ಭಕ್ತಿ ಮಾರ್ಗವನ್ನು ಹಿಡಿಯುವುದರಿಂದ ವಾಸುದೇವನೆಂಬ ವಿಕಾರಕೂನನಾದ ಪರಬ್ರಹ್ಮನಲ್ಲಿ ಪೂರ್ಣಾನುರಾಗವು ಹುಟ್ಟದಿರದು. ಆದರೆ ಅನುಭವಿಸಿಕಂಡ ವಿಷಯಗಳಲ್ಲಿ ಅನುರಾಗವು ಹು ಟ್ಯಬಹುದೇಹೊರತು, ಯಾವಾಗಲೂ ಕಂಡು ಕೇಳದ ಬ್ರಹ್ಮದಲ್ಲಿ 64 ನುಗ್ಗಾ ಗವು ಹುಟ್ಟುವುದು ಹೇಗೆ” ಎಂದು ನೀನು ಶಂಕಿಸಬಹುದು. ಎಲೈ ರಾಜನೆ! ಅದಕ್ಕೂ ತಕ್ಕೆ ಸಮಾಧಾನವನ್ನು ಹೇಳುವೆನು ಕೇಳು : ಶ್ರೀಹರಿಯು ಸರ ಭೂತಗಳಲ್ಲಿಯೂ ಅಂತರಾತ್ಮನಾಗಿದ್ದು, ಯಾವಾಗಲೂ ಪ್ರಕಾಶಿಸುತ್ತಿರು ವನು. ಮಹದಾದಿಕಾರಗಳಿಂದಲೂ ತನ್ನ ಶಕ್ತಿಯನ್ನು ಕಾಣಿಸುತ್ತಿರುವನು, ವೇದಗಳಿಂದಲೂ ಅವನ ಗುಣಗಳು ಹೊರಪಡುತ್ತಿರುವುವು. ಹೀಗಿರುವಾಗ ಆ ಭಗವಂತನಲ್ಲಿ ಅನುರಾಗವು ಹುಟ್ಟುವುದೊಂದು ಹೆಜ್ಜೆ ! ಎಲೈ ರಾಜೇಂ ದ್ರನೆ! ನಾವು ಸತ್ವವಿಧದಿಂದಲೂ ಅಂತಹ ಭಗವಂತನನ್ನು ಎಡೆಬಿಡದೆ ಧ್ಯಾ ನಿಸುತ್ತ, ಯಾವಾಗಲೂ ಆತನ ರೂಪವನ್ನೇ ಸ್ಮರಿಸುತ್ತ, ಕ್ಷಣಕ್ಷಣಕ್ಕೂ ಆತನಿಗೆ ನಮಸ್ಕರಿಸುತ್ತ, ಸಕಾಲಗಳಲ್ಲಿಯೂ ಆತನ ಕಥೆಗಳನ್ನು ಕೇಳು ತಿರಬೇಕು ಹೀಗೆ ಶ್ರೀಹರಿಕಥಾಮೃತವನ್ನು ಪಾನಮಾಡಿದವರು, ಮಲಿನ ವಾದ ಈ ದೇಹವನ್ನು ತೊರೆದು, ನಿತ್ಯಾನಂದಮಯವಾದ, ಮತ್ತು ಎಂದಿ ಗೂ ಸಾವಿಲ್ಲದ ರೂಪವನ್ನು ಹೊಂದಿ, ಶ್ರೀವಾಸುದೇವನ ಪಾದಾರವಿಂದವ ನ್ನು ಸೇರುವರು. ಇಲ್ಲಿಗೆ ಎರಡನೆಯ ಅಧ್ಯಾಯವು. ( ಶುಕನು ಪರೀಕ್ಷಿತಿಗೆ ಹರಿಭಕ್ತಿ ಮಾರ್ಗದ ಪ್ರಾಶಸ್ತ್ರ) ವನ್ನೂ, ಆಹರಿಯೊಬ್ಬನೇ ಮೋಕ್ಷಾದಿ ಸಫಲಪ್ರದ + ನೆಂದೂ ತಿಳಿಸಿದುದು, ತಿರುಗಿ ಶುಕಮುನಿಯು ಪರಿಕ್ಷಾಹಾರಾಜನನ್ನು ಕುರಿತು, ಎಲೈ ರಾಜನೆ ! ಲೋಕದಲ್ಲಿ ಮನುಷ್ಯ ಜನ್ಮವೇ ದುರ್ಲಭವು. ಅದೃಷ್ಟವಶದಿಂದ ಒಂದುವೇಳೆ ಮನುಷ್ಯನಾಗಿ ಹುಟ್ಟಿದರೂ, ಅವನಲ್ಲಿ ಸರಿಯಾದ ಬುದ್ಧಿಯು