ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨&೩ ಅಧ್ಯಾ. ೩.] ದ್ವಿತೀಯಸ್ಕಂಧವು. ಇವರು ವಿರಳರು. ಮನುಷ್ಯ ಜನ್ಮದಲ್ಲಿ ಹುಟ್ಟಿ ವಿವೇಕಿಯಾಗಿಯೂ ಇರು ವವನು, ಮರಣಕಾಲದಲ್ಲಿ ಮಾಡಬೇಕಾದ ಕಾವ್ಯಗಳೇನೆಂದು ಕೇಳಿದೆಯಷ್ಟೆ? ಇದುವರೆಗೆ ಹೇಳಿದ ವಿಷಯಗಳಿಂದ ಆ ವಿಷಯವನ್ನು ನಿನಗೆ ಹೇಳಿತಿಳಿಸಿ ದೆನು. ಇನ್ನು ಕಾಮಿಗಳಾಗಿ ಇತರಫಲಗಳನ್ನ ಪೇಕ್ಷಿಸುವವರು ಬೇರೆ ಯಾವ ದೇವತೆಗಳನ್ನು ಹೇಗೆ ಭಜಿಸಬೇಕೆಂಬುದನ್ನೂ ತಿಳಿಸುವೆನು ಕೇಳು. ಬ್ರಹ್ಮ ತೇಜಸ್ಸನ್ನ ವೀಕ್ಷಿಸುವವನು, ವೇದಗಳಿಗೆ ಪತಿಯಾದ ಬ್ರಹ್ಮದೇವನನ್ನು ಉಪಾಸನೆ ಮಾಡಬೇಕು ಹಾಗೆಯೇ ಇಂದ್ರಿಯಬಲವನ್ನಪೇಕ್ಷಿಸುವವನು ಇಂದ್ರನನ್ನೂ, ಸಂತಾನಾಪೇಕ್ಷೆಯುಳ್ಳವನು ದಕ್ಷನೇ ಮೊದಲಾದ ಪ್ರಜಾ ಧಿಪತಿಗಳನ್ನೂ , ತ್ರೀಯನ್ನ ಪೇಕ್ಷಿಸತಕ್ಕವನು ಆದ್ಭುತಶಕ್ತಿಯುಳ್ಳ ವಿಷ್ಣು ಪತ್ನಿ ಯನ್ನೂ, ತೇಜಸ್ಸನ್ನು ಕೋರುವವನು ಸೂಯ್ಯನನ್ನೂ , ಅರ್ಥದಲ್ಲಿ ಆಸೆ ಯುಳ್ಳವನು ಅಷ್ಟವಸುಗಳನ್ನೂ, ವೀರವನ್ನು ಕೋರುವವನು ರುದ್ರದೇ ವತೆಗಳನ್ನೂ, ಅನ್ನಾ ಪೇಕ್ಷೆಯುಳ್ಳವನು ಅದಿತಿಯನ್ನೂ , ಸ್ವರ್ಗವನ್ನು ಕೋ ರುವವನು ಆದಿಪುತ್ರರನ್ನೂ ಭಜಿಸಬೇಕು. ರಾಷ್ಟ್ರವನ್ನು ಕೋರುವವನು ವಿಶ್ವೇದೇವತೆಗಳನ್ನು ಪೂಜಿಸಬೇಕು. ನಾನಾದಿಕ್ಕುಗಳನ್ನು ಸಾಧಿಸಬೇಕೆಂ ದಪೇಕ್ಷಿಸತಕ್ಕವನು ಸಾಧ್ಯರನ್ನು ಭಜಿಸಬೇಕು. ಮತ್ತು ಆಯುಸ್ಸನ್ನು ಕೋ ರುವವನು ಆಶ್ವಿನೀದೇವತೆಗಳನ್ನೂ, ದೇಹಪುಷ್ಟಿಯನ್ನ ಪೇಕ್ಷಿಸತಕ್ಕವನು ಭೂದೇವಿಯನ್ನೂ, ಪ್ರತಿಷ್ಟಾಕಾಂಕ್ಷಿಯಾದವನು ಭೂಮ್ಯಾಕಾಶಗಳನ್ನೂ, ಸೌಂದಯ್ಯವನ್ನು ಕೋರುವವನು ಗಂಧತ್ವರನ್ನೂ ,ಸ್ತ್ರೀಯರಲ್ಲಿ ಆಸೆಯುಳ್ಳವನು ಊರ್ವಶಿಯೆಂಬ ಆಪ್ಪರಸ್ತಿಯನ್ನೂ, ಸಮಸ್ತ ಜನರಮೇಲೆ ಆಧಿಕಾರವನ್ನು ಕೋರುವನು ಪರಮೇಷ್ಠಿ ಯನ್ನೂ, ಯಶಸ್ಸನ್ನು ಕೋರುವವನು ಯಜ್ಞದೇ ದನಾದ ವಿಷ್ಣುವನ್ನೂ ಭಜಿಸಬೇಕು. ಹಾಗೆಯೇ ಹಣದಲ್ಲಿ ಆಸೆಯುಳ್ಳವನು ೩ ಬೇರನನ್ನೂ , ವಿದ್ಯೆಯಲ್ಲಿ ಅಭಿಲಾಷೆಯುಳ್ಳವನು ರುದ್ರನನ್ನೂ , ಅನುಕೂ ಲದಾಂಪತ್ಯವನ್ನು ಕೋರವವನು ಪಾಶ್ವತೀದೇವಿಯನ್ನೂ, ಧರ್ಮಾರ್ಥಗ ಳಲ್ಲಿ ಆಸೆಯುಳ್ಳವನು ಉತ್ತಮಶ್ಲೋಕನಾದ ವಿಷ್ಣುವನ್ನೂ, ಸಂತಾನ ವೃದ್ಧಿಯಲ್ಲಿ ಆಸೆಯುಳ್ಳವನು ಪಿತೃದೇವತೆಗಳನ್ನೂ, ರಕ್ಷಣೆಯನ್ನು ಕೋರ ವವನು ಯಕ್ಷರನ್ನೂ, ಬಲವನ್ನ ಪೇಕ್ಷಿಸತಕ್ಕವನು ಮರುದ್ಧಣಗಳನ್ನೂ, ರಾ