ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೪ ಶ್ರೀಮದ್ಭಾಗವತವು [ಅಧ್ಯಾ ೩, ಜ್ಯವನ್ನು ಕೋರುವವನು ಮನುರೂಪರಾದ ದೇವತೆಗಳನ್ನೂ, ಶತ್ರುಮರಣ ನನ್ನ ಪೇಕ್ಷಿಸುವವನು ಸಿಮಯತಿಯೆಂಬ ರಾಕ್ಷಸಾಂಶವುಳ್ಳ ಬಾಲಕನನ್ನೂ, ಯೋಗಾಪೇಕ್ಷೆಯುಳ್ಳವನು ಚಂದ್ರನನ್ನೂ ಭಜಿಸಬೇಕು. ಎಲೈ ರಾಜೇಂ ದ್ರನೆ ! ಈ ಯಾವ ವಿಷಯಗಳಲ್ಲಿಯೂ ಅಪೇಕ್ಷೆಯಿಲ್ಲದೆ ವೈರಾಗ್ಯವೊಂ ದನ್ನೇ ಅಪೇಕ್ಷಿಸತಕ್ಕವನು ಆ ಪರಮಪುರುಷನೊಬ್ಬನ ನೇ ಪೂಜಿಸಬೇಕು. ಕೇವಲ ವಿರಕ್ತಿಮಾರ್ಗದಲ್ಲಿದ್ದವನಾಗಲಿ, ಇತರಫಲಗಳಲ್ಲಿ ಅಪೇಕ್ಷೆಯಿದ್ದ ವನಾಗಲಿ, ಮೋಕ್ಷದಲ್ಲಿ ಆಸೆಯುಳ್ಳವನಾದರೆ, ಅವಿಚ್ಛಿನ್ನವಾದ ಭಕ್ತಿಯೋ ಗವನ್ನವಲಂಬಿಸಿ ಪರಮಪುರುಷನನ್ನು ಪೂಜಿಸಬೇಕು, ಆದರೆ ಹೀಗೆ ಭಜಿಸ ತಕ್ಕವರಿಗೆ ಮೋಕ್ಷ ಪ್ರಾಪ್ತಿಯುಂಟಾಗುವ ಕಾಲವಾವುದು?” ಎಂದು ನೀನು ಕೇಳಬಹುದು, ಎಲೈ ರಾಜನೆ ! ಈ ಲೋಕದಲ್ಲಿ ಹಾಗೆ ಭಗವಂತನನ್ನು ಭಜಿಸುತ್ತಿರುವವರಿಗೆ ಭಗವದ್ಭಕ್ತರ ಸಹವಾಸವು ಲಭಿಸಿದಕೂಡಲೆ ತಪ್ಪದೆ ಮೋಕ್ಷವು ಕೈಗೂಡುವುದೆಂದು ತಿಳಿ. ಅದು ಹೇಗೆಂದು ಕೇಳುವೆಯಾ ? ಅಂ ತಹ ಸಜ್ಜನರ ಸಹವಾಸದಿಂದ ಭಗವಂತನಲ್ಲಿ ಮನಸ್ಸು ಸಿಕ್ಕಲವಾಗಿ ನಿಲ್ಲು ವುದು. ಆ ಮನೋದಾರ್ಥ್ಯವು ಹಟ್ಟಿದೊಡನೆ, ಮುಕ್ತಿಯುಂಟಾಗುವುದು. ಆದುದರಿಂದ ಭಗವಂತನಲ್ಲಿ ನಿಶ್ಚಲವಾದ ಭಕ್ತಿಯನ್ನು ಮೊದಲು ಸಂಪಾ ಡಿಸಬೇಕು. ಎಲೈ ರಾಜನೆ ! ಶ್ರೀಮನ್ನಾರಾಯಣನ ಚರಿತ್ರೆಗಳನ್ನು ಕೇಳು ತಿದ್ದ ಪಕ್ಷದಲ್ಲಿ ಸತ್ವರಜಸ್ತಮೋಗುಣಕಾರಿಗಳಾದ ಹಸಿವು, ಬಾಯಾರಿಕೆ ಶೋಕ, ಮೋಹ ಜರಾಮರಣಗಳೊಂದೂ ಸಂಭವಿಸವು. ಮನಸ್ಸು ನಿರ್ಮಲ ವಾಗುವುದು. ಈ ಲೋಕದಲ್ಲಿಯೂ, ಪರಲೋಕದಲ್ಲಿಯೂ ಶಬ್ಯಾವಿಷ ಯಗಳಲ್ಲಿ ವಿರಕ್ತಿಯು ಹುಟ್ಟುವುದು, ಮೋಕ್ಷಕ್ಕೆ ಪ್ರಧಾನೋಪಾಯವಾದ ಭಕ್ತಿಯೋಗವು ತಾನಾಗಿಯೇ ಲಭಿಸುವುದು. ಹೀಗಿರುವಾಗ ಸುಖಾಭಿಲಾ ಷಿಯಾದ ಯಾವ ಮನುಷ್ಯನು ತಾನೇ ಹರಿಕಥಾಶ್ರವಣದಲ್ಲಿ ಅನುರಾಗವನ್ನು ಹೊಂದದಿರುವನು?” ಎಂದನು. ಈ ಸಂಗತಿಯನ್ನು ಕೇಳಿ ಶನಕನು ಸೂತ ನನ್ನು ಕುರಿತು, “ಎಲೈ ಮಹಾತ್ಮನೆ ! ಶುಕಮುನಿಯು ಹೇಳಿದ ಈ ಮಾ ತನ್ನು ಕೇಳಿದಮೇಲೆ ಪರೀಕ್ಷಿದ್ರಾಜನು ಮುಂದೆ ಯಾವಪ್ರಶ್ನವನ್ನು ಮಾಡಿ ದನು? ಅದಕ್ಕೆ ಶುಕನು ಕೊಟ್ಟ ಉತ್ತರವೇನು ? ನಮಗೆ ಅವೆಲ್ಲವನ್ನೂ ಕೇಳಿ