ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೫ ಅಧ್ಯಾ. ೩.] ದ್ವಿತೀಯಸ್ಕಂಧವು. ತಿಳಿಯಬೇಕೆಂಬ ಕುತೂಹಲವು ಬಹಳವಾಗಿರುವುದು. ಆದುದರಿಂದ ಅವೆಲ್ಲ ವನ್ನೂ ನಮಗೆ ವಿವರವಾಗಿ ತಿಳಿಸಬೇಕು. ಅವರ ಪ್ರಶೋತ್ತರಗಳೆಲ್ಲವೂ ಕೇವಲ ಹರಿಕಥಾಪ್ರಚುರವಾಗಿಯೇ ಇರುವುದು, ಅವರಿಬ್ಬರೂ ಪರಮಭಾ ಗವತೋತ್ತಮರು. ಆ ಪರೀಕ್ಷಿನ್ಮಾಹಾರಾಜನು ಬಾಲ್ಯದಲ್ಲಿ ಸಣ್ಣ ಮಕ್ಕ ಛಡನೆ ಆಡುತ್ತಿರುವ ಕಾಲದಲ್ಲಿಯೂ ಕೂಡ, ಕೃಷ್ಣನ ಕ್ರೀಡೆಗಳನ್ನೇ ಅನು ಸರಿಸುತ್ತಿದ್ದನೇಹೊರತು, ಬೇರೆ ಮಾರ್ಗಕ್ಕೆ ಹೋಗುತ್ತಿರಲಿಲ್ಲ. ಅಂತಹ ಪರ ಮಭಾಗವತನಾದ ಪರೀಕ್ಷಿತಿಗೂ, ಶ್ರೀಹರಿಪರಾಯಣನಾದ ಶುಕಮುನಿಗೂ ನಡೆದ ಸಂವಾದವು ಶ್ರೀ ಕೃಷ್ಣಚರಿತ್ರಗಳನ್ನು ಬಿಟ್ಟು ಬೇರೊಂದರಲ್ಲಿ ಪ್ರ ವರ್ತಿಸಲಾರವು. ಆ ಕಥೆಗಳನ್ನು ಕೇಳುತ್ತಿರುವುದಕ್ಕಿಂತಲೂ ನಮಗೆ ಬೇರೆ ಲಾಭವೇನುಂಟು ? ಎಲೈ ಸೂತನೆ ! ಸೂರನು ತಾನು ಆಕಾಶದಲ್ಲಿ ಹುಟ್ಟಿ ಮುಳುಗಿದಹಾಗೆಲ್ಲಾ ಜನಗಳ ಆಯುರ್ವೇಯವನ್ನು ಅಪಹರಿಸಿಕೊಂಡು ಹೋಗುತ್ತಿರುವನು. ಇಂತಹ ಸಂದರ್ಭದಲ್ಲಿ ಉತ್ತಮಶ್ರಕನಾದ ಶ್ರೀ ಮನ್ನಾರಾಯಣನ ಕಥೆಗಳನ್ನು ಕೇಳುವುದರಿಂದ ನೀವು ಕಳೆಯತಕ್ಕೆ ಕಾಲ ವನ್ನು ಮಾತ್ರ ಆತನು ನಿರರ್ಥಕವಾಗಿ ಮಾಡಲಾರೆನು. ಕ್ಷಣಕ್ಷ ಮನು ಷ್ಯರ ಆಯುಸ್ಸು ಕಳೆದುಹೋಗುತ್ತಿದ್ದರೂ, ಅದರ ಭವದ್ದು ಇಾನುಭವ ದಿಂದ ಕಳೆದ ಕೆಲವು ಮಾತ್ರ ಸಾರ್ಥಕವೆನಿಸುವುದು. ಈ ಕಾಲವೊಂದನ್ನು ಮಾತ್ರ ಸೂರಗತಿಯಿಂದಲೂ ಕಳೆದು ಹೋಗದಂತೆಯೇ ಎಣಿಸಬಹುದು.ಆ ದರೆ ನಮ್ಮ ಆಯುರ್ವಾಯಕ್ಕೆ ಈ ಲೋಕದಲ್ಲಿ ಬದುಕಿರುವುದೇ ಒಂದು ಫಲವಾಗಬಾರದೆ ? ” ಎಂದು ಕೆಲವರು ಭಾವಿಸಬಹುದು ಈ ವಿಧದಿಂದ ಬದುಕಿದಮಾತ್ರಕ್ಕೆ ಫಲವೇನು ? ಲೋಕದಲ್ಲಿ ಎಷ್ಟೋ ವೃಕ್ಷಗಳೂ ಬದು ಕಿರುವುವಲ್ಲವೆ ? ಆದರೆ ಅವುಗಳಿಗೆ ಶ್ವಾಸೋಚ್ಛಾಸಗಳೆಲ್ಲಿ? ನಮ್ಮ ಹಾಗೆ ಅವುಗಳಿಗೆ ಉಸಿರಾಡುವುಲ್ಲವಷ್ಟೆ ? ” ಎಂದು ಆಕ್ಷೇಪಿಸಬಹುದು. ಉಸಿ ರಾಡಿದಮಾತ್ರಕ್ಕೇನು ? ಕಮಾರು ಕೈಯಲ್ಲಿರುವ ತಿತ್ತಿಗಳೂ ಕೂಡ ಎಡೆಬಿ ಡದೆ ಉಸಿರಾಡಿಸುತ್ತಿರುವುವು. ಆದಮಾತ್ರಕ್ಕೆ ಫಲವೇನು ? ಅದರಂತೆಯೇ ಅಲ್ಲಲ್ಲಿ ಗ್ರಾಮಗಳಲ್ಲಿರುವ ನಾಲ್ಕು ಕಾಲಿನ ಜಂತುಗಳೆಲ್ಲವೂ ಅಹಾರಮೈಥುನ ಗಳನ್ನು ನಡಿಸುವುದಿಲ್ಲವೆ?ಇವೆಲ್ಲವನ್ನೂ ನಡೆಸಿದಮಾತ್ರಕ್ಕೆ ಫಲವೇನಾಯಿತು?