ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೪.] ದ್ವಿತೀಯಸ್ಕಂಧವು. ೨೩.೩ ದಂತೆಯೇ ತಿಳಿಯಬೇಕು. ಎಲೈ ಸೂತನೆ ! ಆದುದರಿಂದ ಆತ್ಮವಿದ್ಯಾನಿಪ ಣನಾದ ಶುಕಮುನಿಯು, ಪರೀಕ್ಷಿದ್ರಾಜನಿಗೆ ಮುಂದೆ ಯಾವ ವಿಷಯವನ್ನು ತಿಳಿಸಿದನೋ, ಅದನ್ನು ನೀನೂ ನಮಗೆ ವಿಸ್ತರಿಸಿ ತಿಳಿಸಬೇಕು. ಎಂದು ಪ್ರಾ ರ್ಥಿಸಿದರು. ಇಲ್ಲಿಗೆ ಮೂರನೆಯ ಅಧ್ಯಾಯವು. ( ಪರೀಕ್ಷಿದ್ರಾಜನು ಶುಕಮುನಿಯನ್ನು ಕುರಿತು ! * ಲೋಕ ಸೃಷ್ಟಿಯ ಕ್ರಮವನ್ನು ಕೇಳಿದುದು, ಶೌನಕಾದಿಗಳ ವಾಕ್ಯವನ್ನು ಕೇಳಿ ಸೂತಪೌರಾಣಿಕನು ಅವರನ್ನು ಕುರಿತು, ಈ ಎಲೈ ಮಹರ್ಷಿಗಳೇ ಕೇಳರಿ! ಹೀಗೆ ವ್ಯಾಸಪುತ್ರನಾದ ಶುಕಮು ನಿಯು ಆತ್ಮತತ್ವವನ್ನು ಉಪದೇಶಿಸಿದಮೇಲೆ, ಪರೀಕ್ಷಿದ್ರಾಜನು ಬುದ್ದಿಯಲ್ಲಿ ತಿಳಿವುಂಟು, ಆಗಲೇ ತನ್ನ ದೇಹದಲ್ಲಿಯೂ, ಗೃಹದಲ್ಲಿಯೂ, ಧನದಲ್ಲಿ ಯೂ, ಪಶುಗಳಲ್ಲಿಯೂ, ಪತ್ನಿಪುತ್ರಾಹಿಗಳಲ್ಲಿಯೂ, ಬಂಧುಗಳಲ್ಲಿಯೂ,ನಿ ರುಪದ್ರವವಾದ ರಾಜ್ಯದಲ್ಲಿಯೂ ತನ್ನ ದೆಂಬ ಅಭಿಮಾನವನ್ನು ಬಿಟ್ಟು, ಎಷ್ಟು ಕಥಾಶ್ರವಣವೊಂದರಲ್ಲಿಯೇ ಆಸಕ್ತಿಯುಳ್ಳವನಾಗಿದ್ದನು, ತನಗೆ ಮರಣವು ಸಮೀಪಿಸಿರುವುದನ್ನು ತಿಳಿದಾಗಲೇ, ಧರ್ಮಾರ್ಥಕಾಮಗಳನ್ನು ಕೈಗೂಡಿಸ ತಕ್ಕ ಕರ್ಮಗಳೆಲ್ಲವನ್ನೂ ತ್ಯಜಿಸಿ,ಭಗವಂತನಾದ ವಾಸುದೇವನೊಬ್ಬ ನಲ್ಲಿಯೇ ತನ್ನ ಆತ್ಮವೂ, ತನ್ನ ಮನಸೂ ದೃಢವಾಗಿ ನೆಲಸುವಂತೆ, ಬುದ್ಧಿಯನ್ನು ದೃಢಪಡಿಸಿಕೊಂಡನು. ಹೀಗೆ ಮನೋಬಾರ್ಥ್ಯವುಂಟಾದಮೇಲೆ ಆ ಪರೀ ಕ್ಷಿದ್ರಾಜನೂಕೂಡ ಈಗ ನೀವು ನನ್ನನ್ನು ಪ್ರಶ್ನೆ ಮಾಡಿದಂತೆಯೇ ಶುಕ ಮುನಿಯನ್ನು ಕುರಿತು ಪ್ರಶ್ನೆ ಮಾಡಿದನು. ಅದನ್ನು ಹೇಳುವೆನು ಕೇಳಿರಿ. «« ಓ ಬ್ರಾಹ್ಮಣೋತ್ತಮಾ ! ನೀವು ಹೇಳಿದ ಮಾತುಗಳು ಯಕ್ತವಾಗಿ ಯೇ ಇರುವುವು. ತಾವು ಹೇಳುತ್ತಿರುವ ಹರಿಕಥೆಗಳನ್ನು ಕೇಳುತ್ತಿರುವುದ ರಿಂದ,ನನ್ನ ಅವಿವೇಕಗಳೆಲ್ಲವೂ ನೀಗಿದುವು. ಭಗವಂತನಾದ ವಾಸುದೇವನು ತನ್ನ ಮಾಯೆಯಿಂದ ಲೋಕಗಳನ್ನು ಹೇಗೆ ಸೃಷ್ಟಿಸಿದನೋ, ಬ್ರಹ್ಮಾದಿ ದೇವತೆಗಳಿಂದಲೂ ಊಹಿಸುವುದಕ್ಕೆ ಶಕ್ಯವಲ್ಲದ ಈ ಪ್ರಪಂಚವನ್ನು ಭಗವಂ ತನು ಯಾವ ಶಕ್ತಿಯನ್ನವಲಂಬಿಸಿ ರಕ್ಷಿಸುತ್ತಿರುವನೋ, ಪ್ರಳಯಕಾಲದಲ್ಲಿ