ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೯ ಅಧ್ಯಾ, ೪.] ದ್ವಿತೀಯಸ್ಕಂಧವು. ದೂ ಮೂರ್ತಿಭೇದವನ್ನು ಹೊಂದಿ, ಶಕ್ತಿತಯವನ್ನು ತೋರಿಸುವೆ. ಸಮಸ್ತ ಪ್ರಪಂಚದಲ್ಲಿಯೂ ಅಂತರಾಮಿಯಾಗಿ ವರ್ತಿಸುವೆ. ನಿನ್ನ ಸ್ವರೂಪಾದಿ ಗಳೆಲ್ಲವೂ ಭಗವದುಪಾಸನಾರೂಪವಾದ ಜ್ಞಾನವೊಂದಕ್ಕೆ ಪ್ರತ್ಯಕ್ಷವಾ ಗುವುದೇಹೊರತು ಬೇರೆ ವಿಧದಲ್ಲಿ ಪ್ರತ್ಯಕ್ಷವಾಗಲಾರದು. ಅಂತಹ ವಿಲಕ್ಷಣ ಸ್ವರೂಪನಾದ ನಿನಗೆ ವಂದನೆಗಳನ್ನ ರ್ಪಿಸುವೆನು. ಓ ಮಹಾತ್ಮಾ ! ನೀನು ಸಜ್ಜನರ ಪಾಪಗಳನ್ನು ನೀಗಿಸತಕ್ಕವನು, ದುರ್ಜನರನ್ನು ಶಿಕ್ಷಿಸತಕ್ಕವನು. ಶುದ್ಧಸತ್ವಮಯವಾದ ದೇಹವುಳ್ಳವನು. ಪರಮಹಂಸಾಶ್ರಮದಲ್ಲಿದ್ದು ಆ ಆಶ್ರಮಕ್ಕನುಗುಣವಾದ ಕರಗಳನ್ನ ನಮಿಸುವುದರಲ್ಲಿ ಆಸಕ್ತಿಯುಳ್ಳ ವರಿಗೆ ಇಷ್ಟಗಳನ್ನು ಕೊಡುವವನು. ಅಂತಹ ನಿನಗೆ ನಮಸ್ಕಾರವು ದೇವಾ ! ಆಿತವಾತ್ಸಲ್ಯದಿಂದಲೇ ನೀನು ಯಾದವಕುಲದಲ್ಲಿ ಹುಟ್ಟಿದೆ ! ನಿನ್ನ ಸ್ವರೂಪವು ಯೋಗಿಗಳಗೂ ದುರ್ಲಭವಾದುದು, ಎಣೆಯಿಲ್ಲದ, ಮತ್ತು ಟುವ್ಯವಾದ ತೇಜೋಮಿಶೇಷದಿಂದ ನಿನ್ನ ಮಹಿಮೆಯಲ್ಲಿಯೇ ನೀನು ರಮಿಸು ತಿರುವೆ, ಎಲೈ ಭಗವಂತನೆ! ನಿನ್ನನ್ನು ಸ್ತುತಿಸಿದರೂ, ನಿನ್ನನ್ನು ಧ್ಯಾನಿಸಿ ದರೂ, ನಿನ್ನ ದರ್ಶನವನ್ನು ಮಾಡಿದರೂ, ನಿನ್ನ ಪಾದಗಳಿಗೆ ನಮಸ್ಕರಿಸಿ ದರೂ, ನಿನ್ನ ಕಥೆಗಳನ್ನು ಕೇಳಿದರೂ, ನಿನ್ನನ್ನು ಪೂಜಿಸಿದರೂ ಮನುಷ್ಯರ ಪಾಪಗಳೆಲ್ಲವೂ ಆ ಕ್ಷಣದಲ್ಲಿಯೇ ನತಿಸುವುವು, ಅಂತಸ ಮಂಗಳಮೂರ್ತಿ ಯಾದ ನಿನಗೆ ನಮಸ್ಕಾರವು!ಜ್ಞಾನಿಗಳೆಲ್ಲರೂ ಯಾವ ನಿನ್ನ ಪಾದಾರವಿಂದ ವನ್ನು ನಂಬಿ, ಇಹಪರಲೋಕಸುಖಗಳಿಗೂ ಮನಸ್ಸು ಕೊಡದೆ, ಸಂಸಾರತಾ ಪತ್ರಯ"ಳನ್ನು ತೊಲಗಿಸಿಕೊಂಡು, ಪರಮಪದವನ್ನು ಹೊಂದುವರೋ ಅಂ ತಹ ಹವ್ಯಮಂಗಳಮೂರ್ತಿಯಾದ ನಿನಗೆ ನಮಸ್ಕಾರವು. ಎಲೈ ದೇವ ದೇವನೆ!ದೇಹವನ್ನು ಬಳಲಿಸಿ ಚಾಂದ್ರಾಯಣ ಪವ್ರತಗಳನ್ನು ನಡೆಸುವವರಾ ಗಲಿ, ವಿಶೇಷದಾನಶೀಲರಾಗಲಿ, ಶೌ ದಾದ್ಯಾದಿಗಳಿಂದ ವಿಶೇಷ ಕೀರ್ತಿ ಯನ್ನು ಸಂಪಾದಿಸಿದವರಾಗಲಿ, ಮಂತ್ರಾರ್ಥಗಳನ್ನನುಸರಿಸಿ ಕರ್ಮಗಳನ್ನು ನಡೆಸುವವರಾಗಲಿ, ಸದಾಚಾರಪರರಾಗಲಿ, ತಾವು ನಡೆಸುವ ಆಯಾ ಸತ್ಕಾರಗಳನ್ನು ನಿನ್ನಲ್ಲಿಯೇ ಅರ್ಪಿತವನ್ನಾಗಿ ಮಾಡದಿದ್ದರೆ, ಅವರ ತಪ ಸ್ಸು ಮೊದಲಾದ ಸತ್ಕಾರಗಳೊಂದಕ್ಕೂ ಉತ್ತಮಫಲವನು ಹೊಂದ