ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಫಲವೂ ನಿರತಿಶಯವಾಗಿರುವುದು. ಹಾಲಿನಲ್ಲಿರುವ ಬೆಣ್ಣೆಯನ್ನೂ, ಕಬ್ಬಿನಲ್ಲಿ ರುವ ಸಕ್ಕರೆಯನ್ನೂ ಪ್ರತ್ಯೇಕಿಸಿ ತೆಗೆದಮೇಲೆ, ಅವುಗಳ ರುಚಿಯೇ ಬೇರೆಯಾಗಿರುವಂತೆ, ವೇದವೇದಾಂತಗಳಿಂದ ಪ್ರತ್ಯೇಕಿಸಿ ತೆಗೆದ ಈ ಭಾಗ ವತಕಥಾಮೃತವು ಅವಕ್ಕಿಂತಲೂ ವಿಶೇಷಫಲಪ್ರದವೆಂಬುದನ್ನು ಹೇಳ ತಕ್ಕುದೇನು ? ಮಹಾಮಂತ್ರಸ್ವರೂಪವಾದ ಈ ಭಾಗವತವೆಂಬ ಪುರಾಣವು ಈ ಲೋಕದಲ್ಲಿ ಭಕ್ತಿಜ್ಞಾನವೈರಾಗ್ಯಗಳನ್ನು ನೆಳೆಗೊಳಿಸುವುದಕ್ಕಾಗಿಯೇ ಪ್ರಚಾರಪಡಿಸಲ್ಪಟ್ಟಿರುವುದು. ಎಲೈ ಋಷಿಶ್ರೇಷ್ಟನೆ ! ಇದೂ ಹಾಗಿರಲಿ ! ಪೂತ್ವದಲ್ಲಿ ವ್ಯಾಸಮುನಿಯು, ಲೋಕೋಜ್ವನಾರ್ಥವಾಗಿ ವೇದವೇ ದಾಂತಾರ್ಥಗಳನ್ನೂ , ಗೀತೆಯನ್ನೂ ಪ್ರಚಾರಗೊಳಿಸಿದಮೇಲೆಯೂಕೂಡ, ಮನಸ್ಸಿಗೆ ನೆಮ್ಮದಿಯಿಲ್ಲದೆ ಚಿಂತಾಕುಲನಾಗಿರುವುದನ್ನು ನೋಡಿ,ನೀನೇ ಆತ “ನಿಗೆ ಚತುಶೈಕರೂಪವಾಗಿ ಭಾಗವತವನ್ನು ಪದೇಶಿಸಿದೆಯಲ್ಲವೆ? ಅದನ್ನು ಕೇಳಿದೊಡನೆ ಆತನು ನಿಶ್ಚಿಂತನಾದನಲ್ಲವೆ? ಹೀಗಿರುವಾಗ ನೀನೇ ಹೀಗೆ ಆಶ್ಚ ರದಿಂದ ಪ್ರಶ್ನೆ ಮಾಡುವುದೆಂದರೇನು ? ಈ ವಿಷಯದಲ್ಲಿ ನಿನ್ನ ಸಂದೇಹಕ್ಕೆ ಕಾರಣವೇನಿರುವುದು ? ಇದರಿಂದ ಎಂತಹ ವಿಪತ್ತಾದರೂ, ದುಃಖವಾದರೂ ಸೀಗಿ ಹೋಗುವುದರಲ್ಲಿ ಸಂದೇಹವಿಲ್ಲ” ಎಂದರು. ಈ ವಾಕ್ಯವನ್ನು ಕೇಳಿ ನಾರದನಿಗೆ ಮಹತ್ತಾದ ಸಂತೋಷವುಂಟಾ ಯಿತು. ಭಕ್ತಿಜ್ಞಾನವೈರಾಗ್ಯಗಳನ್ನು ಆರಿಸುವುದಕ್ಕಾಗಿ ಭಾಗವತಕಥಾ ಶ್ರವಣವೆಂಬ ಜ್ಞಾನಯಜ್ಞವನ್ನೇ ತಾನೂ ಸಾಧಿಸಬೇಕೆಂದು ನಿಶ್ಚಯಿಸಿ ಕೊಂಡನು. ಈ ಯಜ್ಞವನ್ನು ಸಾಧಿಸುವುದಕ್ಕೆ ಉತ್ತಮವಾದ ಸ್ಥಳವಾವು ದೆಂದು ಆತನ ಮನಸ್ಸಿನಲ್ಲಿ ತಿರುಗಿ ಮತ್ತೊಂದು ಚಿಂತೆಯು ಹುಟ್ಟಿತು. ಈ ಸಂದೇಹಪರಿಹಾರಕ್ಕಾಗಿ ನಾರದನು ತಿರುಗಿ ಆ ಋಷಿಕುಮಾರರನ್ನು ಕುರಿತು ('ಎಲೈಮಹಾತ್ಮರೆ ! ಈ ಯಜ್ಞವನ್ನು ನಡೆಸುವುದಕ್ಕೆ ತಕ್ಕ ಸ್ಥಳವಾವುದು? ಈ ಪುಣ್ಯಕಥೆಗಳನ್ನು ಎಷ್ಟು ದಿನಗಳವರೆಗೆ ಕೇಳುತ್ತಿರಬೇಕು? ಈ ಕಥಾಶ್ರವಣ ಕಾಲದಲ್ಲಿ ಅನುಸರಿಸಬೇಕಾದವಿಧಿನಿಯಮಗಳೇನು?”ಎಂದನು.ಅದಕ್ಕಾ ಋಷಿ ಕುಮಾರರು(ನಾರದಾ! ಕೇಳು! ಗಂಗಾದ್ವಾರದ ಸಮೀಪದಲ್ಲಿ ಆನಂದವೆಂಬ