ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೨ ಶ್ರೀಮದ್ಭಾಗವತವು [ಅಧ್ಯಾ. ೫. ಸೃಷ್ಟಿಸಿದವನು. ಸಮಸ್ತಪ್ರಾಣಿಗಳಿಗೂ ಮೊದಲು ಹುಟ್ಟಿದವನು. ರು ಬ್ರಾದಿದೇವತೆಗಳಿಗೂ ದೇವತೆಯೆನಿಸಿದವನು. ಆದುದರಿಂದ ನನಗೆ ಆತ್ಮ ತತ್ತ್ವವನ್ನು ವಿವರಿಸಿ ಜ್ಞಾನೋದಯವನ್ನುಂಟುಮಾಡಬೇಕು. ಪ್ರಪಂಚ ಜ್ಞಾನವು ಸರಿಯಾಗಿ ಜನಿಸಿದರೆ ಆತ್ಮಜ್ಞಾನವೂ ಆಗಲೇ ಹುಟ್ಟುವುದು. ಓ ಜನಕಾ ! ಈ ಪ್ರಪಂಚವೆಂಬುದು ಯಾವ ಭಗವಂತನ ಶರೀರವು? ಇದಕ್ಕೆ ಉಪಾದಾನಕಾರಣವಾವುದು? ಇದು ಯಾವನ ಅಧಾರದಿಂದ ನಿಲ್ಲಿಸಲ್ಪಟ್ಟ ರುವುದು ? ಇದು ಪ್ರಳಯ ಕಾಲದಲ್ಲಿ ಲೀನವಾಗುವುದಲ್ಲಿ ? ಈ ಪ್ರಪಂಚ ಕೈಲ್ಲವೂ ಅಧೀಶ್ವರನಾವನು? ಇವೆಲ್ಲವನ್ನೂ ನನಗೆ ತಿಳಿಸಬೇಕು. ನೀನು ಭೂ ತಭವಿಷ್ಯದ್ವರ್ತಮಾನಗಳೆಂಬ ಮೂರುಕಾಲಗಳಲ್ಲಿಯೂ ಗೋಚರಿಸತಕ್ಕ ವಸ್ತುಗಳೆಲ್ಲಕ್ಕೂ ಅಧಿಪತಿಯಾಗಿರುವುದರಿಂದ, ಈ ಪ್ರಪಂಚದಲ್ಲಿ ನಿನಗೆ ತಿ ಳಿಯದದೊಂದೂ ಇಲ್ಲ. ಇವೆಲ್ಲವೂ ನಿನಗೆ ಕೈಕನ್ನಡಿಯಂತೆ ಸ್ಪಷ್ಟವಾಗಿ ತಿಳಿದಿರುವುವು. ಹೀಗೆ ಇವೆಲ್ಲವನ್ನೂ ಸ್ಪಷ್ಟವಾಗಿ ತಿಳಿಯತಕ್ಕ ಜ್ಞಾನವು ನಿನಗೆ ಯಾರ ಅನುಗ್ರಹದಿಂದುಂಟಾಯಿತು?ನಿನಗೆ ಆಶ್ರಯನಾವನು? ನಿನಗೆ ಆಧಿಪತಿಯಾರು ? ನಿನಗೆ ಈ ಸ್ವರೂಪವು ಯಾರಿಂದುಂಟಾಯಿತು? ನೀನೂ ಬ್ಬನೇ ಪಂಚಭೂತಗಳನ್ನು ಸಾಧನವಾಗಿಟ್ಟುಕೊಂಡು, ಸಮಸ್ತಪ್ರಾಣಿಗ ಇನ್ನೂ ಸೃಷ್ಟಿಸುವೆಯಲ್ಲವೆ? ಹೀಗೆ ಸೃಷ್ಟಿಸಲ್ಪಟ್ಟ ಭೂತಗಳಿಗೆ ಯಾವ ವಿಧವಾದ ಪರಿಭವವೂ ಇಲ್ಲದೆ ಹೇಗೆ ರಕ್ಷಿಸುತ್ತಿರುವೆ ? ಎಲೈ ಮಹಾತ್ಮನೆ ! ಜೇಡರ ಹುಳುಗಳಂತೆ ನೀನು ನಿನ್ನ ಶಕ್ತಿಯನ್ನ ವಲಂಬಿಸಿ, ಸ್ವಲ್ಪವೂ ಶ್ರಮವಿ ಇದಹಾಗೆ, ನಿನ್ನ ಶರೀರದಿಂದಲೇ ಸಮಸ್ತಭೂತಗಳನ್ನೂ ಹುಟ್ಟಿಸಿ, ಅದನ್ನು ರಕ್ಷಿಸುತ್ತಿದ್ದು, ಕೊನೆಗೆ ಅದನ್ನು ಸಂಹರಿಸುತ್ತಿರುವೆ. ಓ ! ದೇವಾ ! ನಾಮ ರೂಪಗಳಿಂದಲೂ, ಸತ್ವರಜಸ್ತಮೋಗುಣಗಳಿಂದಲೂ ಉತ್ತಮಾಧಮಮ ಧ್ಯಮಗಳಾಗಿ ಬೇರ್ಪಟ್ಟಿರುವ ಚೇತನಾಚೇತ್ಮಕವಾದ ಪ್ರಪಂಚವೆಲ್ಲವೂ ನಿನ್ನಿಂದಲೇ ನಿರ್ಮಿಸಲ್ಪಡುವುದು, ಒಂದು ವಸ್ತುವಾದರೂ ಬೇರೊಬ್ಬರಿಂ ದ ನಿರ್ಮಿತವಾದಹಾಗೆ ಊಹಿಸುವುದಕ್ಕೂ ಅವಕಾಶವಿಲ್ಲ. ಓಮಹಾತ್ಮಾ! ಸೃಷ್ಟಿಕರ್ತನಾದ ನೀನೂಕೂಡ ಬಹಳಸಮಾಹಿತನಾಗಿ ಘೋರತಪಸ್ಸ ನ್ನು ಮಾಡುತಿದ್ದೆಯೆಂದು ಕೇಳಿ, ನನ್ನ ಮನಸ್ಸಿಗೆ ಒಂದುವಿಧವಾದ ಶಂಕೆ