ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೫. || ದ್ವಿತೀಯಸ್ಕಂಧವು. ೨೪ ಯು ಹುಟ್ಟಿರುವುದು, ಎಲ್ಲರಿಗಿಂತಲೂ ನೀನೇ ಮೇಲಾದವನೆಂದೂ, ನಿನಗಿಂ ತಲೂ ಉತ್ತಮರಿಲ್ಲವೆಂದೂ, ಇತರರೆಲ್ಲರೂ ನಿನ್ನನ್ನೇ ಉಪಾಸನೆಮಾಡಬೇ ಕೇಹೊರತು ನಿನ್ನಿಂದ ಉಪಾಸನೆಮಾಡಲ್ಪಡತಕ್ಕವರು ಬೇರೊಬ್ಬರೂ ಇಲ್ಲ ವೆಂದೂ ನಾವು ನಿಶ್ಚಯವಾಗಿ ನಂಬಿದ್ದೆವು. ಹೀಗಿರುವಾಗ ನೀನೂ ತಪಸ್ಸು ಮಾಡಿದೆಯೆಂದು ಕೇಳ ನಮ್ಮ ಮನಸ್ಸಿಗೆ ಸಂದೇಹವುಂಟಾಗಿರುವುದು. ಓ ದೇವಾ! ನೀನು ಸಮಸ್ತ ಅಧಿಪತಿಯಾಗಿ ಸರ್ವಜ್ಞನಾಗಿರುವುದರಿಂದ, ಅದರ ಕಾರಣವನ್ನು ನೀನೇ ತಿಳಿಸಿ ನನ್ನ ಸಂದೇಹವನ್ನು ನೀಗಿಸಿ ಮನಸ್ಸಿಗೆ ಸಂತೋಷವನ್ನುಂಟುಮಾಡಬೇಕು ” ಎಂದನು, ಈ ಮಾತನ್ನು ಕೇಳಿ ಬ್ರ ಹ್ಮನು ಸಂತೋಷಗೊಂಡು ವತ್ಥ ನಾರದಾ? ನಿನ್ನ ಪ್ರಶ್ನವು ಯುಕ್ತವಾ ಗಿಯೇ ಇರುವುದು. ಇದು ಸಮಸ್ತಲೋಕಕ್ಕೂ ಹಿತವಾದುದು. ಇದರಿಂದ ನಿನ್ನ ಸುಸ್ವಭಾವವೂ ಹೊರಪಡುವುದು ಹೇಗೆಂದರೆ:-- ನೀನು ನನ್ನನ್ನು ಕುರಿತು ಬೇರೆ ಯಾವ ಪ್ರಶ್ನವನ್ನೂ ಮಾಡದೆ, ಕೇವಲ ಭಗವಂತನ ವಿಷಯ ವಾದ ಪ್ರಶ್ನವನ್ನೇ ಮಾಡುತ್ತಿರುವೆಯಲ್ಲವೆ! ಆ ಭಗವಂತನ ಶಕ್ತಿಯನ್ನು ಸಿನ ಗೆ ತಿಳಿಸುವುದರಿಂದ ನಾನು ಎಣೆಯಿಲ್ಲದ ಪುಣ್ಯಕ್ಕೆ ಭಾಗಿಯಾಗುವೆನು. ಅ೦ ತಹ ಪುಣ್ಯವು ನನಗೆ ಲಭಿಸುವಹಾಗೆ ನೀನು ಮಾಡುವುದರಿಂದ, ನಿನಗೆ ನನ್ನ ಕ್ಲಿರುವ ಕರುಣಾರಸವನ್ನು ಹೊರಪಡಿಸಿದಂತಾಗುವುದಿಲ್ಲವೆ ! ನಾರದಾ ! ನ ನಗೆ ಈ ಹದಿನಾಲ್ಕುಲೋಕಗಳ ಮೇಲೆ ಅಧಿಕಾರವಿರುವುದೇನೋ ನಿಜವು. ಆ ಅಧಿಕಾರವನ್ನು ನನಗೆ ಕೊಟ್ಟಿರತಕ್ಕ ಪರಮಪುರುಷನು ಬೇರೊಬ್ಬ ನಿರುವನು. ಅದನ್ನು ನೀವು ತಿಳಿಯದೆ ನಾನೇ, ಸಮಸ್ಯಭೂತಗಳನ್ನೂ ಸೃಷ್ಟಿ ಸುತ್ತಿರುವೆನೆಂದು ಪ್ರಶ್ನೆ ಮಾಡಿದೆ. ಆದರೆ ಅದನ್ನೂ ಸಂಪೂರ್ಣವಾಗಿ ಅಸತ್ಯವೆಂದೂ ಹೇಳುವುದಕ್ಕಿಲ್ಲ, ಈ ನಿನ್ನ ಮಾತಿನಲ್ಲಿಯೂ ಸ್ವಲ್ಪ ನಿಜಾಂಶ ವಿರುವುದು. ನನಗಿಂತಲೂ ಮೇಲಾದ ಸರೈಶ್ವರನಾವನೆಂದು ಕೇಳಿದುದ ಕ್ಕೆ ಪ್ರತ್ಯುತ್ತರವನ್ನು ಹೇಳುವೆನು ಕೇಳು. ಯಾವ ಮಹಾಪುರುಷನ ಕಾಂತಿ ಯಿಂದಲೇ ಸೂರ, ಚಂದ್ರ, ಗ್ರಹ, ನಕ್ಷತ್ರಾದಿಗಳೂ, ಅಗ್ನಿ ಹೋತ್ರನೂ ಕಾಂತಿವಿಶಿಷ್ಯರಾಗಿ ಪ್ರಕಾಶಿಸುತ್ತಿರುವರೋ, ಆ ಭಗವಂತನ ತೇಜಸ್ಸಿನಿಂದ ಲೇ ಈ ಸಮಸ್ತಲೋಕವೂ ಪ್ರಕಾಶಗೊಂಡಿರುವುದು. ಹೀಗೆ ಆ ಭಗವಂ