ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೪ ಶ್ರೀಮದ್ಭಾಗವತವು (ಅಧ್ಯಾ. ೫. ತನ ತೇಜಸ್ಸಿನಿಂದ ಪ್ರಕಾಶಗೊಂಡಿರುವ ಈ ವಿಶ್ವವನ್ನು ನಾನು ಸಿಪಿ ತಮಾತ್ರನಾಗಿ ಪ್ರಕಾಶಗೊಳಿಸುತ್ತಿರುವೆನು. ಇಷ್ಟೆಹೊರತು ನನ್ನ ಸ್ವ ಶಕ್ತಿಯಿಂದ ನಾನು ಯಾವುದನ್ನೂ ನಡೆಸುವುದಕ್ಕೆ ಸಮನಲ್ಲ. ಈ ಸಮ ಸಪ್ರಪಂಚಕ್ಕೂ ಆಧಾರನಾದ ಸತ್ಯೇಶ್ವರನು ಬೇರೊಬ್ಬನಿರುವನು. ಯಾವನ ಮಾಯೆಯಿಂದ ಮೋಹಿತರಾದ ನೀವೆಲ್ಲರೂ, ನನ್ನ ಸ್ನ ಲೋಕಪತಿ ಯನ್ನಾಗಿ ಹೇಳುತ್ತಿರುವಿರೋ, ಅಂತಹ ಜಗದೀಶ್ವರನಿಗೆ ಈಗ ನಾನೂ ನನ್ನ ವಂದನಗಳನ್ನ ರ್ಪಿಸುವೆನು. ಮತ್ತು ವತ್ಥ ನಾರವಾ! ಆ ಭಗವಂತನ ಕಣ್ಣಿದಿರಿಗೆ ನಿಲ್ಲುವುದಕ್ಕೂ ನಾಚುತ್ತಿರುವ ಮಾಯೆಯೆಂಬುದು, ನಿಮ್ಮೆಲ್ಲ ರನ್ನೂ ಹೀಗೆ ವಿವೇಕಶೂನ್ಯರನ್ನಾಗಿ ಮಾಡುತ್ತಿರುವುದು. ಆ ಮಾಯಾಸಂ ಬಂಧದಿಂದಲೇ ನಿಮ್ಮಂತವರೆಲ್ಲರೂ ನಿಜಸ್ಥಿತಿಯನ್ನು ತಿಳಿಯಲಾರದೆ, ಆ ಭಗ ವಂತನೊಬ್ಬನಿಗೆಹೊರತು ಬೇರೊಬ್ಬರಿಗೆ ಯಾವ ವಿಧದ ಸ್ವಾತಂತ್ಯವಿಲ್ಲ ದಿದ್ದರೂ, ನನ್ನನ್ನು ಸ್ವತಂತ್ರನನ್ನಾಗಿ ಭಾವಿಸುತ್ತಿರುವಿರಿ. ಈ ನಿಮ್ಮ ಅಜ್ಞಾನವನ್ನು ನೋಡಿ ನನಗೆ ಬಹಳವಾಗಿ ನಗೆಯುಂಟಾಗುತ್ತಿರುವುದು, ಓ ನಾರದಾ ! ಪ್ರಕೃತಿ, ಮಹತ್ತು, ಆಹಂಕಾರ ಮೊದಲಾದುವುಗಳೂ, ಪೂಜ್ಯ ಪಾಪಕಗಳೂ, ಕಾಲವೂ, ಸತ್ವರಜಸ್ತಮೋಗುಣಗಳೂ, ಎಲ್ಲಾ ಜೀವ ಕೋಟಿಯ, ಈ ಸಮಸ್ತವೂಕೂಡ ಆ ವಾಸುದೇವನಿಗಿಂತಲೂ ಬೇರೆ ಯಾದುದಲ್ಲವೆಂದು ನಿಶ್ಚಯವಾಗಿ ತಿಳಿ ! ಸಮಸ್ತ ವೇದಗಳೂ ಆ ನಾರಾಯ ಣನೊಬ್ಬನನ್ನೇ ಪ್ರತಿಪಾದಿಸುತ್ತಿರುವುವು. ಸಮಸ್ತ ದೇವತೆಗಳೂ ಆ ನಾ ರಾಯಣನ ಶರೀರದಿಂದಲೇ ಹುಟ್ಟಿರುವರು. ಸಮಸ್ತಲೋಕವೂ ಆ ನಾರಾ ಯಣನೊಬ್ಬನಿಗೇ ಅಧೀನವಾಗಿರುವುದು. ಸಮಸ್ತ ಯಜ್ಞಗಳೂ ಆ ನಾರಾ ಯಣನ ಆರಾಧನರರೂಪವಾಗಿಯೇ ಇರುವುವು. ಪ್ರಾಣಾಯಾಮಾಜಿ ಯೋಗಗಳೆಲ್ಲವೂ ಆ ನಾರಾಯಣನನ್ನೇ ವಿಷಯೀಕರಿಸುವುವು. ಕೃಛ ಚಾಂದ್ರಾಯಣಾದಿವ್ರತಗಳೂ, ತಪಸ್ಸು ಮೊದಲಾದುವೂಕೂಡ ಆತನ ಆರಾಥನರೂಪವಾಗಿಯೇ ಇರುವುವು. ಸರೊತ್ತಮವಾದ ಭಕ್ತಿಯೂ ಕೂಡ ಆ ನಾರಾಯಣನ ಪೂಜಾರೂಪವಲ್ಲದೆ ಬೇರೆಯಲ್ಲ. ಸಮಸ್ತ ವಿಧಗಳಾದ ಪುರುಷಾಂಗಗಳ ಸಿದ್ಧಿಯೂ ಆ ಭಗವಂತನ ಅಧೀನವಾ