ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭ್ಯಾ. ೫] 'ದ್ವಿತೀಯಸ್ಕಂಧವು ೨೪೫ ಗಿರುವುವು. ಸಮಸ್ತ ವಸ್ತುಗಳನ್ನೂ ಸಾಕ್ಷಾತ್ಕರಿಸತಕ್ಕವನಾಗಿ, ಸಮಸ್ತ ಕ್ಕೂ ನಿಯಾಮಕನಾಗಿ, ವಿಕಾರಶೂನ್ಯನಾಗಿ, ಸಾಂತರಾಮಿಯಾಗಿರುವ ಆ ಭಗವಂತನ ಕಡೆಗಣ್ಣಿನ ನೋಟದಿಂದಲೇ ನಾನು ಸೃಷ್ಟಿಸಲ್ಪಟ್ಟವನು. ಅದರಿಂದ ಪ್ರೇರಿತನಾಗಿ ಈ ಕಾರಗಳನ್ನು ನಡೆಸುತ್ತಿರವೆನು. ಅವನಿಂದ ಮೊದಲು ಸೃಷ್ಟಿಸಲ್ಪಟ್ಟ ಪ್ರಪಂಚವನ್ನೇ ತಿರುಗಿ ನಾನು ಸೃಷ್ಟಿಸುತ್ತಿರು ವೆನು. ಹೇಯಗುಣವಿಲ್ಲದ ಆ ಭಗವಂತನು, ಈ ಪ್ರಪಂಚದ ಸೃಷ್ಠಿಸ್ಥಿತಿ ಸಂಹಾರಗಳೆಂಬ ಲೀಲೆಗಳನ್ನು ನಡೆಸುವುದಕ್ಕಾಗಿ, ಸತ್ವರಜಸ್ತಮಸ್ಸುಗ ಳೆಂಬ ಮೂರು ಗುಣಗಳನ್ನು ಸ್ಟೇಚ್ಛೆಯಿಂದ ಸ್ವೀಕರಿಸಿರುವನು, ಈ ಮೂರು ಗಣಗಳೂ ಬೇರೆಬೇರೆ ಮೂರುಬಗೆಯ ಸ್ವಭಾವವುಳ್ಳವು. ಅದರಲ್ಲಿ ಸತ್ವಗುಣ ವೆಂಬುದು ಪ್ರಕಾಶಕವಾದ ಸ್ವಭಾವವುಳ್ಳುದುರಜೋಗುಣವೆಂಬುದು ಪ್ರೇ ರಕಸ್ವಭಾವವನ್ನುದು. ತಮೋಗುಣವೆಂಬುದು ಮೋಹವನ್ನು ಲಟುಮಾಡತಕ್ಕ ಸ್ವಭಾವವುಳ್ಳದು.ಈ ಮೂರುಗುಣಗಳೂ ಕೂಡ,ನಿಜಸ್ವರೂಪದಿಂದ ನಾಶ ರಹಿತನಾದ ಜೀವಾತ್ಮನನ್ನು, ಶರೀರೇಂದ್ರಿಯಗಳ ನಿಮಿತ್ತವಾಗಿ ಯಾವಾ ಗಲೂ ಬಂಧಿಸುತ್ತಿರುವುವು. ಹೀಗೆ ತನಗೆ ಶರೀರಭೂತವಾದ ಪ್ರಕೃತಿಯ ಕ್ಲಿರುವ ಸತ್ಯಾಸತ್ರಯಗುಣದಿಂದ ಸೇರುತ್ತಿರುವ ಆ ಭಗವಂತನೇ, ಸಮಸ್ತಪ್ರಪಂಚವನ್ನೂ , ನನ್ನನ್ನೂ ಕೂಡ ನೇಮಿಸುತ್ತಿರುವನೆಂದು ತಿಳಿ! ಆ ಭಗವಂತನೇ ಸಮಸ್ತಪ್ರಪಂಚಕ್ಕೂ ಕಾರಣಭೂತವಾದ ಮಾಯೆಗೆ ಸಿಯಾ ಮಕನಾಗಿದ್ದು, ತನ್ನ ಸಂಕಲ್ಪದಿಂದಲೇ ಈ ಪ್ರಪಂಚರೂಪವಾಗಿ ಕಾಣಿಸಿ ಕೊಳ್ಳತ್ತ,ಕರಗಳಿಗೆ ವಶನಾಗದೆ ಇರುವನು. ಆದರೆ ಕಾಲಕರ ಸ್ವಭಾವಗಳೆಂ ಬಿವು ಮೂರನ್ನೂ 'ಪ್ರಪಂಚಸೃಷ್ಟಿಗಾಗಿ ತನಗೆ ಸಹಕಾರಿಗಳನ್ನಾಗಿ ಸ್ವೀಕರಿ ಸಿರುವನು, ಕಾಲವೆಂಬುದು ತನಗೆ ತಾನೇ ಅಪ್ರಯತ್ನವಾಗಿ ಬಂದು ಅವನಲ್ಲಿ ಸೇರಿ, ಮಹದಾದಿಕಾರಿಗಳಿಗೆ ಪರಿಣಾಮವನ್ನುಂಟುಮಾಡತಕ್ಕುದಾಗಿರು ವುದು. ಇಂತಹ ಕಾಲವನ್ನೂ, ಜೀವನ ಅದೃಷ್ಟ ರೂಪವಾದ ಕರ್ಮಫಲ ವನ್ನೂ, ಮೂಲಪ್ರಕೃತಿಯಲ್ಲಿರುವ ಪರಿಣಾಮರೂಪವಾದ ಸ್ವಭಾವಗುಣ ವನ್ನೂ, ಜಗತೃಷ್ಟಿಗೆ ಸಹಕಾರಿಗಳನ್ನಾಗಿ ತಾನಾಗಿಯೇ ಸೈಜ್ಞೆಯಿಂದ ಸ್ವೀಕರಿಸಿರುವನು. ಈ ಮೂರರಲ್ಲಿ ಕಾಲವೆಂಬುದು ಸತ್ವರಜಸ್ತಮೋಗುಣ