ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೩ ಶ್ರೀಮದ್ಭಾಗವತವು [ಅಧ್ಯಾ. ೫. ಗಳ ವ್ಯತ್ಯಾಸಕ್ಕೆ ಕಾರಣವಾಗಿರುವುದು. ಹೀಗೆ ಕಾಲವಶದಿಂದುಂಟಾಗುವ ಸತ್ಯಾದಿಗುಣಗಳ ವೈಷಮ್ಯದಿಂದಲೂ, ಪ್ರಕೃತಿಯಲ್ಲಿರುವ ಪರಿಣಾಮ ಭಾವದಿಂದಲೂ, ಜೀವಾತ್ಮರ ಅದೃಷ್ಟದಿಂದಲೂ, ಪರಮಪುರುಷನಿಂದ ಪ್ರೇರಿತವಾದ ಪ್ರಕೃತಿಯಿಂದ ಮಹತ್ತೆಂಬ ತತ್ವವು ಜನಿಸಿತು. ಆ ಮಹತ್ವ ಹಿಂದ ಅಹಂಕಾರವೆಂಬ ತತ್ವವು ಜನಿಸಿತು. ಹೀಗೆ ಪರಮಪುರುಷನ ಸಂಕಲ್ಪ ಹಿಂದ ವಿಕಾರಹೊಂದತಕ್ಕುದಾಗಿಯೂ, ಜ್ಞಾನಕರ್ಮಗಳನ್ನು ಮುಖ್ಯ ವಾಗಿ ಹೊಂದಿರುವುದರಿಂದ ಸತ್ವರಜೋಗುಣಗಳಿಗೆಮಾತ್ರವೇ ನೆಲೆಯಾಗಿ ಯೂ ಇರುವ ಆ ಮಹತ್ತತ್ವದಿಂದ ಹುಟ್ಟಿದ ಆಹಂಕಾರತತ್ವವೆಂಬುದು, ಕೇವಲ ತಮೋಗುಣಪ್ರಧಾನವೆನಿಸಿರುವುದು. ಇದು ವಿಕಾರಹೊಂದುತ್ತ ಸಾ ಕಾಹಂಕಾರವೆಂದೂ, ರಾಜಸಾಹಂಕಾರವೆಂದೂ, ತಾಮಸಾಹಂಕಾರವೆಂ ದೂ ಮರುವಿಧವಾಗಿ ಬೇರ್ಪಟ್ಟಿರುವುದು. ಇವುಗಳಲ್ಲಿ ತಾಮಸಾಹಂಕಾ ರವೆಂಬುದು ಮಹಾಭೂತಗಳೆಂಬ ದ್ರವ್ಯಗಳನ್ನು ಸೃಷ್ಟಿಸತಕ್ಕ ಶಕ್ತಿಯು qುದು. ತೈಜಸವೆಂದು ಹೇಳಲ್ಪಡುವ ರಾಜಸಾಹಂಕಾರವೆಂಬುದು ಕ್ರಿಯೆಗೆ ಳಲ್ಲಿ ಪ್ರವೃತ್ತಿಯುಂಟುಮಾಡತಕ್ಕ ಶಕ್ತಿಯುಳ್ಳುದು. ವೈಕಾರವೆನಿಸುವ ಸಾತ್ವಿಕಾಹಂಕಾರವೆಂಬುದು ಶಬ್ಯಾಟವಿಷಯಗಳನ್ನು ತಿಳಿಸತಕ್ಕ ಜ್ಞಾನೇಂ ದ್ರಿಯಗಳನ್ನುಂಟುಮಾಡುವ ಶಕ್ತಿಯುಳ್ಳುದು. ಭೂತಾದಿಯೆಂದು ಹೆಸ ರುಳ್ಳದಾಗಿಯೂ, ಪರಮಪ್ರರುಷನ ಪ್ರೇರಣೆಯಿಂದಲೇ ವಿಕಾರಹೊಂದ ತಕ್ಕುದಾಗಿಯೂ ಇರುವ ತಾಮಸಾಹಂಕಾರದಿಂದ ಪಂಚಭೂತಗಳಲ್ಲಿ ಆ ಕಾಶವೆಂಬುದು ಮೊದಲು ಹುಟ್ಟಿತು. ಚೇತನಾಚೇತನಗಳ ಸ್ವರೂಪವನ್ನು ತಿಳಿಸುವುದಕ್ಕೆ ಪ್ರಮಾಣವಾಗಿಯೂ, ಆ ಆಕಾಶದ ಸೂಕ್ಷ್ಮರೂಪವಾಗಿ ಯೂ, ಆಕಾಶಕ್ಕೆ ಅಸಾಧಾರಣವಾಗಿಯೂ ಇರುವ ಶಬ್ದಗುಣವು ಮೊದಲು ಜನಿಸಿ, ಅದರಿಂದ ಆಕಾಶವು ಹುಟ್ಟಿತು ವಿಕಾರಹೊಂದುತ್ತಬಂದ ಆ ಆಕಾ ಶದಿಂದ ಸ್ಪರ್ಶಗುಣವುಳ್ಳ ವಾಯುವು ಹುಟ್ಟಿತು. ಆ ವಾಯುವಿನಲ್ಲಿ ತನಗೆ ಕಾರಣವಾದ ಆ ಆಕಾಶದಲ್ಲಿರುವ ಶಬ್ದಗುಣವೂ, ತನ್ನಲ್ಲಿ ಸ್ವತಸ್ಸಿದ್ಧವಾದ ಸ್ಪರ್ಶಗುಣವೂ ಇವೆರಡೂ ಸೇರಿದುವು ಮತ್ತು ಆ ವಾಯುವು ಪ್ರಾಣರೂ ಪವಾಗಿ ದೇಹದಲ್ಲಿ ಸೇರಿರುವುದರಿಂದ, ಇಂದ್ರಿಯಗಳಿಗೂ, ಶರೀರಕ್ಕೂ ಬಲ