ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೬ ಆಧ್ಯಾ, ೫ || ದ್ವಿತೀಯಸ್ಕಂಧವು ವನ್ನು ಕೊಡುತ್ತಿರುವುದು. ವಿಕಾರಹೊಂದುತ್ತಿರುವ ಆ ವಾಯುವೆಂಬ ಭೂತದಲ್ಲಿ, ಮೇಲೆ ಹೇಳಿದಂತೆ ಕಾಲಕರ ಸ್ವಭಾವಗಳಿಂಬೀ ಮೂರರ ಸಹಾ ಯದಿಂದ ತೇಜಸ್ಸು ಜನಿಸಿತು. ಆ ತೇಜಸ್ಸಿನಲ್ಲಿ ತನಗೆ ಕಾರಣಭೂತಗಳಾದ ಆಕಾಶವಾಯುಗಳೆಂಬ ಭೂತಗಳಲ್ಲಿರುವ ಶಬ್ದ, ಸ್ಪರ್ಶ ಗುಣಗಳೆರಡೂತನ್ನಲ್ಲಿ ಯೇ ಸ್ವತಸ್ಸಿದ್ದವಾಗಿ ಹುಟ್ಟಿದ ರೂಪಗುಣವೂ ಈ ಮೂರೂ ಒಂದಾಗಿ ಸೇರಿದುವು. ವಿಕಾರಹೊಂದುತ್ತಿರುವ ಆ ತೇಜಸ್ಸಿನಿಂದ ರಸಾತ್ಮಕವಾದ ಜಲ ವು ಹುಟ್ಟಿತು. ಆ ಜಲದಲ್ಲಿ ತನಗೆ ಕಾರಣಭೂತವಾದ ತೇಜಸ್ಸಿನಲ್ಲಿರುವ ಶಬ್ದಸ್ಪರ್ಶರೂಪಗುಣಗಳೂ, ಮತ್ತು ತನ್ನಲ್ಲಿಯೇ ಹುಟ್ಟಿದ ರಸವೆಂಬ ಗುಣವೂ ಒಂದಾಗಿ ಸೇರಿದುವು. ಹಾಗೆಯೇ ವಿಕಾರಹೊಂದುತ್ತಿರುವ ಜಲ ದಿಂದ ಗಂಧಗುಣವುಳ್ಳ ಭೂಮಿಯು ಹುಟ್ಟಿತು, ಈ ಭೂಮಿಯಲ್ಲಿ ತನಗೆ ಕಾರಣವಾದ ಜಲದಲ್ಲಿರುವ ಶಬ್ದಾದಿನಾಲ್ಕು ಗುಣಗಳಲ್ಲದೆ ಹೊಸದಾಗಿ ಗಂಧ ವೆಂಬ ಗುಣವೂ ಒಂದಾಗಿ ಸೇರಿದುವು. ಮೇಲೆ ಹೇಳಿದ ಪಂಚಮಹಾಭೂ ತೆಗಳ ಉತ್ಪತ್ತಿಯೆಲ್ಲವೂ ತಾಮಸಾಹಂಕಾರದ ಕಾಠ್ಯಗಳು.ಸಾತ್ವಿಕಾಹಂಕಾ ರದ ಕಾವ್ಯಗಳನ್ನೂ ಹೇಳುವೆನು ಕೇಳು! ಸಾತ್ವಿಕಾಹಂಕಾರದಂದ ದಿಕ್ಕುಗಳು, ವಾಯು, ಸೂರ್ಯನು, ವರುಣನು, ಅಶ್ವಿನೀದೇವತೆಗಳೆಂಬಿವರನ್ನು ಆಥಿ ಮೌನದೇವತೆಗಳನ್ನಾಗಿ ಪಡೆದ ಕಿವಿ, ತೊಕ್ಕು, ಕಣ್ಣು, ನಾಲಗೆ, ಮೂಗು, ಎಂಬ ಐದು ಜ್ಞಾನೇಂದ್ರಿಯಗಳೂ, ಇಂದ್ರನು, ಅಗ್ನಿ , ಉಪೇಂದ್ರನು, ವಿ ತನು, ಬ್ರಹ್ಮನು, ಇವರನ್ನು ಅಧಿಷ್ಟಾನದೇವತೆಗಳನ್ನಾಗಿ ಪಡೆದ ವಾಕ್ಕು, ಪಾಣಿ, ಪಾದ, Fಯು, ಉಪಸ್ಸಗಳೆಂಬ ಐದು ಕಿಂದ್ರಿಯಗಳೂ ಚಂದ್ರನನ್ನು ಅಧಿಷ್ಠಾನದೇವತೆಯಾಗಿ ಉಳ್ಳ ಮನಸ್ಕೂ, ಹೀಗೆ ಏಕಾದಶೇಂ ದ್ರಿಯಗಳು ಜನಿಸಿದುವು. ಈ ವಿಧವಾಗಿ ಜ್ಞಾನೇಂದ್ರಿಯಗಳ್ಳೆದು, ಕಂ ದ್ರಿಯಗಳ್ಳೆದು, ಮತ್ತು ಮನಸ್ಸು, ಇವೆಲ್ಲಕ್ಕೂ, ರಾಜಶಾಹಂಕಾರದಿಂದ ಸಹ ಕರಿಸಲ್ಪಟ್ಟು, ವಿಕಾರಹೊಂದುತ್ತಿರುವ ಸಾತ್ವಿಕಾಹಂಕಾರವು ಕಾರಣವೆನಿಸಿ ರುವುದು. ಇದರಿಂದ ಈ ಇಂದ್ರಿಯಗಳಲ್ಲಿ ರಾಜಸಾಹಂಕಾರದ ಗುಣಗಳೂ ಕಲೆತಿರುವುವು. ಹೀಗೆ ಆಕಾಶಾದಿಭೂತಗಳೂ, ಇಂದ್ರಿಯಗಳೂ, ಮನಸ್ಕೂ, ಅವುಗಳಿಗೆ ವಿಷಯಗಳಾದ ತನ್ಮಾತ್ರಗಳೂ, ಬೇರೆಬೇರೆಯಾಗಿದ್ದುದರಿಂದ,