ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೮ ಶ್ರೀಮದ್ಭಾಗವತವು [ಅಧ್ಯಾ. ೫. ಬಹ್ಮಾಂಡಸೃಷ್ಟಿಗೆ ಅಸಮರಗಳಾಗಿದ್ದುವು. ಆಗ ಭಗವಂತನ ಶಕ್ತಿ ಯಿಂದ ಇವು ಪ್ರೇರಿತಗಳಾಗಿ, * ಪಂಚೀಕರಣಕ್ರಮವನ್ನನುಸರಿಸಿ, ಒಂದ ಕೊಂದು ಸಂಯೋಗವನ್ನು ಹೊಂದಿ, ಸ್ಕೂಲಸೂಕ್ಷ್ಮಗಳೆಂಬ ರೂಪಭೇದ ಬಂದ, ಕಾಲಕರ ಸ್ವಭಾವಗಳನ್ನನುಸರಿಸಿ, ಈ ಬ್ರಹ್ಮಾಂಡದ ಉತ್ಪತ್ತಿಗೆ ಕಾರಣಗಳಾದುವು. ಬ್ರಹ್ಮಾಂಡವೆಂಬುದು ಈ ಭೂತೇಂದ್ರಿಯಸಂಯೋಗ ದಿಂದಲೇ ಉಂಟಾದುದರಿಂದ, ಆಕಾಶದಿಂದುಂಟಾದ ವಾಯುವಿನಂತೆ ಇದ ನ್ನು ಬೇರೊಂದು ತತ್ವವೆಂದೆಣಿಸುವುದಕ್ಕಿಲ್ಲ. ಇದಕ್ಕೆ ಆಕಾಶಾದಿಗಳಂತೆ ಬೇ ರೊಂದು ತತ್ವವನ್ನು ಹುಟ್ಟಿಸತಕ್ಕ ಶಕ್ತಿಯೂ ಇಲ್ಲ. ಆದುದರಿಂದ ಈ ಬ್ರ ಹ್ಮಾಂಡವೆಂಬುದು, ಈ ಗ್ಯಕಾರಣರೂಪಗಳಾದ ಎರಡು ಬಗೆಯ ತತ್ವಗಳಿ ಗಿಂತಲೂ ಬೇರೆಯಾಗಿರುವುದು. ಈ ಬ್ರಹ್ಮಾಂಡವು ಕಲ್ಪಾಂತದಲ್ಲಿ ಗ ದಕವೆಂಬ ನೀರಿನಸ್ಲಿಗ, ಕಾಲಕರ ಸ್ವಭಾವಗಳಿಗೀಡಾಗದೆ, ಸಮಸ್ತವ ನ್ಯೂ ಸಜೀವವನ್ನಾಗಿ ಮಾಡತಕ್ಕ ಶಕ್ತಿಯುಳ್ಳ ಭಗವಂತನು, ಸಮಷ್ಟಿ ಪುರುಷನೆನಿಸಿದ ಬ್ರಹ್ಮನನ್ನು ತನಗೆ ಶರೀರವನ್ನಾಗಿ ಮಾಡಿಕೊಂಡು, ಆತ ನಲ್ಲಿ ಅಂತರಾತ್ಮನಾಗಿ, ಕಾಲಕರ ಸ್ವಭಾವಗಳನ್ನನುಸರಿಸುತ್ತ, ಆ ಅಂಡವ ನ್ನೊಳಹೊಕ್ಕು, ಅದನ್ನು ಜೀವಸಹಿತವನ್ನಾಗಿ ಮಾಡಿಟ್ಟನು. ಒಡನೆಯೇ ಆ ಅಂಡವನ್ನು ಭೇದಿಸಿಕೊಂಡು ಪುರುಷಾಕೃತಿಯೊಂದು ಉದ್ಭವಿಸಿತು. ರಾಜಾ! ಆತನೂ ಚತುರಖರೂಪದಿಂದ ಹೊರಟುಬಂದ ಪರಮಪುರುಷನೇ ಹೊರತು -- -... ............... * ಪಂಚೀಕರಣವೆಂದರೆ, ಒಂದೊಂದು ಭೂತಗಳನೂ ಎರಡಾಗಿ ವಿಭಾ ಗಿಸಿ, ಅವುಗಳಲ್ಲಿ ಒಂದೊಂದು ಅರ್ಧಭಾಗವನ್ನು ತಿರುಗಿ ಐದುಭಾಗವಾಗಿ ಮಾಡಿ, ಆ ಐದುಭಾಗಗಳಲ್ಲಿ ಒಂದನ್ನು ಬಿಟ್ಟು ಉಳಿದ ನಾಲ್ಕು ಭಾಗಗಳನ್ನೂ ಇತರ ಭೂತಗಳಲ್ಲಿ ಒಂದೊಂದಕ್ಕೆ ಒಂದೊಂದರಂತೆ ಸೇರಿಸಿಡುವುದು. ಇದರಿಂದ ಒಂದೊ೦ ದು ಭೂತಗಳಲ್ಲಿಯೂ ಬೇರೆ ಎಲ್ಲಾ ಭೂತಗಳ ಅಂಶವೂ ಸ್ವಲ್ಪಸ್ವಲ್ಪವಾಗಿ ಸೇರು ವುವು. ಮಹತ್ತು, ಅಹಂಕಾರಗಳೆಂಬ ಎರಡು ತತ್ವಗಳನ್ನೂ ಸೇರಿಸಿ, ಇದೇ ಕ್ರಮ ದಿಂದ ಮಿಶ್ರಣಮಾಡುವುದನ್ನು ಸಸ್ತೀಕರಣವೆಂದು ಹೇಳುವರು. ಮೊದಲು ಮಂಗಳ ಶ್ಲೋಕದಲ್ಲಿ 'ತೇಜೋವಾರಿವ್ಯದಾಂ ಯಥಾ ವಿನಿಮಯ” ಎಂಬ ವಾಕ್ಯದಿಂದ ಸೂಚಿತವಾದ ತ್ರಿವೃತ್ಕರಣವೆಂಬುದು ಇದಕ್ಕೆ ಉಪಲಕ್ಷಕವೆಂದು ತಿಳಿಯಬೇಕು.