ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೫.} ದ್ವಿತೀಯಸ್ಕಂಧವು, ೨೪೯ ಬೇರೆಯಲ್ಲ. ಆದರೆ ಈ ರೂಪದಲ್ಲಿ ಅಂತರಾಮಿಯಾಗಿದ್ದ ಪುರುಷನು, ಮೇಲೆ ಕಾಣುವಂತೆ ನಾಲ್ಕು ಮುಖದವನಲ್ಲ. ಅವನಿಗೆ ಸಾವಿರತೊಡೆಗಳು ! ಸಾವಿರ ಕಾಲುಗಳು ! ಸಾವಿರತೋಳುಗಳು ! ಸಹಸ್ರಮುಖಗಳು ! ಸಾವಿರತಲೆಗಳು! ಆತನೇ ಸಾಂತರಾಮಿಯಾದ ಪರಮಪುರುಷನು ! ಆತನೇ ಮೊದಲು ಹೇ ಳಿದ ವಿರಾಟ್ಟುರುಷನು ! ಪಂಡಿತರು ಪಾತಾಳಾಡಿಸಮಸ್ತಲೋಕಗಳನ್ನೂ ಈ ಪರಮಪುರುಷನ ಆಲಗಾಲು ಮೊಲಾದ ಶರೀರಾವಯವಗಳನಾಗಿ ಭಾವಿಸಿ ಧ್ಯಾನಿಸುವರು.” ಆತನ ಕಟೆ( ಮಧ್ಯ ಭಾಗದಿಂದ ಕೆಳಗಿರುವ ಅವಯವಗಳನ್ನು ಕೆಳಗಿನ ಏಳು ಲೋಕಗಳನ್ನಾಗಿಯೂ, ಜಘನಕ್ಕೆ ಮೇಲಿನ ಅವಯವಗಳನ್ನು ಮೇಲಿನ ಏಳುಲೋಕಗಳನ್ನಾಗಿಯೂ ಕಲ್ಪಿಸಿರುವರು, ಆ ಪರಮಪುರುಷನ ಮುಖದಿಂದ ಬಾಹ್ಮಣಜಾತಿಯೂ, ತೋಳುಗಳಿಂದ ಕತ್ರಜಾತಿಯೂ, ತೊಡೆಗಳಿಂದ ವೈಶ್ಯ ಜಾತಿಯೂ, ಕಾಲುಗಳಿಂದ ಶೂದ್ರಜಾತಿಯ ಹುಟ್ಟಿ ರುವುವು. ಮತ್ತು ಆತನ ಪಾದಗಳಿಂದ ಭೂಲೋಕವೂ, ನಾಭಿಯಿಂದ ಭು ವರ್ಿಕವೂ,ಹೃದಯದಿಂದ ಸ್ವರ್ಲೋಕವೂ, ಕಂಠದಿಂದ ಜನಲೋಕವೂ ಆತನ ಸ್ತನದ್ವಯಗಳಿಂದ ತಪೋಲೋಕವೂ, ಆತನ ಶಿರಸ್ಸಿನಿಂದ ಸತ್ಯ ಲೋಕವೆಂಬ ಹೆಸರುಳ್ಳುದಾಗಿ ಇತರಲೋಕಗಳಿಂತಲೂ ಹೆಚ್ಚು ಕಾಲ ದವರೆಗೆ ನಿಲ್ಲತಕ್ಕ ಚತುದ್ಮುಖಲೋಕವೂ ಉದ್ಭವಿಸಿರುವುದು. (ಆ ಮಹಾ ತ್ಮನ ನಿಜಸ್ಥಾನವಾದ ಪರಮಪದ (ವೈಕುಂಠ) ವಾದರೋ, ಈ ಲೋಕಗ ಳಂತೆ ಮತ್ತೊಂದು ಕಾರಣದಿಂದ ಉದ್ಭವಿಸಿದುದುದಲ್ಲ. ಅದು ಎಂದೆಂದಿ ಗೂ ನಾಶವಿಲ್ಲದೆ ಶಾಶ್ವತವಾಗಿರುವುದು. ಅದನ್ನೇ ಬ್ರಹ್ಮ ಲೋಕವನ್ನು ವರು.) ಮತ್ತು ಆ ಪರಮಪುರುಷನ ಮಧ್ಯಪ್ರದೇಶದಿಂದ ಆತಲವೂ, ತೊಡೆಗಳಿಂದ ವಿತಲವೂ, ಮಂಡಿಗಳಿಂದ ಸುತಲವೂ, ಮೊಳಕಾಲುಗಳಿಂದ ತಲಾತಲವೂ, ಹರಡುಗಳಿಂದ ಮಹಾತಲವೂ, ಪಾದಾಗ್ರಗಳಿಂದ ರಸಾತಲವೂ, ಅಂಗಾಲಿ ನಿಂದ ಪಾತಾಳವೂ ಕಲ್ಪಿಸಲ್ಪಟ್ಟಿರುವುವು. ಇದರಿಂದ ಆ ಪರಮಪುರುಷನೇ ಲೋಕಸ್ವರೂಪನೆನಿಸಿರುವನು. ಇದಲ್ಲದೆ ಆ ಪರಮಪುರುಷನ ಅಂಗಾಲು ಮೊದಲಾಗಿ ನಾಭಿಯವರೆಗಿರುವ ಅವಯವಗಳಿಂದ ಭೂಲೋಕವೂ, ಮೇಲೆ ಕಂಠಪರಂತವಾಗಿರುವ ಅವಯವಗಳಿಂದ ಭುವರ್ಲೋಕವೂ, ಆತನ