ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೦ ಶ್ರೀಮದ್ಭಾಗವತವು [ಅಧ್ಯಾ. ೬. ತಿರಸ್ಸಿನಿಂದ ಸ್ವರ್ಲೋಕವೂ, ಕಲ್ಪಿತಗಳಾಗಿರುವುದೆಂದು ಲೋಕಸೃಷ್ಟಿ ಕ್ರಮವನ್ನು ಹೀಗೆ ಸಂಗ್ರಹಿಸಿಯೂ ಹೇಳುವುದುಂಟು. ಇಲ್ಲಿಗೆ ಐದನೆಯ ಅಧ್ಯಾಯವು. .. ( ಪುರುಷಸೂಕ್ತ ಕ್ರಮದಿಂದ ಪರಮಪುರುಷನ ಸ್ವರೂ). 1. ಪವನ್ನು ವಿವರಿಸಿದುದು, -wwwವಿರಾಗ್ನಿಭೂತಿವರ್ಣನವು++++ ತಿರುಗಿ ಬ್ರಹ್ಮದೇವನು ನಾರದನನ್ನು ಕುರಿತು, 'ನಾರದಾ! ಕೇಳು! ವಾಗಿಂದ್ರಿಯಕ್ಕೂ, ಆದಕ್ಕೆ ಅಧಿಷ್ಟಾನದೇವತೆಯಾದ ಅಗ್ನಿ ದೇವನಿಗೂ, ಆ ಪರಮಪುರುಷನ ಮುಖವೇ ಆಶ್ರಯಸ್ಥಾನವು. ದೇವತೆಗಳ ಆಹಾರವಾದ ಹ ವ್ಯ,ಪಿತೃಗಳ ಆಹಾರವಾದ ಕವ್ಯ, ಅವರಿಬ್ಬರಿಂದಲೂ ಭುಕ್ಯಶೇಷವಾದ ಆ ಮೃತ, ಈ ಮೂರುಬಗೆಯ ಅನ್ನ ದಲ್ಲಿರುವ ಷಡ್ತಿಧರಸಗಳಿಗೂ, ಮತ್ತು ನಮ್ಮ ರಸನೇಂದ್ರಿಯಕ್ಕೂ, ಆ ಇಂದ್ರಿಯಕ್ಕೆ ಆಧಿದೇವತೆ ಯಾದ ವರುಣನಿಗೂ, ಆ ಪರಮಪುರುಷನನಾಲಗೆಯೇ ಆಶ್ರಯಸ್ಥಾನವು ಸಮಸ್ತ ಜೀವರಾಶಿಗಳಾ ಣಗಳಿಗೂ, ಆ ಪ್ರಾಣಕ್ಕೆ ಅಧಿದೇವತೆಯಾದ ವಾಯುವಿಗೂ ಆತನ ನಾಸಾ ರಂಥಗಳೇ ಆಶ್ರಯಸ್ಥಾನವು. ಓಷಧಿಗಳಿಗೂ,ಅಶ್ವಿನೀದೇವತೆಗಳಿಗೂ,ಇಷ್ಟ ವಸ್ತುಲಾಭದಿಂದುಂಟಾಗುವ ಸುಖರೂಪವಾದಮೋದಕ,ಆಇಷ್ಟವಸ್ತು ವಿನಲ್ಲಿ ಮಮತೆಯಿಂದ ಹುಟ್ಟುವ ಸುಖರೂಪವಾದ ಪ್ರಮೋದ, ಅವನ ಫುಣೇಂದ್ರಿಯವೇ ಸ್ಥಾನವು, ಮತ್ತು ಕಪ್ಪ, ಬಿಳುಪು ಮೊದಲಾದ ವರ್ಣ ಗಳಿಗೂ, ಅವುಗಳನ್ನು ಪ್ರಕಾಶಗೊಳಿಸುವ ತೇಜಸ್ಸಿಗೂ, ಆತನ ಚಕ್ಷುರಿಂದ್ರಿ ಯವೇ ಸ್ಥಾನವು. ದ್ಯುಲೋಕಕ್ಕೂ, ಸೂರನಿಗೂ, ಆತನ ಕಣ್ಣುಗಳೆರಡೂ ಆ ವಾಸಸ್ಥಾನವು, ದಿಕ್ಕುಗಳಿಗೂ,ತೀರ್ಥಗಳಿಗೂ, ಆತನ ಕಿವಿಗಳು ಸ್ಯಾನವೆನಿಸು ವುವು. ಆಕಾಶಕ್ಕೂ, ಆಕಾಶಗುಣವೆನಿಸಿದ ಶಬ್ದಕ್ಕೂ, ಆತನ ಶೌತೇಂದ್ರಿಯ ವು ಆಶ್ರಯವೆನಿಸುವುದು.ಸಮಸ್ತ ವಸ್ತುಗಳ ಸಾರಾಂಶಗಳಿಗೂ,ಅವುಗಳಸ್‌o ದರಕ್ಕೂ ಆ ಪರಮಪುರಷನ ಶರೀರವೇ ಸ್ಥಾನವು, ಸ್ಪರ್ಶಗುಣಕ್ಕೂ,ವಾಯು ವಿಗೂ, ಸಮಸ್ತಯಜ್ಞಕ್ಕೂ ಅವನ ಚರ್ಮವೇ ಸ್ಥಾನವೆನಿಸುವುದು. ಸಮ ಸ್ವವೃಕ್ಷಗಳಿಗೂ, (ಯಜ್ಞಸಾಧನಗಳಾದ ವೃಕ್ಷಗಳಿಗೂ ಆತನ ದೇಹದಲ್ಲಿರುವ