ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೧ ಅಧ್ಯಾ ೬.] ದ್ವಿತೀಯಸ್ಕಂಧವು. ಕೂದಲುಗಳೇ ಸ್ಥಾನವು, ಕಲ್ಲು,ಲೋಹಗಳುಮೇಘಗಳು,ಮಿಂಚು ಇವುಗಳಿ ಗೆ ಆತನ ತಲೆಕೂದಲು, ವೀಸೆ, ಉಗುರು, ಮುಂತಾದುವುಗಳು ಸ್ಥಾನವೆನಿ ಸುವುವು, ವಿಶೇಷವಾಗಿ ಲೋಕಕ್ಷೇಮಕಾರಿಗಳಾದ ಇಂದ್ರಾಹಿಲೋಕಪಾ ಲಕರಿಗೆ ಆತನ ತೋಳುಗಳೇ ವಾಸಸ್ಥಾನವು, ಭೂಲೋಕ, ಭುವರ್ಲೋಕ ಗಳಿಗೆ ಆತನ ಮೂರಡಿಗಳು ಸ್ಥಾನವೆನಿಸುವುವು. ಸಮಸ್ಯಲೋಕದ ಕ್ಷೇ ಮಕ್ಕೂ, ಅದರ ಅಸಿಷ್ಯನಿವಾರಣೆಗೂ, ಇಷ್ಟಪ್ರಾಪ್ತಿಗೂ, ಆತನ ಪಾದ ವೇ ಆಶ್ರಯವು, ಜಲದ ವಿಠ್ಯವೆನಿಸಿದ ಶುಕ್ಲ, ಸೃಷ್ಟಿಗೂ, ಪರ್ಜನ್ಯ ದೇವತೆಗೂ, ಪ್ರಜಾಧಿಪತಿಗೂ, ಆ ಭಗವಂತನ ಪುರುಷಲಿಂಗಸ್ಥಾನವೇ ಆ ಶ್ರಯವು ಸಂತಾನಗಿ ನಡೆಸುವ ಸಂಭೋಗದಿಂದುಂಟಾದ ಆನಂದಕ್ಕೆ ಆತನ ಉಪcಯವೇ ಸವ್ರ. ಓ ನಾರದಾ ! ಯಮಮಿತ್ರರೆಂಬ ದೇವತೆಗಳಿಗೂ, ಮಲವಿಸರ್ಜನೆಗೂ ಆತನ ಪಾಯುವೆಂಬ ಇಂದ್ರಿಯವು ಸ್ಟಾ ನವೆನಿಸುವುದು. ಹಿಂಸೆ, ಮೃತ್ಯು, ನಿರುತಿ, ನರಕವೆಂಬಿವುಗಳಿಗೆ ಆತನ ಗುದ ಸ್ಥಾನವೇ ಆಶ್ರಯವು, ಅಲಕ್ಷಿ ಆಧರ, ಅಜ್ಞಾನವೆಂಬಿವುಗಳಿಗೆ ಆತನ ಕೃಷಿಭಾಗವು ಸ್ಥಾನವೆನಿಸುವುದು. ನಮ್ಮನದಿಗಳಿಗೆ ಆತನ ನಾಡಿಗಳೂ, ಪ ರೈತಗಳಿಗೆ ಆತನ ಅಸ್ಥಿಪಂಜರವೂ ಸ್ಥಾನವೆನಿಸುವುವು. ಪ್ರಕೃತಿಗೂ, ಅನ್ನಾ ಹಿಗಳಲ್ಲಿರುವ ರಸಕ್ಕೂ, ಸಮುದ್ರಗಳಿಗೂ, ಪ್ರಾಣಿಗಳ ಸಾವಿಗೂ, ಆತನ ಉದರಪ್ರದೇಶವೇ ಸ್ಥಾನವು ಧಕ, ನಮ್ಮ ಮಕ್ಕಳಾದ ಸನಕಾದಿಗಳಿ ಗೂ, ರುದ್ರನಿಗೂ, ಮಹತ್ತೆಂಬ ತತ್ತ್ವಕ್ಕೂ, ಆ ಪರಮಪುರುಷನ ಮನಸ್ಸೇ ಆಶ್ರಯವು. ಹೀಗೆ ಆ ಪರಮಪುರುಷನಿಂದುಂಟಾದ ಜಗತ್ತೆಲ್ಲವೂ, ಆತನ ವಿಭೂತಿಗಳೆನಿಸಿ, ಅವನಿಗೆ ಶರೀರಗೂಪವಾಗಿಯೂ ಇರುವುದರಿಂದ, ಈ ಪ್ರಪಂ ಚದಲ್ಲಿ ಅವನಿಗಿಂತಲೂ ಬೇರೆಯಾದ ವಸ್ತುವೊಂದೂ ಇಲ್ಲ. ನಾರದಾ ! ಮುಖ್ಯವಾಗಿ ಚತುರು ಖನಾದ ನಾನೂ, ನೀನೂ, ರುಗ್ರಮ. ಮೊದಲು ಹುಟ್ಟಿದ ಈ ಸನಕಾದಿಮಹರ್ಷಿಗಳೂ, ದೇವತೆಗಳೂ, ದಾನವ ರೂ, ಪರೂತಗಳೂ, ನಾಗರೂ, ಗಂಧರೂ, ಅಪ್ಪರಸ್ಸುಗಳೂ, ಯಕ್ಷ ರೂ, ರಾಕ್ಷಸರೂ, ಭೂತಗಣಗಳೂ, ಪನ್ನ ಗರೂ, ಪಶುಗಳೂ, ಪಿತೃಗಳೂ, ಸಿದ್ಧವಿದ್ಯಾಧರಚಾರಣರೂ, ಸಮಸ್ತವೃಕ್ಷಗಳೂ, ಇನ್ನೂ ಜಲದಲ್ಲಿಯೂ,