ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ೨ ಶ್ರೀಮದ್ಭಾಗವತವು [ಅಧ್ಯಾ. ೩. ಸ್ಥಲದಲ್ಲಿಯೂ, ಆಕಾಶದಲ್ಲಿಯೂ ಜೀವಿಸತಕ್ಕ ಸಮಸ್ಯಪ್ರಾಣಿಗಳೂ, ಗ್ರ ಹನಕ್ಷತ್ರತಾರೆಗಳೂ, ಮಿಂಚು, ಮೇಘ, ಮೊದಲಾದುವುಗಳೂ, ಇವೆಲ್ಲವೂ ಆ ಪರಮಪುರುಷನೆಂದೇ ತಿಳಿ! ಇನ್ನು ಹೆಚ್ಚು ಮಾತಿನಿಂದೇನು! *ಹಿಂದೆ ಹುಟ್ಟಿ ದುದಾಗಲಿ, ಈಗ ಹುಟ್ಟುತ್ತಿರುವುದಾಗಲಿ, ಮುಂದೆ ಹುಟ್ಟುವುದಾಗಲಿ, ಕದಲ್ಲಿ ಯಾವಯಾವ ವಸ್ತುವುಂಟೋ, ಅವೆಲ್ಲವೂ ಭಗವತ್‌ರೂಪವೇ! ಹೀಗೆ ಭೂತಭವಿಷ್ಯದ್ವರ್ತಮಾನಗಳಲ್ಲಿರುವ ಸಮಸ್ತ ವಸ್ತುಗಳೂ ಆತನಿಗೆ ಶರೀರ ಭೂತಗಳಾದುದರಿಂದ, ಆತನಿಗಿಂತ ಬೇರೆಯಾದ ಸ್ವತಂತ್ರವಸುವೊಂದಾ ದರೂ ಇಲ್ಲ. + ನಾಭಿಯಿಂದ ಒಂದು ಗೇಣಳತೆ: ಮೇಲೆ ನೆಲೆ ಗೊಂಡಿರುವ ನಮ್ಮ ಹೃದಯಕಮಲದಲ್ಲಿ ಅಡಗಿರುವ ಆ ಭಗವಂತನಿಂದಲೇ ಈ ಸಮಸ್ಯಜಗತ್ತೂ ಆವರಿಸಲ್ಪಟ್ಟಿರುವುದು. ಹೀಗೆ ಹೃದಯಾಂತರಾಮಿ ಯಾದ ಆ ಪರಮಪುರುಷನು ತನಗೆ ವಾಸಸ್ಥಾನವಾದ ಜೀವಶರಿರವನ್ನು ಒ ಭಭಾಗದಲ್ಲಿ ಸಂಪೂರ್ಣವಾಗಿ ವ್ಯಾಪಿಸಿ, ಶರೀರಸಹಿತವಾದ ಆ ಜೀವನನ್ನು ತನ್ನ ಅಧಿಕಾರಕ್ಕೊಳಪಡಿಸಿಕೊಂಡಿರುವನು. ಇದರಂತೆಯೇ ತನ್ನ ಶರೀರಕ್ಕಿಂ ತಲೂ ಹೋಗಿರುವ ವಸ್ತುಗಳನ್ನೂ ತನಗಧೀನವಾಗಿ ಮಾಡಿಕೊಂಡು, ಸತ್ವ

  • ಇಲ್ಲಿ ಪುರುಷ ಏವೇದಂ ಸತ್ವಂ ಯದೂತಂ ಯಚ್ಛಭವ್ಯಂ” ಎಂಬ ಶತ್ಯರ್ಥವು ಸೂಚಿತವಾಗಿದೆ, ಚರಾಚರಾತ್ರ ಕವಾತ ಪ್ರಪಂಚವು ಭಗವಂತನಿಗೆ ಶರೀರಭ ೧ತವೆಂದು ಹೇಳುವುದರಿಂದ, ಜೀವಶರೀರಗಳಿಗೆ ಭೇದವಿರುವಂತೆ, ಪರಮಾತ್ಮ ನನೂ, ಪ್ರಪಂಚವನೂ ಬೇರೆ ವಸ್ತುಗಳನ್ನಾಗಿ ಗ್ರಹಿಸಬಾರದು. ಏಕೆಂದರೆ, ನಾನು ರೂಪವಿಭಾಗಗಳೊಂದ ತೋರದಂತೆ ಸೂಕ್ಷವಸ್ಥೆಯಲ್ಲಿದ್ದ ಪ್ರಕೃತಿಪರುಷಕಾ ಲಗಳನ್ನು ಶರೀರವಾಗಿ ಹೊಂದಿದ ಪರಮಪುರುಷನೇ, ನಾಮರೂಪವಿಭಾಗಗಳಿಂದ ಕಾಣತಕ್ಕ ಸ್ಕೂಲಾವಸ್ಥೆಯನ್ನು ಹೊಂದಿದ ಪ್ರಕೃತಿ ಮೊದಲಾದ ಶರೀರದೊಡನೆ ಸ್ವ ಸ್ವರ ಪವಾದ ಜಗತ್ತಾಗಿ ಪರಿಣಮಿಸುವುದರಿಂದ, ಏಕತ್ವವೇ ಸಂಭವಿಸುವುದು “ಸ ರೈಂ ಖಲ್ವಿದಂಬ್ರಹ್ಮ” “ಅಯಮಾತ್ಮಾ ಬ್ರಹ್ಮ” (“ತತ್ವಮಸಿ” ಇತ್ಯಾದಿವೇದಾಂತವಾ ಕ್ಯಗಳಿಗೆ ಇದೇ ಅಭಿಪ್ರಾಯವು, - + ಇಲ್ಲಿ 'ಅಧೋ ನಿಷ್ಟಾವಿತಸ್ಕಾಂತು ನಾಭ್ಯಾಮುಪರಿ ತಿಷ್ಠತಿ, ಹೃದ ಯಂ ತದ್ವಿಜಾನೀಯಾಶ್ರಸ್ಯಾಯತನಂ ಮಹತ” ಎಂಬ ಶ್ರುತ್ಯಗಳು ಸೂಚಿತ ವಗಿವೆ,