ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೪ ಶ್ರೀಮದ್ಭಾಗವತವು [ಅಧ್ಯಾ. ೬. ಕ್ಲಿಯೇ ಅಡಗಿಸಿಟ್ಟಿರುವನು ಅದು ಈ ಪ್ರಕೃತಿಮಂಡಲಕ್ಕಿಂತಲೂ ಹೊರ ಗಾಗಿ,ಆ ಪರಮಪುರುಷನ ನಿವಾಸಸ್ಥಾನವಾಗಿರುವುದು. ಆ ಲೋಕವನ್ನು ಸೇ ರಿದವರುಮಾತ್ರವೇ ಎಂದೆಂದಿಗೂ ಮರಣವಿಲ್ಲದೆ, ಮರಣಭಯವೂ ಇಲ್ಲದೆ ಸಿರತಿಶಯಾನಂದವನ್ನನುಭವಿಸಬಲ್ಲರು. ಅಲ್ಲಿ ಸೇರಿದವರಿಗೆ ಯಾವವಿಧವಾದ ದುಃಖವೂ ಇರುವುದಿಲ್ಲ. ಆ ವೈಕುಂಠಲೋಕವೆಂಬುದು ಭಗವಭೂತಿಗಳಲ್ಲಿ ಮೂರುಸಾಲನ್ನೊಳಕೊಂಡು,ತ್ರಿಪಾದ್ವಿಭೂತಿಯೆನಿಸಿಪ್ರಕೃತಿಮಂಡಲಕ್ಕಿಂ ತಲೂ ಅತಿವಿಪುಲವಾಗಿರುವುದು ಅಲ್ಲಿ ಪುನರ್ಜನ್ಮದ ನಿತ್ಯಮುಕ್ಟ್ರುಮಾ ತ್ರವಾಸಮಾಡುವರು. ಉಳಿದ ನಾಲ್ಕನೆಯಭಾಗವು ಮಾತ್ರ ಏಕಪಾಶ್ವಭೂತಿ ಯಸಿಸಿ, ಈ ಮೂರುಲೋಕವನೊಳಕೊಂಡಿರುವದು. ಇದು ಸಂಸಾರಿಗಳಾ ದ ಜೀವರಾಶಿಗಳಿಗೆ ನಿವಾಸಸ್ಥಾನವು, ಅಹಂಕಾರ ಮಮಕಾರಾಗಳಿಗೂ,ವ ಣFಶ್ರಮ ನಿಬಂಧನೆಗಳಿಗೂ ಕಟ್ಟುಬಿದ್ದು, ಪುಣ್ಯಪಾಪರೂಪವಾದ ಕರ್ಮ ಗಳ ಫಲವನ್ನು ಅನುಭವಿಸತಕ್ಕವರಿಗೆ ಇದೇ ನಿವಾಸಸನವಾಗಿರುವುದು. ಈ ಲೋಕದಲ್ಲಿ ಜನನಮರಣಗಳಿಗೆ ಸಿಕ್ಕಿ ಬಿದ್ದಿರುವ ಸಂಸಾರಿಗಳಲ್ಲಿಯೂಕೋಡ ಭೋಗಾಪೇಕ್ಷಿಗಳೆಂದೂ, ಮೋಕ್ಷಾಪೇಕ್ಷಿಗಳೆಂದೂ ಎರಡು ಬಗೆಯುಂಟು. ಆ ಎರಡು ಬಗೆಯವರಲ್ಲಿ, ಭೋಗಾಪೇಕ್ಷಿಗಳು ತಮ್ಮ ತಮ್ಮ ಕರ್ಮಾನುಸಾ ರವಾಗಿ ಭೋಗಗಳನ್ನನುಭವಿಸುವುದಕ್ಕೆ ತಕ್ಕ ಸ್ಥಾನಗಳಾದ ಸ್ವರ್ಗಾದಿ ಲೋಕಗಳನ್ನು ಸೇರಬೇಕಾದರೆ, ಅವರು ಹೋಗಬೇಕಾದ ದಾರಿಯೊಂ ದುಂಟು. ಇದಕ್ಕೆ ಧೂಮಾದಿಮಾರ್ಗವೆಂದು ಹೆಸರು. ಇದನ್ನು ಬಿಟ್ಟು ಮೋ ಕಕ್ಕೆ ಹೋಗಬೇಕಾದ ದಾರಿಯೇ ಬೇರೆ! ಅದನ್ನು ಅರ್ಚಿರಾದಿಮಾರ್ಗವೆಂ ದು ಹೇಳುವರು. ಇಂತವರು ಕರ್ಮಗಳನ್ನು ತೊರೆದು, ಪ್ರಕೃತಿಸಂಬಂಧ ವಿಲ್ಲದೆ, ಆಪ್ರಾಕೃತವಾದ ದಿವ್ಯಶರೀರದೊಡನೆ ಭಗವಂತನನ್ನು ಅನುಭವಿ ಸುವರು.ಧೂಮಾದಿಮಾರ್ಗದಿಂದ ಸ್ವರ್ಗ ಮೊದಲಾದ ಸ್ಥಾನಗಳನ್ನು ಸೇರ ಬೇಕೆಂದು ಕೋರುವವರಿಗೆ,ಯಾಗಾಟಕರ್ಮರೂಪಗಳಾದ ಅವಿದ್ಯೆಯೇ ಸಾ ಧನವು.ಅರ್ಚಿರಾದಿಮಾರ್ಗದಿಂದ ವೈಕುಂಠಲೋಕವನ್ನು ಸೇರುವುದಕ್ಕೆ ಭಗ ವದುಪಾಸನವೆಂಬ ವಿದ್ಯೆಯೊಂದೇ ಮುಖ್ಯ ಸಾಧನವು. ಜೀವಾತ್ಮನಿಗೆ ಈ ಮೇಲೆ ಹೇಳಿದ ಎರಡು ಸ್ಥಾನಗಳಿಗೂ ಪ್ರವೇಶವುಂಟು. ಇವನು ಅವಕ್ಕೆ