ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೬ ಶ್ರೀಮದ್ಭಾಗವತವು [ಅಧ್ಯಾ ೬, ಭಾಗವನ್ನೂ ವ್ಯಾಪಿಸಿ ನಿಲ್ಲುವಂತೆ,ಭಗವಂತನೂಕೂಡ ಆ ಅಂಡವೆಲ್ಲವನ್ನೂ ತನ್ನ ಸ್ವರೂಪದಿಂದ ವ್ಯಾಪಿಸಿದನು. ಆದುದರಿಂದ ಭಗವಂತನು ಆ ಪ್ರಕೃತಿ ಗಿಂತಲೂ ವಿಲಕ್ಷಣನಾಗಿಯೂ, ತನಗೆ ಶರೀರಭೂತಗಳಾದ ಚೇತನಾಚೇತನ ಗಳಲ್ಲಿರುವ ದೋಷಗಳಿಗೆ ಭಾಗಿಯಾಗದೆಯೂ ಇರುವನೆಂದು ತಿಳಿ ! ಆದರೆ ಸಮಸ್ತವೂ ಆ ಪುರುಷಸ್ವರೂಪವೇ ಆಗಿದ್ದ ಪಕ್ಷದಲ್ಲಿ, ಯಜ್ಞ ಯಾಗಾಗ ಳೂ, ಅವುಗಳನ್ನು ನಡೆಸುವುದಕ್ಕೆ ಬೇಕಾದ ಸಾಧನಸಾಮಗ್ರಿಗಳೂ, ಅವನಿ ಗಿಂತಲೂ ಬೇರೆಯಾಗಿರುವುದೆಂದು ಹೇಳುವುದಕ್ಕಿಲ್ಲವಷ್ಟೆ ? ಹಾಗಿದ್ದರೆ ಆ ಯಾಗಾದಿಗಳಿಂದ ಅವನನ್ನು ಆರಾಧಿಸಬೇಕೆಂಬುದು ಹೇಗೆ ಎಂದು ನಿನಗೆ ಶಂಕೆಯುಂಟಾಗಬಹುದು. ಅದಕ್ಕೂ ಸಮಾಧಾನವನ್ನು ಹೇಳುವೆನು ಕೇಳು. ಆ ಪರಮಪುರುಷನು ಅಸಾಧಾರಣಮಹಿಮೆಯುಳ್ಳವನು ಮೊದಲು ಆ ವಿ ರಾಮ್ಪುರುಷನ ನಾಭಿಕಮಲದಿಂದ ಚತುರ್ಮುಖನಾದ ನಾನು ಹುಟ್ಟಿದೆನು. ಅವನನ್ನು ಯಾಗಗಳಿಂದ ಆರಾಧಿಸಬೇಕೆಂದು ನನ್ನ ಮನಸ್ಸಿಗೆ ತೋರಿತು. ಆಗ ಆ ಪರಮಪುರುಷನ ಅವಯವಗಳುಹೊರತು ಬೇರೆ ಯಾವ ಯಾ ಗೋಪಕರಣಗಳೂ ನನಗೆ ಗೋಚರಿಸಲಿಲ್ಲ. ನಾನು ಇದಕ್ಕಾಗಿ ಚಿಂತಿ ಸುತ್ತ, ಆ ಪರಮಪುರುಷನ ಅವಯವಗಳನ್ನೇ ಮನಸ್ಸಿನಲ್ಲಿ ದೃಢವಾಗಿ ನಿಲ್ಲಿಸಿ ಕೊಂಡು ಧ್ಯಾನಿಸುತ್ತಿದ್ದನು. ಆ ಅವಯವಗಳೆ ನನಗೆ ಯಾರೋಪಕರಣಗ ಳಾಗಿ ಒದಗಿ ಬಂದುವು. ಯಜ್ಞಕ್ಕೆ ತಕ್ಕ ಪಶುಗಳೂ, ಯೂಪಸ್ತಂಭ ದಲಾದುವುಗಳಿಗೆ ಉಪಯೋಗಪಡುವ ವೃಕ್ಷಗಳೂ, ಇದೋ ನಾನಿರುವ ಈ ಯಾಗಭೂಮಿಯೂ, ಯಾಗಕ್ಕೆ ತಕ್ಕ ವಸಂತಾಟಕಾಲವೂ, ಪುರೋಡಾಶ ಮೊದಲಾದ ವಸ್ತುಗಳೂ, ಅದಕ್ಕೆ ಬೇಕಾದ ಬತ್ತ, ಗೋಧುವೆ, ಮುಂತಾದ ಔಷಧಿಗಳೂ ತುಪ್ಪ ಮೊದಲಾದುವೂ, ಸೋಮರಸ ಮೊದಲಾದ ರಸಗಳೂ, ಸ್ವರ್ಣಾಹಲೋಹಗಳೂ,ಕಪಾಲಮೊದಲಾದುವುಗಳಿಗೆ ಬೇಕಾದ ಮಣ್ಣು, ನೀರು ಮುಂತಾದುವೂ,ಋಗ್ಯಜುಸ್ವಾಮಗಳೆಂಬ ವೇದಗಳೂ, ಚತುರ್ಹೋ ತ್ರಮಂತ್ರಗಳಿಂದ ಪ್ರಕಾಶಿತಗಳಾದ ಕರ್ಮಗಳೂ, ಜ್ಯೋತಿಷ್ಪಮಾಡಿ ನಾಮಗಳೂ, ಸ್ವಾಹಾಕಾರವೇ ಮೊದಲಾದ ಮಂತ್ರಗಳೂ, ದಕ್ಷಿಣೆಗಳೂ ವ್ರತಗಳೂ, ದೇವತಾಮಕ್ರಮವೂ, ಪ್ರಯೋಗವಿಥಿಗಳೂ, ಸಂಕಲ್ಪವೂ