ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೮ ಶ್ರೀಮದ್ಭಾಗವತವು [ಅಧ್ಯಾ.೬. ಯೂ ಅವನೊಬ್ಬನಲ್ಲಿರುವುದೇಕೊರತು, ಚೇತನಾಚೇತನರೂಪವಾದ ಈ ಪ್ರಪಂಚದಲ್ಲಿ, ಆ ಭಗವಂತನಿಗಿಂತಲೂ ಬೇರೆಯಾದ ಸ್ವತಂತ್ರವನ್ನು ವಾ ಗಲಿ, ಅವನಿಗೆ ಮೇಲಾದುದಾಗಲಿ, ಅವನಿಗೆ ಸಮವಾದುದಾಗಲಿ, ಯಾವು ದೊಂದೂ ಇಲ್ಲವೆಂದು ತಿಳಿ ! ಇದನ್ನು ನೀನು ದೃಢವಾಗಿ ನಂಬು!(ನೀನು ಆ ಭಗವಂತನ ನಿಜಸ್ಥಿತಿಯನ್ನು ಇನ್ನೂ ಚೆನ್ನಾಗಿ ತಿಳಿಯದವನಾದುದರಿಂದ, ನನ್ನನ್ನೇ ಸೃಷ್ಟಿಕರ್ತನನ್ನಾಗಿ ತಿಳಿದು, ಪ್ರಪಂಚದಲ್ಲಿ ನನಗೆಮೇಲೆ ಬೇ ರೊಬ್ಬರೂ ಇಲ್ಲವೆಂದು ಭ್ರಮೆಗೊಂಡಿರುವಂತಿದೆ ! ನನಗೂ ಆತನೇ ಪ್ರ ಭುವು ಆತನೇ ನನ್ನಲ್ಲಿ ಅಂತರ್ಯಾಮಿಯಾಗಿದ್ದು ನನ್ನ ನ್ನು ಆಯಾ ಕಾರ್ಯಗಳಲ್ಲಿ ಪ್ರೇರಿಸುತ್ತಿರುವನು) ನಾರದಾ ! ನನ್ನ ಮಾತನ್ನು ಎಂದಿ ಗೂ ಸುಳ್ಳೆಂದು ತಿಳಿಯಬೇಡ ! ನನ್ನ ಮನಸ್ಸಿನ ಭಾವನೆಯೂಕೂಡ ಸು ೪ಾಗಲಾರದು! ಆ ಭಗವಂತನ ಗುಣವರ್ಣನಗಳಿಂದುಂಟಾದ ಮಹಿಮೆಯಿಂ ದ, ನನ್ನ ಬಾಯಲ್ಲಿ ಹೊರಟ ವಾಕ್ಯವೊಂದಾದರೂ ಅಸತ್ಯವಾಗಲಾರದು. ನನ್ನ ಇಂದ್ರಿಯಗಳೂ ದುರ್ಮಾರ್ಗಕ್ಕೆ ಹೋಗಲಾರವು. ನಾನು ಶ್ರದ್ಧೆ ಯಿಂದ ಭಗವದುಪಾಸನವನ್ನು ಮಾಡುತ್ತಿರುವುದೇ ಇವಕ್ಕೆಲ್ಲಾ ಕಾರ ಣವು. ಆ ಭಗವಂತನ ಅನುಗ್ರಹಬಲದಿಂದಲ್ಲದೆ ನನ್ನ ಶಕ್ತಿಯಿಂದ ಯಾ ವುದೂ ನಡೆಯಲಾರದು, ವತ್ಥ ನಾರದಾ ! ಮತ್ತೊಂದಾಶ್ಚರ್ಯವನ್ನು ಹೇಳುವೆನು ಕೇಳು! ಆ ಭಗವದನುಗ್ರಹದಿಂದ ನಾನು ಎಷ್ಟೊವಿಧದಲ್ಲಿ ಮೇಲೆಯನ್ನು ಪಡೆದಿರುವೆನು, ಸಮಸ್ತವೇದಗಳೂ ನನಗೆ ಹೃದ್ಯತ ವಾಗಿ ನಾನೇ ವೇದಮಯನೆನಿಸಿಕೊಂಡಿರುವೆನು, ಅನೇಕತಪಸ್ಸುಗಳ ನ್ನು ಮಾಡಿ ತಪೋಮಯನೆನಿಸಿರುವೆನು. ಮರೀಚಿ ಮೊದಲಾದ ನವಬ್ರ ಹ್ಮರಿಂದಲೂ ನಾನು ಎಷ್ಟೇ ಗೌರವಪೂರ್ವಕವಾಗಿ ನಮಸ್ಕರಿಸಲ್ಪಡು ತಿರುವೆನು. ಆ ಭಗವದನುಗ್ರಹದಿಂದಲೇ ಜ್ಞಾನಸಂಪತ್ತನ್ನೂ ಪಡೆದಿ ರುವೆನು. ಅಂತಹ ನಾನು ಎಷ್ಟೊಶ್ರದ್ದೆಯಿಂದ ನಿರ್ವಿಘು ವಾದ ಯೋ ಗವನ್ನವಲಂಬಿಸಿ, ಆ ಭಗವಂತನನ್ನು ಧ್ಯಾನಿಸುತ್ತಿದ್ದರೂ, ತನ್ನ ಮಾಯಾ ಪ್ರಭಾವದಿಂದ ಇತರರಿಗೆ ಯಥಾಸ್ಥಿತವಾಗಿ ತನ್ನ ನಿಜವನ್ನು ಕಾಣಿಸದ ಆ ಭಗವಂತನ ಸ್ವರೂಪಗುಣಗಳನ್ನು ನಾನೂ ಹೀಗೆಂದು ನಿಶ್ಚಯಿಸಿ ತಿಳಿಯಲಾ