ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೯ ಅಧ್ಯಾ, ೬.] ದ್ವಿತೀಯಸ್ಕಂಧವು. ರದಿರುವೆನು. ನನ್ನ ಸ್ಥಿತಿಯೇ ಹೀಗಿರುವಾಗ,ಇತರಜೀವರಾತಿಗಳು ಹೇಗೆತಾನೇ ಆತನ ನಿಜಸ್ಥಿತಿಯನ್ನು ತಿಳಿಯಬಲ್ಲುವು? ತನ್ನನ್ನು ಮರೆಹೊಕ್ಕವರಿಗೆ ಸಂಸಾ ರಭಯವನ್ನು ತಪ್ಪಿಸಿ, ಶುಭವನ್ನು ಕೈಗೂಡಿಸತಕ್ಕವುಗಳಾಗಿಯೂ, (ಶುಭಾ ಶ್ರಯಗಳಾಗಿಯೂ) ಸರ್ವಜನಸೇವ್ಯಗಳಾಗಿಯೂ, ಇರುವ ಆ ಭಗವಂತನ ಪಾದಾರವಿಂದಗಳನ್ನು ನಾನು ದೃಢಮನಸ್ಸಿನಿಂದ ನಂಬಿ ನಿಂತಿರುವೆನು.ವಾ ಯುವನ್ನು ಕೈಯಿಂದಹಿಡಿಯುವುದು ಹೇಗೆ ಅಸಾಧ್ಯವೋ,ಹಾಗೆ ಸ್ವಮಾಯೆ ಯನ್ನು ತಾನೇ ಹಿಡಿದಿರುವ ಆತನ ನಿಜಸ್ಥಿತಿಯನ್ನು ಗ್ರಹಿಸಲು ನಾನೂ ಸಮ ರ್ಧನಲ್ಲ!ನೀವೂ ಸಮರ್ಥರಲ್ಲ! ರುದ್ರನಾದರೂ ಅದನ್ನು ತಿಳಿಯಲಾರನು!ಇಂ ತಹ ಜ್ಞಾನಿಗಳಿಗೇ ಅಗೋಚರನಾದ ಆ ಪರಮಪುರುಷನ ನಿಜಸ್ಥಿತಿಯನ್ನು ತಿಳಿಯಬೇಕಾದರೆ, ಸಾಮಾನ್ಯರಾದ ಬೇರೆ ದೇವತೆಗಳಿಂದಾಗಿ, ಮನುಷ್ಯರಿಂ ದಾಗಲಿ ಸಾಧ್ಯವೆ? ಎಂದಿಗೂ ಸಾಧ್ಯವಲ್ಲ ! ನಮ್ಮೆಲ್ಲರಿಗೂ ಆ ಭಗವಂತನ ಮಾಯೆಯು ಆವರಿಸಿಕೊಂಡಿರುವುದರಿಂದ, ನಾವೊಬ್ಬರೂ ನಿಜನ್ನರಿಯಲಾ ರದೆ, ಅವನಿಂದ ನಿರ್ಮಿತವಾದ ಅಚೇತನವಾದ ಈ ಶರೀರವನ್ನೂ ಆತ್ಮವೆಂ ದೇ ಭ್ರಮಿಸುತ್ತಿರುವು. ನಮ್ಮ ದೇಹಕ್ಕೂ, ಆತ್ಮಕ್ಕೂ, ಇರುವ ಭೇದವ ನೇ ತಿಳಿದುಕೊಳ್ಳಲಾರದ ನಮಗೆ, ಆ ಪರಮಾತ್ಮನ ತತ್ತ್ವವನ್ನು ತಿಳಿ ಯಬೇಕೆಂದರೆ ಹೇಗೆತಾನೇ ಸಾಧ್ಯವು? < ಆದರೆ ಆ ಮಾಯೆಯ ಸಂಬಂ ಧವನ್ನು ತಪ್ಪಿಸಿಕೊಳ್ಳುವದಕ್ಕೆ ನಮಗೆ ಉಪಾಯವೇನೂ ಇಲ್ಲವೆ ?” ಎಂದು ನೀನು ಕೇಳಬಹುದು. ಅದಕ್ಕೂ ಸುಲಭೋಪಾಯಗಳು ಕೆಲವುಂಟು. ನಮ್ಮಂತಿರುವವರೆಲ್ಲರೂ ಆ ಭಗವಂತನ ಅವತಾರಚರಿತ್ರಗಳನ್ನು ಕೀರ್ತಿಸಿ ಗಾನಮಾಡುವುದೊಂದೇ ನಮ್ಮನ್ನು ನಾವು ಉದ್ಧರಿಸಿಕೊಳ್ಳುವುದಕ್ಕೆ ಬೇ ಕಾದ ಮುಖ್ಯೋಪಾಯವು, ಅವನ ನಿಜಸ್ಥಿತಿಯನ್ನು ನಾವು ಬೇರೆ ತಿಳಿಯ ಲಾರೆವು. ಅವನ ಅವತಾರಚರಿತ್ರಗಳನ್ನು ನಾವು ಭಕ್ತಿಯಿಂದ ಕೀರ್ತಿಸು ತಿದ್ದು, ಅದರಿಂದಲೇ ನಾವು ಅವನ ಮಾಯೆಯನ್ನು ತಪ್ಪಿಸಿಕೊಳ್ಳಬೇಕೇ ಹೊರತು ಉಪಾಯಾಂತರವಿಲ್ಲ. ಅಂತಹ ಮಹಾಮಹಿಮೆಯುಳ್ಳ ಭಗವಂತ ನಿಗೆ ಈಗ ನಾವು ಮಾಡಬೇಕಾದುದು, ಇದೋ! ನಮ್ಮಿಂದ ಸುಲಭವಾಗಿ ಸಾಧ್ಯವಾದ ಈ ನಮಸ್ಕಾರವುಹೊರತು ಬೇರೆಯಲ್ಲ. ನಾರದಾ ! . ಆದ