ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ೧೫ ರೂಪವಾದ ಆ ಭಾಗವತದ ಮಹಿಮೆಯನ್ನು ಹೇಳುವೆವು.ಭಾಗವತದ ಕಥೆಯ ನ್ನು ಕಿವಿಯಿಂದ ಕೇಳಿದಮಾತ್ರದಿಂದಲೇ ಮುಕ್ತಿಯು ಕರಗತವಾಗುವುದು. ಶ್ರೀಮಹಾವಿಷ್ಣುವು ಯಾವಾಗಲೂ ಅಂತವರ ಮನಸ್ಸಿನಲ್ಲಿ ನೆಲೆಗೊಳ್ಳುವನು. ಭಾಗವತವೆಂಬುದು ಹದಿನೆಂಟುಸಹಸ್ರಗ್ರಂಥಗಳುಳ್ಳದಾಗಿ, ಹನ್ನೆರಡುಸ್ಕಂ ಧಗಳಾಗಿ ವಿಭಾಗಿಸಲ್ಪಟ್ಟು, ಪರೀಕ್ಷಿದ್ರಾಜನಿಗೂ, ಶುಕಮಹರ್ಷಿಗೂ ನಡೆದ ಸಂವಾದರೂಪವಾಗಿರುವುದು. ಭಾಗವತಕಥೆಯು ಕಿವಿಯಲ್ಲಿ ಬೀಳುವವ ರೆಗೆ ಮಾತ್ರವೇ ಮನುಷ್ಯನು ಅಜ್ಞಾನವಶನಾಗಿ ಸಂಸಾರದಲ್ಲಿ ನರಳುತ್ತಿ ರುವನು. ಅನೇಕಶಾಸ್ತ್ರಗಳನ್ನು ಕೇಳಿದರೂ, ಪರಸ್ಪರ ವಿರೋಧದಿಂದ ಕೇವಲ ಫ್ರಾಂತಿಜನಕಗಳಾದ ಪುರಾಣಗಳನ್ನು ಕೇಳಿದರೂ, ಅಷ್ಟೊಂದು ಫಲವು ಲಭಿಸಲಾರದು. ಮೋಕ್ಷಪ್ರಾಪ್ತಿಗೆ ಈ ಭಾಗವತಕಥೆಯೊಂದೇ ಮುಖ್ಯ ಕಾರಣವು. ಸಾವಿರಾರು ಅಶ್ವಮೇಧಗಳನ್ನು ನಡೆಸಿದರೂ, ನೂರಾರು ವಾಜ ಬೇಯಗಳನ್ನು ನಡೆಸಿದರೂ, ಈ ಪುಣ್ಯಕಥೆಯ ಕಲಾಮಾತ್ರಕ್ಕೂ ಎಣೆಯಾ ಗಲಾರದು. ಗಂಗೆ, ಕಾಶಿ, ಪುಷ್ಕರ, ಪ್ರಯಾಗೆ, ಮುಂತಾದ ಅನೇಕ ಪುಣ್ಯತೀರ್ಥಗಳನ್ನು ಸುತ್ತಿಬಂದರೂ ಈ ಕಥಾಶ್ರವಣದಿಂದುಂtಾಗುವ ಫ ಲಕ್ಕೆ ಸಮನಾಗಲಾರದು. ನಾರದಾ ! ನೀನು ಉತ್ತಮಗತಿಯನ್ನ ವೀಕ್ಷಿಸು ವವನಾದರೆ, ಅದರಲ್ಲಿ ಅರ್ಧಶ್ಲೋಕವನ್ನಾಗಲಿ, ಒಂದು ಶ್ಲೋಕಪಾದ ವನ್ನಾಗಲಿ ನಿನ್ನ ಬಾಯಿಂದುಚ್ಚರಿಸಿದರೆ ಸಾಕು ! ವೇದಗಳಾಗಲಿ, ಪುರು ಷಸೂಕ್ತವಾಗಲಿ, ವ್ಯಾದಶಾಕ್ಷರಮಂತ್ರವಾಗಲಿ, ಶ್ರೀಮಹಾವಿಷ್ಣುವಾ ಗಲಿ, ಈ ಭಾಗವತಕಥೆಗಿಂತ ಬೇರೆಯಾದುದಲ್ಲ. ಈ ಭಾಗವತಕಥೆಯನ್ನು ಅರ್ಥಜ್ಞಾನಪೂರೈಕವಾಗಿ ಯಾವನು ಓದುವನೋ, ಅವನಿಗೆ ಕೋಟಿ ಜನ್ಮಗಳಿಂದ ಸಂಚಿತವಾದ ಪಾಪವೂಕೂಡ ನಿವೃತ್ತವಾಗುವುದರಲ್ಲಿ ಂದೇಹವಿಲ್ಲ. ಈ ಪುಣ್ಯಕಥೆಯಲ್ಲಿ ಒಂದು ವಾಕ್ಯವನ್ನು ಪಠಿಸಿದರೂಕೂಡ ಆನೇಕರಾಜಸೂಯಾಶ್ವಮೇಧಗಳ ಫಲವುಂಟಾಗುವುದು. ಅತ್ಯಂಕಾಲದಲ್ಲಿ ಈ ಕಥಾಶ್ರವಣವನ್ನು ಮಾಡಿದವರಿಗೆ ಶ್ರೀಮನ್ನಾರಾಯಣನು ತಾನಾಗಿ * ಮುಕ್ತಿಯನ್ನು ಕೈಗೂಡಿಸುವನು, ಈ ಕಥೆಯನ್ನು ಒಂದಾವರ್ತಿಯಾ ದರೂ ಕಿವಿಯಿಂದ ಕೇಳದವನ ಜನ್ಮವೇ ಕೇವಲನಿರರ್ಥಕವು. ಈ ಭಾಗವತ