ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ, ೬] ದ್ವಿತೀಯಸ್ಕಂಧವು. ೨೬೧ ದುಂಟಾಗತಕ್ಕ ವಿಕಾರಗಳೂ, ಸತ್ವರಜಸ್ತಮೋಗುಣಗಳೂ, ಜ್ಞಾನೇಂದ್ರಿ ಯಕರ್ಮೇಂದ್ರಿಯಗಳೂ, ಅಂತರಿಕ್ಷವೂ, ಸ್ವರ್ಗವೂ, ಸ್ಥಾವರಜಂಗಮ ಗಳೂ, ನಾನೂ, ರುದ್ರನೂ, ಯಜ್ಞಸ್ವರೂಪನಾದ ವಿಷ್ಣುವೂ, ದಕ್ಷಾದಿ ಪ್ರಜಾಪತಿಗಳೂ, ನಿನ್ನಂತಹ ಋಷಿಗಳೂ, ಇಂದ್ರಾದಿದೇವತೆಗಳೂ, ಪಕ್ಷಿ ಶ್ರೇಷ್ಠರೂ, ಪಾತಾಳಲೋಕಾಧಿಪತಿಗಳಾದ ವಾಸುಕಿ ಮೊದಲಾದವರೂ, ಭೂಲೋಕಕೊಡೆಯರಾದ ರಾಜರೂ, ಯಕ್ಷಗಂಧರ್ವವಿಧ್ಯಾಧರರೂ, ಚಾರ ಇರೂ, ರಾಕ್ಷಸರೂ, ನಾಗರೂ, ಗಜಪತಿಗಳೂ, ಋಷಿಗಳಲ್ಲಿ ಮೇಲ್ಮೀಯ ಳ್ಳವರೂ, ಪಿತೃದೇವತೆಗಳಲ್ಲಿ ಪ್ರಧಾನರೂ, ದೈತ್ಯದಾನವಸಿದ್ಧೇಶ್ವರರೂ, ಭೂತಪ್ರೇತಪಿಶಾಚಾಧಿಪತಿಗಳೂ, ಜಲಚರಸ್ಥಲಚರಗಳಲ್ಲಿ ಪ್ರಧಾನರೆನಿಸಿ ಕೊಂಡವರೂ, ಮೃಗಶ್ರೇಷ್ಠಗಳೂ, ಇವರೆಲ್ಲರೂ ಆ ಭಗವಂತನ ವಿಭೂ ತಿಗಳೆಂದೇ ತಿಳಿ ! ಇಷ್ಟು ಮಾತ್ರವೇ ಅಲ್ಲದೆ, ಲೋಕದಲ್ಲಿ ಯಾವುದು ಐಶ್ವ ರ್ಯವುಳ್ಳುದೋ, ಯಾವುದು ತೇಜಸ್ಸುಳ್ಳುದೊ, ಯಾವಯಾವುದರಲ್ಲಿ ಧೈರ್ಯೊತ್ಸಾಹವೇಗಗಳ ಅತಿಶಯವುಂಟೋ, ಯಾವುದರಲ್ಲಿ ಧಾರಣಾ ಸಾಮರ್ಥ್ಯವಿರುವುದೋ, ಯಾವುದರಲ್ಲಿ, ಬಲ, ತಾಳ್ಮೆ, ಮುಂತಾದ ಗುಣಗ ಳುಂಟೋ, ಆ ವಸ್ತು ಸಮುದಾಯಗಳೆಲ್ಲವೂ ಆ ಭಗವಂತನ ವಿಭೂತಿಯೆಂದೇ ತಿಳಿ! ಮತ್ತು, ಕಾಂತಿ, ಲಜ್ಜೆ, ಅಧಿಕಾರಸಂಪತ್ತು, ಬುದ್ಧಿ, ಇವುಗಳನ್ನುಳ್ಳ ಸಮಸ್ತ ವಸ್ತುಗಳೂ, ಅತ್ಯಾಶ್ಚರ್ಯಕ್ಕೆಡೆಯಾದುವುಗಳೂ, ಇವೆಲ್ಲವೂ, ಕರ್ಮಸಂಬಂಧವಿಲ್ಲದೆ ತನಗೆ ತಾನೇ ಸ್ಟೇಚ್ಛೆಯಿಂದ ದಿವ್ಯಮಂಗಳವಿಗ್ರಹವ ನ್ನು ಧರಿಸಿದ ಆ ವಿರಾಟ್ಟುರುಷನ ವಿಭೂತಿಗಳೆಂದೇ ತಿಳಿ ! ನಾರದಾ ! ಈ ವಿಧವಾದ ಸ್ವರೂಪವುಳ್ಳ ವಿರಾಟ್ಟುರುಷನೇ ಭಗವಂತನ ಮೊದಲನೆಯ ಅವ ತಾರವು, ಇನ್ನೂ ಆತನ ಅವತಾರಗಳು ಎಣಿಸಲಾರದಷ್ಟು ಅನಂತವಾ ಗಿರುವುವು. ಆ ಮಹಾಪುರುಷನು ಆಯಾ ಅವತಾರಗಳಲ್ಲಿ ನಡೆಸಿದ ಆದ್ಭುತ ಕಾರ್ಯಗಳನ್ನು ಇಷ್ಟೊಂದು ನಿರ್ಣಯಿಸುವುದಕ್ಕೂ ಸಾಧ್ಯವಿಲ್ಲ. ಆದುದ ರಿಂದ ಆ ಅವತಾರಗಳಲ್ಲಿ ಪ್ರಸಿದ್ಧವಾದ ಕೆಲವನ್ನು ಮಾತ್ರ ನಿನಗೆ ತಿಳಿಸು ವೆನು ಕೇಳು, ಅಸತ್ಕಥೆಗಳನ್ನು ಕೇಳುವುದರಿಂದ ಕಿವಿಗಳಿಗುಂಟಾದ ಮಾಲಿ ನ್ಯವನ್ನು ನೀಗಿಸತಕ್ಕವುಗಳಾಗಿಯೂ, ಕರ್ಣಾಮೃತಪ್ರಾಯವಾಗಿಯ