ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೭.] ದ್ವಿತೀಯಸ್ಕಂಧವು. ೨೬೩ ನ್ಯೂ ಪರಿಹರಿಸಿದನು. ಇದನ್ನು ನೋಡಿ ಇವನಿಗೆ ಮಾತಾಮಹನಾದ ಸ್ವಾಯಂಭುವಮನುವು, ಆ ಸುಯಜ್ಞನ ಕಾರ್ಯಕ್ಕಾಗಿ ಸಂತೋಷಿಸಿ, ಲೋಕಾರ್ತಿಹರನಾದ ಈತನಿಗೆ ಹರಿಯೆಂಬ ಹೆಸರನ್ನೂ ಕೊಟ್ಟನು. ಹೀಗೆ ದೇವತೆಗಳ ಉತ್ಪತ್ತಿಗೂ, ಲೋಕಬಾಧೆಯ ನಿವೃತ್ತಿಗೂ ಕಾರಣವಾದ ಈ ಅವತಾರದಲ್ಲಿ, ಈತನಿಗೆ ಸುಯಜ್ಞನೆಂದೂ, ಹರಿಯೆಂದೂ ನಾಮಭೇದ ವುಂಟಾಯಿತು. ++ಕಪಿಲಾವತಾರವ•w ಆಮೇಲೆ ಆ ಭಗವಂತನೇ, ಕರ್ದಮಪ್ರಜಾಪತಿಗೆ ದೇವಹೂತಿಯೆಂಬ ಭಾರ್ಯೆಯಲ್ಲಿ ಕಪಿಲರೂಪದಿಂದವತರಿಸಿದನು. ಇವನಿಗೆ ಒಂಬತ್ತು ಮಂದಿ ಕನೈಯರು ಸಹೋದರಿಯರಾಗಿ ಹುಟ್ಟಿದರು. ಹೀಗೆ ಕಪಿಲಾವತಾರವನ್ನೆ ಆದ ಭಗವಂತನು, ತನ್ನ ತಾಯಿಯಾದ ದೇವಹೂತಿಗೆ ಸಾಂಖ್ಯವನ್ನು ಪದೇ ಶಿಸಿದನು. ಈ ಉಪದೇಶದಿಂದ ದೇವಹೂತಿಯು ಆತ್ಮಜ್ಞಾನವನ್ನು ಪಡೆದು, ಪಾಪಸಂಬಂಧವನ್ನು ಬಿಟ್ಟು, ಮುಕ್ತಿಯನ್ನು ಹೊಂದಿದಳು. ಇದೇ ಕಪಿಲಾವತಾರವು. -w+ದತ್ತಾತ್ರೇಯಾವತಾರವು.++ಹಿಂದೆ ಅತ್ರಿಮುನಿಯು ಪತ್ರವನ್ನು ಪಡೆಯಬೇಕೆಂಬ ಅಭಿಲಾಷೆ ಯಿಂದ ತಪಸ್ಸು ಮಾಡಲು, ಭಗವಂತನು ಅವನ ತಪಸ್ಸಿಗೆ ಮೆಚ್ಚಿ, ಅವನಿಗೆ ಪ್ರತ್ಯಕ್ಷನಾಗಿ ಅವನನ್ನು ಕುರಿತು, 'ಎಲೈ ಮಹರ್ಷಿಯೇ? ಇದೋ! ನಾನೇ ನನ್ನನ್ನು ನಿನಗೆ ಪುತ್ರನನ್ನಾಗಿ ಕೊಟ್ಟಿರುವೆನು!” ಎಂದು ಅನುಗ್ರಹಿಸಿದನು. ಹೀಗೆ ತನ್ನನ್ನು ಆಿಗೆ ದತ್ತು ಮಗನನ್ನಾಗಿ ಒಪ್ಪಿದುದರಿಂದ, ಅವನಿಗೆ ದ ತಾತ್ರೇಯವೆಂಬ ಪ್ರಸಿದ್ಧಿಯುಂಟಾಯಿತು. ಈ ಅವತಾರದಲ್ಲಿ ಭಗವಂತ ನು, ತನ್ನ ಪಾದಸೇವೆಯನ್ನು ಮಾಡಿ ಪರಿಶುದ್ದಿಯನ್ನು ಹೊಂದಿದ ಹೈಹಯನೇ ಮೊದಲಾದವರಿಗೆ, ಇಹಲೋಕಸುಖಕ್ಕೆ ಬೇಕಾದ ಅಣಿಮಾದ್ಯಷ್ಟೆಶ್ವರಸಿ ಹೈಯನ್ನೂ, ಪಾರಲೌಕಿಕವಾದ ಮೋಕ್ಷವನ್ನೂ ಅನುಗ್ರಹಿಸಿದನು. ಈ ದ ಶಾಶ್ರೇಯಾವತಾರದ ಚರಿತ್ರವು ಸರ್ವಲೋಕಪ್ರಸಿದ್ಧವಾಗಿರುವುದು.