ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೪ ಶ್ರೀಮದ್ಭಾಗವತವು [ಅಥ್ಯಾ. • ಮುನಿಕುಮಾರಾವತಾರವು+w ನಾರದಾ ! ನಾನು ಪೂರ್ವದಲ್ಲಿ ಲೋಕಸೃಷ್ಟಿಯನ್ನು ಮಾಡಬೇ ಕೆಂದುದ್ದೇಶಿಸಿ, ಘೋರವಾದ ತಪಸ್ಸನ್ನು ಮಾಡಿದೆನಷ್ಟೆ? ಇದರಿಂದ ಪ್ರಸ ನ್ನ ನಾದ ಭಗವಂತನು, ಮೊದಲು ಸನತ್ತೆಂಬ ಹೆಸರುಳ್ಳ ಕುಮಾರನಾಗಿ ಹುಟ್ಟಿದನು. ಅದರಿಂದಾಚೆಗೆ ಕ್ರಮವಾಗಿ ಸನಾತನನೆಂದೂ, ಸನಂದನ ನೆಂದೂ, ಸನಕನೆಂದೂ ಪ್ರಸಿದ್ಧವಾದ ಮೂರುಹೆಸರನ್ನು ಧರಿಸಿ ಮೂವ ರು ಕುಮಾರರಾಗಿ ಹುಟ್ಟಿದನು. ಸನಕಸನಂದನಾಡಿಗಳು ನಾಲ್ವರೂ ಲೋಕದಲ್ಲಿ ಬಹಳ ಖ್ಯಾತಿಯನ್ನು ಹೊಂದಿದರು. ಕಲ್ಪಾಂತದಲ್ಲಿ ಯಾವ ಪ್ರಾಣಿಯೂ ಇಲ್ಲದೆ ನಾಶಹೊಂದಿದಾಗ, ಮುಂದಿನ ಕಲ್ಪಾದಿಯಲ್ಲಿ ಆತ್ಮ ತತ್ತ್ವವನ್ನು ತಿಳಿಸತಕ್ಕವರೊಬ್ಬರೂ ಇಲ್ಲದೆ, ಅದರ ಸಂಪ್ರದಾಯವೇ ಕೆಡು ವಂತಾಯಿತು. ಅದನ್ನು ಮೊದಲು ಲೋಕಕ್ಕೆ ತಿಳಿಸಬೇಕೆಂಬುದಕ್ಕಾಗಿ ಯೇ,ಭಗವಂತನು ಈ ವಿಧವಾದ ನಾಲ್ಕು ರೂಪಗಳಿಂದವತರಿಸಿ, ಮೊದಲು ಅದನ್ನು ಪದೇಶಿಸಿದನು. ಇವರಿಂದ ಅನೇಕಮಹರ್ಷಿಗಳು ತತ್ತ್ವಜ್ಞಾನೋಪ ದೇಶವನ್ನು ಹೊಂದಿ, ಅದನ್ನು ತಮ್ಮ ಶಿಷ್ಯ ಪರಂಪರೆಯಾಗಿ ಉಪದೇಶಿಸುತ್ತ ಬಂದರು. ಈ ನಾಲ್ವರು ಕುಮಾರರೂ ಸಾಕ್ಷಾತ್ಕಾಗಿ ವಿಷ್ಣು ಕಳೆಯಿಂದಲೇ ಒಪ್ಪುತ್ತಿದ್ದರು. ಇದನ್ನೇ ಕುಮಾರಾವತಾರವೆಂದು ಹೇಳುವರು. w+ ನರನಾರಾಯಣಾವತಾರವು. • ಆಮೇಲೆ ಮತ್ತೊಮ್ಮೆ ಭಗವಂತನು ಧರನೆಂಬ ಮುನಿಗೆ ದಕ್ಷಪತ್ರಿ ಯಾದ ಮೂರ್ತಿಯೆಂಬವಳಲ್ಲಿ ನರನಾರಾಯಣರೆಂಬ ರೂಪದಿಂದ ಜನಿಸಿ ದನು. ಈ ನರನಾರಾಯಣರ ತಪಶ್ಯಕ್ತಿಯನ್ನು ಹೀಗೆಂದು ನಿರ್ಣಯಿಸುವು ದಕ್ಕೂ ಬೇರೊಬ್ಬರಿಗೆ ಸಾಧ್ಯವಲ್ಲ. ಹೀಗೆ ಎರಡು ರೂಪದಿಂದವತರಿಸಿದ ಭಗವಂತನು, ತಪಸ್ಸು ಮಾಡಿ ಉಪಾಸಿಸತಕ್ಕ ದೈವವು ಬೇರೊಂದಿ ಲ್ಲದೆ, ಇತರ ಸಮಸ್ತದೇವತೆಗಳಿಗೂ ತಾನೇ ಉಪಾಸ್ಯದೈವವಾಗಿದ್ದರೂ, ಇತರರಿಗೆ ತಪೋಮಾರ್ಗವನ್ನು ತೋರಿಸಬೇಕೆಂಬುದಕ್ಕಾಗಿಯೇ ಅಸಾಧ್ಯ ವಾದ ಈ ತಪಸ್ಸನ್ನು ಮಾಡಲಾರಂಭಿಸಿದನು. ಹೀಗೆ ಭಗವಂತನು ನರನಾ