ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೩ ಶ್ರೀಮದ್ಭಾಗವತವು [ಅಧ್ಯಾ, ೭. (“ಎಲೈ ಸ್ಪಿಯರೆ! ನೀವೇಕೆ ಹೀಗೆ ವ್ಯಕ್ತವಾಗಿ ಆಯಾಸಪಡುವಿರಿ! ನಿಮ್ಮಂ ತಹ ಸ್ತ್ರೀಯರನ್ನು ನಾನು ನನ್ನ ಅಂಗಾಂಗಗಳಲ್ಲಿಯೂ ಸೃಷ್ಟಿಸಬಲ್ಲೆನು. ಹೀಗಿರುವಾಗ ನಿಮ್ಮ ಮೋಹಕ್ಕೆ ನಾನು ಮರುಳಾಗುವೆನೆ ?” ಎಂದು ಹೇಳಿ ಆ ಊಧ್ವತಿಯನ್ನೂ ಆ ಅಪ್ಸರಸಿಯರಿದ್ದ ಸ್ಥಳಕ್ಕೆ ಕಳುಹಿಸಿಕೊಟ್ಟನು. ರಂಭಾಡಿಗಳೆಲ್ಲರೂ ಆ ವ್ಯಕ್ತಿಯ ರೂಪಾತಿಶಯವನ್ನು ನೋಡಿ, ಅಶ್ವರ ಗೊಂಡು, ತಮಗೆ ತಾವೇ ನಾಚಿ ಸುಮ್ಮನಾದರು. ಆಮೇಲೆ ಅವರೆಲ್ಲರೂ ಆ ಊದ್ವತಿಗೇ ತಮ್ಮಲ್ಲಿ ಪ್ರಾಧಾನ್ಯವನ್ನು ಕೊಟ್ಟು ಅವಳೊಡನೆ ತಮ್ಮ ತಮ್ಮ ಸ್ಥಾನಕ್ಕೆ ಹೊರಟುಹೋದರು. ಇದೇ ನರನಾರಾಯಣಾವತಾರವು. wwಧುವವರಪ್ರದಾವತಾರವು++ ಉತ್ತಾನಪಾದನೆಂಬ ರಾಜನ ಮಗನಾದ ಧ್ರುವನೆಂಬ ಬಾಲಕನು, ಒಮ್ಮೆ ತನ್ನ ಸವತಿತಾಯಾದ ಸುರುಚಿಯೆಂಬವಳೊಡನೆ ತನ್ನ ತಂದೆಯು ಸಿಂ ಹಾಸನದಲ್ಲಿ ಕುಳಿತಿದ್ದಾಗ, ತಾನೂ ಅವರೊಡನೆ ಕಲೆತು ತಂದೆಯ ತೊಡೆಯ ಲ್ಲಿ ಕುಳ್ಳಿರುವುದಕ್ಕಾಗಿ ಹೋದನು. ಆಗ ಕೇವಲಮತ್ಸರ ಹೊಟ್ಟೆಕಿಚ್ಚಿ ನ) ಸ್ವಭಾವವುಳ್ಳ ಸುರುಚಿಯು, ತಂದೆಯ ಸಮೀಪಕ್ಕೆ ಬರುತಿದ್ದ ಬಾಲಕ ನನ್ನು ಹೀಗಳೆದು ಧಿಕ್ಕರಿಸಿದಳು. ಧ್ರುವನು ಅತಿಕ್ರೂರವಾದ ಅವಳ ವಾ ಗ್ಯಾಣದಿಂದ ಬಹಳನೊಂದವನಾಗಿ, ಕೇವಲ ಬಾಲನಾಗಿದ್ದರೂ, ಆ ಆವ ಮಾನವನ್ನು ಸಹಿಸಲಾರದೆ, ತಪಸ್ಸಿಗಾಗಿ ಕಾಡಿಗೆ ಹೊರಟನು. ಹೀಗೆ ಬಹಳ ಸಣ್ಣ ವಯಸ್ಸಿನಲ್ಲಿಯೇ ಕಾಡಿನಲ್ಲಿ ದೃಢವಾದ ತಪಸ್ಸನ್ನು ಹಿಡಿದು ಕುಳಿತಿದ್ದ ಆ ಧ್ರುವನಲ್ಲಿ ಭಗವಂತನು ಕರುಣೆಗೊಂಡು, ಆತನಿಗೆ ಶಾಶ್ವತವಾದ ಮತ್ತು ಮಹೋನ್ನತವಾದ ಒಂದು ಪದವಿಯನ್ನು ಕೊಟ್ಟನು. ಸಪ್ತರ್ಷಿಗಳೂ ಆ ಪದವಿಯ ಮಹಿಮೆಯನ್ನು ಅನವರತವೂ ಸ್ತುತಿಸುತ್ತಿರುವರು ಈ ಧ್ರು ವಮಂಡಲವೆಂಬುದು ಸಪ್ತರ್ಷಿಮಂಡಲಕ್ಕಿಂತಲೂ ಊಧ್ಯಭಾಗದಲ್ಲಿ, ತೇ ಜೋಮಯವಾಗಿ ಪ್ರಕಾಶಿಸುತ್ತಿರುವುದು, ಹೀಗೆ ಧ್ರುವನಿಗೆ ಪ್ರತ್ಯಕ್ಷವಾಗಿ ವರವನ್ನು ಕೊಟ್ಟ ವಿಷ್ಣುಮೂರ್ತಿಯನ್ನೂ ಒ೦ದವತಾರವನ್ನಾಗಿ ಹೇ ಳುವರು,