ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ, ೭.] ದ್ವಿತೀಯಸ್ಕಂಧವು. ++ ಪೃಥುಚಕ್ರವರ್ತಿಯ ಅವತಾರವ•w ಹಿಂದೆ ವೇನನೆಂಬ ರಾಜನೊಬ್ಬನಿದ್ದನು. ಅವನು ಬಹಳ ದುಸ್ಸಭಾ ವವುಳ್ಳವನು. ಇವನ ಕೆಟ್ಟ ಕೃತ್ಯಗಳನ್ನು ನೋಡಿ ಸಹಿಸಲಾರದೆ ಒಬ್ಬ ಬ್ರಾ ಹ್ಮಣನು ಇವನನ್ನು ಶಪಿಸಿದನು. ಈ ಬ್ರಾಹ್ಮಣಶಾಪದಿಂದ ಆ ವೇನನಿಗೆ ಈ ಹಾವಸಾನದಲ್ಲಿ ನರಕಗತಿಯುಂಟಾಯಿತು. ಈ ವೇನನ ಮಗನೇ ಪೃಥುಚ ಕ್ರವರ್ತಿಯು, ಈ ಪೃಥುವು, ಯಾಗಗಳೇ ಮೊದಲಾದ ಅನೇಕಸತ್ತಾರಗಳ ನ್ನು ನಡೆಸಿ, ತನ್ನ ತಂದೆಯನ್ನು ನರಕದಿಂದ ತಪ್ಪಿಸಿ, ತನ್ನ ಪುತ್ರ ಶಬ್ದವನ್ನು ಸಾರಕಗೊಳಿಸಿಕೊಂಡನು, ಮತ್ತು ಈ ಪೃಥುಚಕ್ರವರ್ತಿಯೇ ಭೂದೇವಿ ಯನ್ನು ಹಸುವನ್ನಾಗಿಯೂ, ಹಿಮವತ್ಪರತವನ್ನು ಕರುವನ್ನಾಗಿಯೂ ಮಾ ಡಿ, ಹಾಲುಕರೆಯುವಂತೆ ಈ ಭೂಮಿಯಿಂದ ಸಮಸ್ಯಸಾರವಸ್ತುಗಳನ್ನೂ ಹೊರಕ್ಕೆ ತೆಗೆದನು. ಈ ಆಸಾಥ್ಯಕಾರಗಳನ್ನು ನಡೆಸುವುದಕ್ಕಾಗಿ, ಭಗವಂ ತನೇ ವೇನನೆಂಬ ರಾಜನಿಗೆ ಸೃಥುಚಕ್ರವರ್ತಿಯೆಂಬ ಹೆಸರಿನಿಂದ ಹುಟ್ಟಿದ ನಲ್ಲದೆ ಬೇರೆಯಲ್ಲ. ಆದುದರಿಂದ ಇದೂ ಭಗವದವತಾರಗಳಲ್ಲಿ ಒಂದಾ ಗಿರುವುದು. ++ ಋಷಭಾವತಾರವು, 4w ಆದ್ರನ ಮಗನಾದ ನಾಭಿಯೆಂಬ ರಾಜನೊಬ್ಬ ಸಿದ್ದನು. ಆತನಭಾರೈಗೆ ಸುದೇವಿಯೆಂದು ಹೆಸರು. ನಾರದಾ ! ಯಾವ ಭಗವಂ ತನ ಸ್ವರೂಪವನ್ನು ಪರಮಹಂಸರೆನಿಸಿದ ಮಹಾಯೋಗಿಗಳು ಹೊರತು ಬೇರೆಯವರು ತಿಳಿಯಲಾರರೆಂದು ಸಮಸ್ತ ವೇದಗಳೂ ಹೇಳು ವುವೋ, ಆ ಪರಮಪುರುಷನೇ ಆ ನಾಭಿರಾಜನಿಗೆ ಋಷಭನೆಂಬ ಹೆಸರಿನಿಂದ ಪುತ್ರನಾಗಿ ಹುಟ್ಟಿದನು. ಈ ಋಷಭನು ಏನೂ ತಿಳಿಯದ ಮೂಢನಂತೆಯೇ ಕಾಣಿಸಿಕೊಳ್ಳುತ್ತ ದೃಢವಾದ ಯೋಗಮಾರ್ಗವನ್ನು ಹಿಡಿದಿದ್ದನು. ಭಗ ವದಂಶದಿಂದ ಅವತರಿಸಿದ ಋಷಭನಿಗೆ, ಈ ಸಮಸ್ತಪ್ರಪಂಚವೂ ತನ್ನ ಸ್ವರೂಪವೇ ಎಂಬ ಭಾವವು ದೃಢವಾಗಿದ್ದುದರಿಂದ, ಯಾವುದರಲ್ಲಿಯೂ ಬೇದಬುದ್ಧಿಯನ್ನಿಡದೆ, ಸಮಸ್ತಭೂತಗಳಲ್ಲಿಯೂ ಸಮದೃಷ್ಟಿಯಿಂದಿದ್ದನು.