ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು . [ಅಧ್ಯಾ. ೬. ಆತನ ಮನಸ್ಸು ಎಂತಹ ಕಾರಣಗಳಿಂದಲೂ ಕದಲುತ್ತಿರಲಿಲ್ಲ. ಸಮಸ್ತ ಸಂಗಗಳನ್ನೂ ತೊರೆದು ಜೀತೇಂದ್ರಿಯನಾಗಿಯೇ ವರ್ತಿಸುತ್ತಿದ್ದನು. ಈ ಮಹಾತ್ಮನು ನೋಡಿದವರಿಗೆ ಏನೂ ತಿಳಿಯದ ಜಡನಂತೆಯೇ ಕಾಣುತ್ತ ಯೋಗಚಕ್ಕೆಯನ್ನು ನಡೆಸಿದನು. ಇದೇ ಋಷಭಾವತಾರವು. w+ ಹಯಗ್ರೀವಾವತಾರವು. •wಹಿಂದೊಮ್ಮೆ ಆ ಭಗವಂತನು ತಾನಾಗಿಯೇ ಬಂದು ನನ್ನ ಯಾಗಭೂ ಮಿಯಲ್ಲಿ ಹಯಗ್ರೀವಸ್ವರೂಪದಿಂದ ಕಾಣಿಸಿಕೊಂಡನು.ಹೊಂಬಣ್ಣದ ಮೈ ಯುಳ್ಳವನಾಗಿ ಗೋಚರಿಸಿದ ಆತನನ್ನೇ ವೇದಸ್ವರೂಪನೆಂದೂ,ಯಾಗಾರ ಧ್ವನೆಂದೂ ಹೇಳಬಹುದು. ಸಮಸ್ತ ದೇವತೆಗಳಲ್ಲಿಯೂ ಆತನು ಅಂತಾ ಮಿಯಾಗಿರುವನು. ಆತನ ಮೂಗಿನ ರಂಧಗಳಿಂದ ನಿಶ್ಯಾಸರೂಪವಾಗಿ ಹೊರಟ ಫುರ್ಫುರಧ್ವನಿಯೇ ವೇದಸ್ವರೂಪವನ್ನು ಹೊಂದಿದುವು. ಇದೇ ಹಯಗ್ರೀವಾವತಾರವು ++ ಮತ್ತಾವತಾರವು, 4w ಆ ಭಗವಂತನು ಪ್ರಳಯಕಾಲದಲ್ಲಿ ಮತ್ಸರೂಪವನ್ನು ತಾಳಿ ನನ್ನ ಮುಖದಿಂದ ಜಾರಿದ ವೇದಮಾರ್ಗಗಳನ್ನು ನನಗೆ ಹಿಂತಿರುಗಿ ಅನುಗ್ರಹಿಸಿ ಕೊಟ್ಟನು. ಪ್ರಳಯಕಾಲದಲ್ಲಿ ಭೂಮಿಯೇ ತಿಳಿಯದಂತೆ ಎಲ್ಲವೂ ಜಲಮ ಯವಾಗಿದ್ದುವು. ಆಗ ಮರೂಪದಿಂದಿದ್ದ ಈ ಭಗವಂತನು, ಮುಂದಿನ ಸೃಷ್ಟಿಗೆ ಉಪಯುಕ್ತಗಳಾದ ಪಾರ್ಥಿವದ್ರವ್ಯಗಳೆಲ್ಲಕ್ಕೂ ಆಥಾರನಾಗಿ, ಆ ನೆವದಿಂದ ಸಮಸ್ತಪ್ರಾಣಿಗಳಿಗೂ ನಿವಾಸಭೂತನಾಗಿ, ಮೊದಲು ವೈವ ಸ್ವತಮನುವಿಗೆ ಗೋಚರಿಸಿದನು.ಇದೇ ಆ ಭಗವಂತನ ಮತ್ಯಾವತಾರವು. www ಕೂರ್ಮಾವತಾರವು- wwಪೂರದಲ್ಲಿ ದೇವಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಸ ಮುದ್ರವನ್ನು ಕಲಶವನ್ನಾಗಿಯೂ,ವಾಸುಕಿಯನ್ನು ಕಡೆಯುವ ಹಗ್ಗವನ್ನಾ ಗಿಯೂ, ಮಂದರಪರತವನ್ನು ಕಡೆಗೋಲನ್ನಾಗಿಯೂ ಮಾಡಿ ದೇವಿ