ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಕಥೆಯನ್ನು ಕೇಳತಕ್ಕ ಭಾಗ್ಯವೂಕೂಡ ಪೂರ್ವಾರ್ಜಿತವಾದ ಪುಣ್ಯದಿಂದಲ್ಲದೆ ಲಭಿಸಲಾರದು. ಆದುದರಿಂದ ಎಲೈ ಋಷಿಶ್ರೇಷ್ಟನೆ! ನೀನು ಈ ಕಥೆಯನ್ನು ಬಹಳಶ್ರದ್ಧೆಯಿಂದ ಕೇಳಬೇಕು. ಇದಕ್ಕೆ ದಿನನಿಯಮಗಳೇನೂ ಇಲ್ಲ. ಅನವರತವೂ ಈ ಕಥೆಯನ್ನು ಕೇಳುತ್ತಿರಬಹುದು ಸತ್ಯವ್ರತಬಂದಲ, ಬ್ರ ಹ್ಮಚರೈಯಿಂದಲೂ ಬಹಳ ನಿಷ್ಠನಾಗಿ,ಇದನ್ನು ಅನವರತವೂ ಶ್ರವಣಮಾ ಡುತ್ತಿರಬೇಕು. ಆದರೆ ಈ ಕಲಿಕಾಲದಲ್ಲಿ ಅಷ್ಟೊಂದು ದೃಢವ್ರತವನ್ನು ನಡೆ ಸುವುದು ಸಾಧ್ಯವಿಲ್ಲದುದರಿಂದಲೂ, ಅಷ್ಟು ದೀರ್ಘಕಾಲದವರೆಗೆ ದೀಕ್ಷೆ ಯನ್ನು ವಹಿಸಿ, ಮನಸ್ಸನ್ನು ತಡೆದು ನಿಯಮದಲ್ಲಿರುವುದೂ ಕಷ್ಟವಾದುದ ರಿಂದಲೂ,ಇದಕ್ಕೆ ಸಪ್ತಾಹಶ್ರವಣವೆಂಬ ಸುಲಭೋಪಾಯವೊಂದು ಆಶುಕ ಮಹರ್ಷಿಯ ಆಜ್ಞೆಯಿಂದಲೇ ಏರ್ಪಟ್ಟಿರುವುದು. ಶ್ರಾವಣಮಾಘಮಾಸಗ ಇಲ್ಲಿ ಶ್ರದ್ದೆಯಿಂದ ಕೇಳುವವರಿಗೆ ಯಾವಫಲವುಂಟೋ ಆ ಫಲವು ಸಪ್ತಾ ಹಶ್ರವಣದಿಂದಲೇ ಲಭಿಸುವುದು. ಈ ಕಲಿಕಾಲವೆಂಬುದು ಕೇವಲದೋಷ ಪ್ರಚುರವಾದುದರಿಂದ, ಈ ಕಾಲದಲ್ಲಿ ಮನಸ್ಸನ್ನು ತಡೆಡುವುದು ಆ ಸಾಧ್ಯವಾದುದರಿಂದಲೂ ಮನುಷ್ಯನ ಆಯುಃಪರಿಮಾಣವೂ ಈಗಬಹಳ. ಲ್ಪವಾಗಿರುವುದರಿಂದಲೂ,ರೋಗಬಾಧೆಯು ಹೆಚ್ಚಿರುವುದರಿಂದಲೂ, ಈ ಕಾ ಲಕ್ಕೆ ಸಪ್ತಾಹಶ್ರವಣವೆಂಬ ಸುಲಭೋಪಾಯವು ಏರ್ಪಟ್ಟಿರುವುದು. ತಪ ಸ್ಸು,ಯೋಗ,ಸಮಾಧಿ, ಮುಂತಾದುವುಗಳಿಂದ ಶ್ರಮಪಟ್ಟು ಸಾಧಿಸಬೇಕಾದ ಫಲಗಳೆಲ್ಲವೂ ಅನಾಯಾಸದಿಂದಲೇ ಈ ಸಪ್ತಾಹಶ್ರವಣದಿಂದ ಲಭಿಸುವು ವ.”ಎಂದು ಸನಕಾದಿಋಷಿಕುಮಾರರು ನಾರದನಿಗೆ ಭಾಗವತಕಥಾಮಾಹಾ ತ್ಯವನ್ನು ವಿವರಿಸಿ ಹೇಳಿದರು ” ಎಂದು ಸೂತಪೌರಾಣಿಕನು ಹೇಳಿದು ದನ್ನು ಕೇಳಿ, ಶೌನಕಮಹಾಮುನಿಯು ತಿರುಗಿ (ಎಲೈ ಸೂತನೆ ! ಈ ಭಾಗ ವತಕ್ಕೆ ಅಷ್ಟೊಂದು' ಮಹಾಮಹಿಮೆಯುಂಟಾಗುವುದಕ್ಕೆ ಕಾರಣವೇನು ?” ಎಂದು ಕೇಳಿದನು. ಅದಕ್ಕಾ ಸೂತನು. (ಶೌನಕಾ ! ಕೇಳು ! ಹಿಂದೆ ಶ್ರೀ ಕೃಷ್ಣನು, ತನ್ನ ಅವತಾರಪ್ರಯೋಜನವನ್ನು ಮುಗಿಸಿಕೊಂಡು, ತನ್ನ ನಿಜ ಸ್ಥಾನವಾದ ವೈಕುಂಠಕ್ಕೆ ಹೊರಡುವುದಕ್ಕೆ ಸಿದ್ಧನಾಗಿದ್ದಾಗ, ಪರಮಭಕ್ಕೆ ನಾದ ಉದ್ಯವನು, ಆತನನ್ನು ಕುರಿತು ಪ್ರಾರ್ಥಿಸುವನು, “ಎಲೈ ಪರಮಾ