ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೭.] ದ್ವಿತೀಯಸ್ಕಂಥವು. ದಲ್ಲಿ ಬ್ರಾಹ್ಮಣವೇಷದಿಂದ ಆ ಯಜ್ಞಶಾಲೆಗೆ ಹೋದನು. ಆ ಯಾಗಕಾಲ ದಲ್ಲಿ ಬಲಿಚಕ್ರವರ್ತಿಯು ಕೇಳಿದವರಿಗೆ ಕೇಳಿದುದನ್ನು ಕೊಡುವಹಾಗೆ ಪ್ರತಿ ಜ್ಞೆ ಮಾಡಿದ್ದುದರಿಂದ, ಅಲ್ಲಿ ಈ ವಾಮನರೂಪಿಯಾದ ಬ್ರಾಹ್ಮಣನು, ತನ ಗಾಗಿಮರಡಿಯ ನೆಲವನ್ನು ಮಾತ್ರ ಯಾಚಿಸಿ, ಆ ವಿಷಯದಲ್ಲಿ ಮೊದಲು ಬಲಿಚಕ್ರವರ್ತಿ ಯವಾಖ್ಯಾನವನ್ನು ಪಡೆದು, ಒಡನೆಯೇ ಮಹಾದ್ಭುತವಾದ ಆಕಾರವನ್ನು ತಾಳಿ, ಒಂದಡಿಯಿಂದ ಭೂವೀಯೆಲ್ಲವನ್ನೂ ಆಕ್ರಮಿಸಿ, ಮತ್ತೊಂದಡಿಯಿಂದ ಆಕಾಶವೆಲ್ಲವನ್ನೂ ಆಕ್ರಮಿಸಿ ನಿಂತನು. ಮೂರನೆಯ ಹಜ್ಞೆಗೆ ಬೇರೆಲ್ಲಿಯೂ ಸ್ಥಲವಿಲ್ಲದುದನ್ನು ನೋಡಿ, ಬಲಿಯು ತನ್ನ ತಲೆಯನ್ನೇ ಒಡ್ಡಿದನು. ಆಗ ಭಗವಂತನು ಅವನ ತಲೆಯಮೇಲೆ ತನ್ನ ಪಾದವನ್ನಿಟ್ಟು, ಅವನನ್ನು ಪಾತಾಳದವರೆಗೆ ಮೆಟ್ಟಿ, ತ್ರಿಲೋಕ್ಯವನ್ನೂ ಇಂದ್ರನಿಗೆ ಅಧೀನ ವಾಗಿ ಮಾಡಿದನು ಹೀಗೆ ಮೂರಡಿಯ ನೆಲವನ್ನು ಯಾಚಿಸುವ ನೆವದಿಂದಲೇ ಭಗವಂತನು ತ್ರೈಲೋಕ್ಯವನ್ನೂ ತನ್ನ ವಶಮಾಡಿಕೊಂಡನು. ಆದರೆ (1 ಸತ್ವಲೋಕೇಶ್ವರನಾಗಿಯೂ, ಸಶಕ್ತನಾಗಿಯೂ ಇರುವ ಭಗವಂತನು ಕೇವಲ ದುರ್ಬಲನಂತೆ ಹೀಗೆ ಕಪಟಭಾವದಿಂದ ಯಾಚಿಸಿ, ಆ ಬಲಿಯನ್ನು ನಿಗ್ರಹಿಸಿದುದು ಯುಕ್ತವೆ?” ಎಂದು ನೀನು ಶಂಕಿಸಬಹುದು ! ನಾರದಾ ! ಹಾಗೆಣಿಸಬೇಡ ! ಆ ಬಲಿಚಕ್ರವರ್ತಿಯಾದರೋ ಬಹಳ ಧಶೀಲನು ! ಬಹಳ ಉದಾರಸ್ವಭಾವವುಳ್ಳವನು! ಹೀಗೆ ದರವನ್ನು ಮೀರದೆ ನಡೆಯುವ ಸಜ್ಜನರನ್ನು ವಿನಯದಿಂದಲೇ ವಶಪಡಿಸಿಕೊಳ್ಳಬೇಕೇಹೊರತು ಬಲಾ ತರಿಸಿ ನಿಗ್ರಹಿಸಬಾರದು. ಅಂತವರನ್ನು ಹಾಗೆ ನಿಗ್ರಹಿಸುವುದು ಸಾಧ್ಯ ವೂ ಅಲ್ಲ ! ಇದಕ್ಕಾಗಿಯೇ ದಯಾಸಮುದ್ರನಾದ ವಿಷ್ಣುವು ಅವನನ್ನು ವಿನಯಭಾವದಿಂದಲೇ ಜಯಿಸಬೇಕಾಯಿತು. ಆದರೆ ವಿನಯದಿಂದಾದರೂ ಸಜ್ಜನರನ್ನು ವಂಚಿಸಬಹುದೆ ?” ಎಂದು ಕೇಳುವೆಯಾ ? ನಾರದಾ ! ಇದ ರಿಂದ ಭಗವಂತನು ಆ ಬಲಿಯು ಇಷ್ಟಾರವನ್ನೆ ಕೈಗೂಡಿಸಿಕೊಟ್ಟನೇ ಹೊರತು ವಂಚಿಸಿದವನಲ್ಲ. ಆ ಬಲಿಯು ತೈಲೋಕ್ಯಾಧಿಪತ್ಯದ ಕಿರೀಟವ ನ್ನು ತಲೆಯಲ್ಲಿ ಧರಿಸುವುದಕ್ಕಿಂತಲೂ, ಶ್ರೀಮಹಾವಿಷ್ಣುವಿನ ಪಾದತೀರ್ಥವ ನ್ನು ತಿರಸ್ಸಿನಿಂದ ಧರಿಸುವುದೇ ತನಗೆ ಪರಮಶ್ರೇಯಸ್ಕರವೆಂದು ಭಾವಿಸಿದ್ಧ