ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೩ ಅಧ್ಯಾ, ೭. ದ್ವಿತೀಯಸ್ಕಂಧವು. -w+ ಧನ್ವಂತರಿಯ ಅವತಾರವn ಮತ್ತು ಆ ಭಗವಂತನು ದೇವವೈದ್ಯನಾದ ಧನ್ವಂತರಿಯ ಅವತಾರ ವತಿ, ತನ್ನ ನಾಮಸ್ಮರಣಮಾತ್ರದಿಂದಲೇ ಸಮಸ್ಯರೋಗಗಳನ್ನೂ ಸೀಗಿಸುತ್ತಿರುವನಲ್ಲದೆ, ಲೋಕೋಪಕಾರಾರ್ಥವಾಗಿ ಆಯುರ್ವೇದವನ್ನು ಲೋಕದಲ್ಲಿ ಹರಡಿರುವನು. ದೇವತೆಗಳಿಗೆ ಸಮಾನವಾಗಿ ಯಜ್ಞಭಾಗಗಳ ನ್ಯೂ ಸ್ವೀಕರಿಸುತ್ತಿರುವನು. ++• ಪರಶುರಾಮಾವತಾರವು +•• ಮಹಾತ್ಮನಾದ ಆ ಭಗವಂತನು ದುಷ್ಟರಾಜರನ್ನು ಶಿಕ್ಷಿಸುವುದ ಆಗಿಜಮದಗ್ನಿ ಯೆಂಬ ಮಹರ್ಷಿಯ ಗರ್ಭದಲ್ಲಿ ಜನಿಸಿ, ಕೈಯಲ್ಲಿ ಗಂಡುಗೊ ಡಲಿಯನ್ನು ಹಿಡಿದು ಸಮಸ್ತಲೋಕಗಳನ್ನೂ ಸುತ್ತು, ಬ್ರಾಹ್ಮಣರಿಗೆ ದ್ರೋಹಿಗಳಾಗಿಯೂ, ವೇದ ವರ್ಗಗಳನ್ನು ಬಿಟ್ಟವರಾಗಿಯೂ, ಲೋಕಕಂ ಟಕರಾಗಿಯೂ ಇದ್ ಕ್ಷತ್ರಿಯರನ್ನು ಇಪ್ಪತ್ತೊಂದಾವರ್ತಿ ವಧಿಸಿ ಬಂದನು. ಹೀಗೆ ಕ್ಷತ್ರಿಯರನ್ನು ಕೊಂದಮೇಲೆ ತನಗಧೀನವಾಗಿ ಮಾಡಿಕೊಂಡ ಸಮ ಸಭಮಂಡಲವನ , ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಈ ವಿಧ ವಾಗಿ ಪರಶುರಾಮನೆಂಬ ಹೆಸರಿನಿಂದ ಲೋಕದಲ್ಲಿ ತನ್ನ ಸರ್ತಿಯನ್ನು ಹರಡಿರುವನು. 4 ಶ್ರೀರಾಮಾವತಾರವು.+w ಓ ! ನಾರದಾ ! ನಾವೆಲ್ಲರೂ ರಾವಣನೆಂಬ ರಾಕ್ಷಸನ ಬಾಧೆಯನ್ನು ತಡೆಯಲಾರದೆ ಮಹಾವಿಷ್ಣುವಿನಲ್ಲಿ ಮೊರೆಯಿಡಲು, ಜೀವಪ್ರಕೃತಿಗಳೆರ ಡಕ್ಕೂ ನಿಯಾಮಕನಾದ ಆ ಭಗವಂತನು, ಭರತನೇ ಮೊದಲಾದ ಮೂ ವರು ಸಹೋದರರೊಡನೆ ಇಕ್ಷಾಕುವಂಶದಲ್ಲಿ ರಾಮನಾಗಿ ಅವತರಿಸು ವನು. ಈತನು ಪಿತೃವಾಕ್ಯ ಪರಿಪಾಲನವೆಂಬ ವ್ರತವನ್ನು ಹಿಡಿದು, ಕೈಕೇಯಿ ಯೆಂಬ ತನ್ನ ಬಲತಾಯಿಯ ಕೋರಿಕೆಯನ್ನನುಸರಿಸಿ, ತಂದೆಯ ಮಾತಿನ ಮೇಲೆ ತನ್ನ ತಮ್ಮನಾದ ಲಕ್ಷಣನೊಡನೆಯೂ,ಭಾರೈಯಾದ ಸೀತೆಯೊಡ ನೆಯೂ ಸೇರಿ, ಹದಿನಾಲ್ಕು ವರ್ಷಗಳವರೆಗೆ ವನವಾಸದಲ್ಲಿರುವನು. ಅವನು - 18