ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೪ ಶ್ರೀಮದ್ಭಾಗವತವು (ಅಧ್ಯಾ. ೭. ದಂಡಕಾರಣ್ಯದಲ್ಲಿರುವಾಗ ದುರಾತ್ಮನಾದ ರಾವಣನು ಆತನ ಪತ್ನಿ ಯಾದ ಸೀತೆಯನ್ನು ವಂಚನೆಯಿಂದ ಕದ್ದುಯ್ಯುವನು, ಆಮೇಲೆ ರಾಮನು ಸುಗ್ರೀ ವನೊಡನೆ ಸ್ನೇಹವನ್ನು ಬೆಳೆಸಿ, ನಾಲಿಯನ್ನು ಕೊಂದು ವಾನರಸೈನ್ಯ ದೊಡನೆ ಲಂಕೆಗೆ ಹೊರಡುವನು. ದಾರಿಯಲ್ಲಿ ಸಮುದ್ರವು ಅಡ್ಡಲಾಗಿರುವು ದನ್ನು ನೋಡಿ, ಅದನ್ನು ದಾಟುವುದಕ್ಕೆ ಉಪಾಯವೇನೂ ತೋರದಿದ್ದುದರಿಂ ದ, ತನ್ನಲ್ಲಿ ತಾನೇ ವಿಚಾರಿಸುತ್ತಿದ್ದು, ಕೊನೆಗೆ ತ್ರಿಪುರಸಂಹಾರಿಯಾದ ರುದ್ರ ನಂತೆ ಕೋಪದಿಂದ ಜ್ವಲಿಸುತ್ತ, ಕೂರದೃಷ್ಟಿಯಿಂದ ಆ ಸಮುದ್ರವನ್ನು ನೋಡುವನು. ಆಗ ಸಮುದ್ರನು ಈತನ ಕೋಪಕ್ಕೆ ಹೆದರಿ ಪುರುಷರೂಪ ದಿಂದ ಮುಂದೆ ಬಂದು ರಾಮನಲ್ಲಿ ಶರಣಾಗತನಾಗಿ ಬಾರಿಯನ್ನು ಕೊಡು ವನು. ಆಗ ರಾಮನು ಸೇತುಬಂಧನಪೂರ್ವಕವಾಗಿ ಸಮುದ್ರವನ್ನು ದಾಟಿ ಲಂ ಕೆಗೆ ಬಂದು, ಐರಾವತದ ಕೊಂಬಿನ ತಿವಿತದಿಂದ ಜಿಡ್ಡುಗಟ್ಟಿದ ಎದೆಯುಳ್ಳ ವನಾಗಿಯೂ, ಗರ್ವವಿಶಿಷ್ಟವಾದ ತನ್ನ ಅಟ್ಟಹಾಸದಿಂದಲೇ ಸಮಸ್ತದಿಕ್ಕು ಗಳನ್ನೂ ಭೇದಿಸುವಂತೆ ಮದೋನ್ಮತ್ತನಾಗಿಯೂ ಇದ್ದ ರಾವಣನನ್ನು ಲೀಲಾಮಾತ್ರದಿಂದಲೇ ತನ್ನ ಬಾಣಗಳಿಂದ ಕೊಲ್ಲುವನು. ಇದು ಮುಂದೆ ನಡೆಯುವ ರಾಮಾವತಾರವೃತ್ತಾಂತವು. ++ ಕೃಷ್ಣಾವತಾರವು. ** ನಾರದಾ! ಲೋಕದಲ್ಲಿ ಅಸುರಸ್ವಭಾವದಿಂದ ಹುಟ್ಟಿ , ಮದೋನ್ಮತ್ತ ರಾದ ದುಷ್ಕ್ಷತ್ರಿಯರ ಸೈನ್ಯಗಳ ಭಾರದಿಂದ ಮುಂದೆ ಭೂಭಾರವು ಹೆಚ್ಚಿ ಹೋಗುವುದು, ಈ ಭಾರವನ್ನು ಪರಿಹರಿಸಿ ಭೂದೇವಿಗೆ ಅದರಿಂದುಂಟಾದ ಬಾ ಥೆಯನ್ನು ತೊಲಗಿಸುವುದಕ್ಕಾಗಿಯೇ ಭಗವಂತನು ಯಾದವಕುಲದಲ್ಲಿ ಬಲರಾ ಮಕೃಷ್ಣರೆಂಬ ರೂಪದಿಂದವತರಿಸುವನು. *ಕಪ್ಪ,ಬಿಳುಪು ಬಣ್ಣದ ಕೂದ

  • ಭಗವಂತನು ತನ್ನ ತಲೆಯಲ್ಲಿದ್ದ ಬಿಳುಪ, ಕಶ್ಮಿ ಬಣ್ಣದ ಕೂದಲೆರಡ ನ್ನು ಕಿತ್ತೆಸೆಯಲು, ಅವೆರಡೂ ರಾಮಕೃಷ್ಣರೂಪದಿಂದ ಹುಟ್ಟಿದುದಾಗಿ ಭಾರತವಿ ಷ್ಟು ಪುರಾಣಾದಿಗಳಲ್ಲಿ ಹೇಳಲ್ಪಟ್ಟಿರುವುದು. ಆದರೆ ಹೀಗೆ ಹೇಳಿದುದು ರಾಮಕೃಷ್ಟ ರ ಮೈಬಕ್ಕವನ್ನೂ, ಆ ಭಗವಂತನ ಕೇಶಗಳೇ ಭೂಭಾರವನ್ನು ನೀಗಿಸುವುದಕ್ಕೆ ಸಮ