ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೩. ಶ್ರೀಮದ್ಭಾಗವತವು [ಅಧ್ಯಾ. ೭. ಒಂದು ಒರಳುಕಲ್ಲಿಗೆ ಕಟ್ಟಿಹಾಕುವಳು. ವಿಚಿತ್ರವೀರವುಳ್ಳ ಈ ಬಾಲಕನು ಅ ಒರಳುಕಲ್ಲನ್ನು ತನ್ನೊಡನೆಯೇ ಎಳೆದುಕೊಂಡು ಹೋಗುತ್ತ, ದಾರಿಯಲ್ಲಿ ಬಹುಕಾಲದಿಂದ ರೂಢಮೂಲವಾಗಿ ಬೆಳೆದಿದ್ದ ಎರಡು ಮರಗಳ ನಡುವೆ ಪ್ರವೇಶಿಸಿ, ಅವೆರಡನ್ನೂ ಆ ನೆವದಿಂದಲೇ ಮುರಿದು ಕೆಡಹುವನು. ನಾರ ದಾ ! ಇವೆಲ್ಲವೂ ಅಮಾನುಷಕೃತ್ಯಗಳೆಂಬುದನ್ನು ಹೇಳಬೇಕಾದುದೇನು ? ಮತ್ತೊಮ್ಮೆ ಶ್ರೀಕೃಷ್ಣನು ಗೋಕುಲದಲ್ಲಿ ತನ್ನ ಕುಲವೃತ್ತಿಯನ್ನು ಹಿಡಿದು, ತನ್ನ ಸಂಗಡಿಗರಾದ ಗೊಲ್ಲರೊಡನೆ ಸೇರಿ ದನಗಳನ್ನ ಟ್ರಿಕೂಂಡು ಕಾಡಿಗೆ ಗಲು, ಆಗ ಕೆಲವುಮಂದಿ ಗೋಪಾಲಕರು ಯಮುನಾನದಿಯ ಒಂದು ಭಾಗ ದಲ್ಲಿ, ವಿಷಮಿಶ್ರವಾದ ಜಲವುಳ್ಳ ಕಾಳಿಯವೆಂಬ ಮಡುವಿನಲ್ಲಿ, ದನಗಳನ್ನು ನೀರುಕುಡಿಯವುದಕ್ಕಾಗಿ ಬಿಟ್ಟು, ತಾವೂ ನೀರನ್ನು ಕುಡಿದು ಮೂರ್ಛಿತರಾಗಿ ಬೀಳುವರು. ಅದನ್ನು ನೋಡಿ ಕೃಷ್ಣನು ಕೋಪಗೊಂಡು, ಅಲ್ಲಿದ್ದ ಕಾಳಿ, ಯನೆಂಬ ಕರಸರ್ಪವನ್ನು ಕಾಲಿನಿಂದ ಮೆಟ್ಟಿ, ಅವನನ್ನು ಭಂಗಿಸಿ, ಆಸ್ಕಳ ಹಿಂದ ಅವನನ್ನು ಹೊರಡಿಸುವನು. ಮೂರ್ಛಿತರಾಗಿ ಬಿದ್ದಿರುವ ಗೋವುಗ ಇನ್ನೂ ಗೋಪಾಲಕರನ್ನೂ ಅಮೃತವರ್ಷದಿಂದ ಬದುಕಿಸುವನು. ಮತ್ತೆ ಮೈ ಗೋಪಾಲಕರೆಲ್ಲರೂ ರಾತ್ರಿಯಲ್ಲಿ ನಿದ್ರೆಯಿಂದ ಮೈಮರೆತು ಮಲ ಗಿರುವಾಗ, ಭಯಂಕರವಾದ ಕಾಡುಗಿಡು ಸುತ್ತಲೂ ಆವರಿಸಿಕೊಳ್ಳುವುದು ಅದನ್ನು ನೋಡಿ ಗೋಪಾಲಕರೆಲ್ಲರೂ ಹೆದರಿ, ಬದುಕಿಬರುವುದಕ್ಕೆ ದಾರಿ ಕಾಣದೆ, ಕೃಷ್ಣನನ್ನು ಕುರಿತು ಮೊರೆಯಿಡುವರು. ಆಗ ಕೃಷ್ಣನು ಅವರೆಲ್ಲರ ನ್ಯೂ ಸ್ವಲ್ಪ ಕಾಲದವರೆಗೆ ಕಣ್ಣು ಮುಚ್ಚಿಕೊಂಡಿರುವಂತೆ ಹೇಳಿ, ಅವರುಕಣ್ಣ ನ್ನು ತೆರೆಯುವಷ್ಟರೊಳಗಾಗಿ ಆ ಕಾಡುಗಿಚ್ಚನ್ನು ನುಂಗಿ, ಈ ಮಹಾವಿಪತ್ತಿ ನಿಂದ ಅವರನ್ನು ರಕ್ಷಿಸುವನು. ನಾರದಾ ಇಂತಹ ಸಾಹಸ ಕಾರ್ಯಗಳನ್ನು ಆ ಪರಮಪುರುಷನೊಬ್ಬನಲ್ಲದೆ ಬೇರೆ ಯಾರು ತಾನೇ ನಡೆಸಬಲ್ಲರು ! ಮತ್ತೊ ಮ್ಮೆ ಕೆಲವು ಮಂದಿ ಬಾಲಕರು ಯಶೋದೆಯ ಬಳಿಗೆ ಹೋಗಿ, ಕೃಷ್ಣನು ಮಣ್ಣನ್ನು ತಿನ್ನು ತಿರುವನೆಂದು ದೂರುವರು. ಆಗ ಯಶೋದೆಯು ಕೋಪ ದಿಂದ ಬಂದು ಕೃಷ್ಣನನ್ನು ನೋಡಿ, ಅವನನ್ನು ಕಟ್ಟಿ ಹಾಕುವುದಕ್ಕಾಗಿ ಯತ್ನಿಸುವಳು. ಆಗ ಕೃಷ್ಣನು ತಾನು ನಿರ್ದೋಷಿಯೆಂಬುದನ್ನು ತೋರಿಸುವ