ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ. ೭.] ದ್ವಿತೀಯಸ್ಕಂಧವು. ೨೭೭ ನೆವದಿಂದ, ತನ್ನ ಬಾಯನ್ನು ತೆರೆದು ತೋರಿಸಲು, ಅದರಲ್ಲಿ ಯಶೋದೆಯ ಕಣ್ಣಿಗೆ ಚರಾಚರಾತ್ಮಕವಾದ ಸಮಸ್ತಪ್ರಪಂಚವೂ ಗೋಚರಿಸುವುದು. ಈ ವಿಶ್ವರೂಪವನ್ನು ನೋಡಿ ಯಶೋದೆಯ ಪ್ರಜ್ಞೆ ತಪ್ಪಿ ಬಿಳುವಳು, ಆಗ ಕೃಷ್ಣನೇ ಅವಳನ್ನು ಸಮಾಧಾನಪಡಿಸಿ ಚೇತರಿಸಿಕೊಳ್ಳುವ ಹಾಗೆ ಮಾಡುವನು. ಮತ್ತೊಮ್ಮೆ ಕೃಷ್ಣನ ತಂದೆಯಾದ ನಂದಗೋಪನು ಸ್ನಾ ನಾರ್ಥವಾಗಿ ಯಮುನಾನದಿಗೆ ಹೋಗುವನು. ಆಗ ವರುಣದೂತರು ಕೈ ವ್ಯನ ಶಕ್ತಿಯನ್ನು ಪರೀಕ್ಷಿಸಬೇಕೆಂದು ಯೋಚಿಸಿ, ನಂದನನ್ನು ಹಿಡಿದು ವರುಣಪಾಶದಿಂದ ಕಟ್ಟಿ ತನ್ನ ಲೋಕಕ್ಕೆ ಎಳೆದುಕೊಂಡು ಹೋಗುವರು, ಆಗ ಕೃಷ್ಣನೂಕೂಡ ತನ್ನ ತಂದೆಯನ್ನು ಬಿಟ್ಟಿರಲಾರದೆ ವರುಣಲೋಕ ಕ್ಕೆ ಹೋಗುವನು. ಆಗ ವರುಣನ ಕೃಷ್ಮದರ್ಶನದಿಂದ ಪರಮಾನಂದ ಭರಿತನಾಗಿ, ಅವನನ್ನು ಪೂಜಿಸಿ, ನಂದನನ್ನು ಕೊಟ್ಟು ಕಳುಹಿಸುವನು. ಮ ತೊಮ್ಮೆ ಬಹಳ ಮಾಯಾವಿಯಾದ ಮೈಮಾಸುರನೆಂಬವನು, ಕೃಷ್ಣನ ಸಂಗಡಿಗರಾದ ಗೋಪಾಲಬಾಲಕರನ್ನು ಹಿಡಿದು, ಒಂದು ಗುಹೆಯಲ್ಲಿ ಸೇರಿ ಸಿ ಬಚ್ಚಿಟ್ಟುಕೊಳ್ಳುವನು. ಇದನ್ನು ತಿಳಿದು ಕೃಷ್ಣನು ಆ ದುರಾತ್ಮನನ್ನು ಕೊಂದು ತನ್ನ ಸಂಗಡಿಗರನ್ನು ಬಿಡಿಸಿ ಕರೆತರುವನು. ಮತ್ತೊಮ್ಮೆ ಎಣೆ ಯಿಲ್ಲದ ಮಹಾಮಹಿಮೆಯುಳ್ಳ ಈ ಕೃಷ್ಣನು, ತನ್ನ ಸಂಗಡಿಗರಾದ ಗೋ ಪಾಲಕರೆಲ್ಲರೂ ಹಗಲಿನಲ್ಲಿ ಬಹಳವಾಗಿ ಶ್ರಮಪಟ್ಟು ರಾತ್ರಯಲ್ಲಿ ಗಾಢನಿ ದೈಯಿಂದ ಮಲಗಿರುವಾಗ, ಅವರಿಗೆ ತಿಳಿಯದಹಾಗೆಯೇ ಅವರೆಲ್ಲರನ್ನೂ ವೈಕುಂಠಕ್ಕೆ ಸಾಗಿಸಿ, ಅಲ್ಲಿನ ನಿರತಿಶಯಾನಂದವನ್ನು , ಅವರಿಗೆ ತೋರಿಸುವನು ಒಮ್ಮೆ ಗೋಪಾಲಕರೆಲ್ಲರೂ ದೇವೇಂದ್ರನ ಪ್ರೀತಿಗಾಗಿ ಬಂದು ಯಾಗವ ನ್ನು ಮಾಡಬೇಕೆಂದು ಯತ್ನಿ ಸುವರು. ಅದನ್ನು ನೋಡಿ ಕೃಷ್ಣನು, ಇಂದ್ರ ಪ್ರೀತಿಗಾಗಿ ಯಾಗವನ್ನು ಮಾಡಬೇಕಾದ ಅವಶ್ಯವಿಲ್ಲವೆಂದು ನಿರೋಧಿಸು ವನು. ಇದರಿಂದ ದೇವೇಂದ್ರನು ಕೋಪಗೊಂಡು, ಕೃಷ್ಣನನ್ನು ನಿಗ್ರಹಿಸ ಬೇಕೆಂದೆಣಿಸಿ, ಭಯಂಕರವಾದ ಕಲ್ಲು ಮಳೆಯನ್ನು ಕರೆಯುವನು. ಈತಿಲಾ ವರ್ಷದ ಪ್ರಹಾರವನ್ನು ತಡೆಯಲಾರದೆ, ಗೋವುಗಳೂ, ಗೋಪಾಲಕರೂ ಸಾಯುವ ಸ್ಥಿತಿಯಲ್ಲಿರುವುದನ್ನು ನೋಡಿ ಕೃಷ್ಣನು, ಸಮೀಪದಲ್ಲಿದ್ದ ಒಂದು