ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭ ಅಧ್ಯಾ, ೭.) ದ್ವಿತೀಯಸ್ಕಂಧವು. ವೆನಿಸಿದ ವೈಕುಂಠವನ್ನು ಹೊಂದುವರು. ಹೀಗೆ ಶ್ರೀಕೃಷ್ಣನು ನಡೆಸುವ ಕಾರಗಳೆಲ್ಲವೂ ಅನಂತವಾಗಿಯೂ, ಅದ್ಭುತವಾಗಿಯೂ ಇರುವುವು. ನಾರ ದಾ! ನನಗೆ ತಿಳಿದಮಟ್ಟಿಗೆ ನಾನು ಸಂಗ್ರಹವಾಗಿ ಆತನ ಚರಿತ್ರವನ್ನು ವಿವ ರಿಸಿರುವೆನು. w+ ವ್ಯಾಸಾವತಾರವು, xw ಭಗವಂತನಾದ ಶ್ರೀಮನ್ನಾರಾಯಣನು ವ್ಯಾಸಮಹರ್ಷಿಯಾಗಿ ಹುಟ್ಟಿ, ಕಲಿಯುಗದಲ್ಲಿ ಮುಂದೆ ಕ್ರಮಕ್ರಮವಾಗಿ ಜನರೆಲ್ಲರೂ ಅಲ್ಪಾಯು ಸುಳ್ಳವರಾಗಿಯೂ, ಮಂದಬುದ್ಧಿಯುಳ್ಳವರಾಗಿಯೂ ಹುಟ್ಟುವರೆಂದೂ, ಅವರಿಗೆ ವೇದಾರ್ಥವನ್ನು ಗ್ರಹಿಸತಕ್ಕ ಶಕ್ತಿಯಿರಲಾರದೆಂದೂ ಎಣಿಸಿ, ಅಲ್ಪಬುದ್ಧಿಯುಳ್ಳವರೂಕೂಡ ಅವುಗಳ ಸಾರಾರ್ಥಗಳನ್ನು ಗ್ರಹಿಸುವಂತೆ ವೇದಗಳನ್ನು ವಿಭಾಗಿಸಿಡುವನು. ++ ಬೌದ್ಧಾವತಾರವ. • ದೇವದ್ವೇಷಿಗಳಾದ ಅಸುರರು ವೈದಿಕಮಾರ್ಗದಲ್ಲಿ ಬಹಳ ಶ್ರದ್ದೆಯ ನ್ನು ವಹಿಸಿ ನಿಂತು, ಮಯನಿರ್ಮಿತಗಳಾಗಿಯೂ, ಎಣೆಯಿಲ್ಲದ ವೇಗವುಳ್ಳ ವುಗಳಾಗಿಯೂ ಇದ್ದ ತ್ರಿಪುರಗಳಿಂದ ಲೋಕಗಳನ್ನು ನಾಶಮಾಡುತ್ತಿರು ವಾಗ ಅವರನ್ನು ಮೋಸಗೊಳಿಸಿ ವಂಚಿಸುವುದಕ್ಕಾಗಿ ಭಗವಂತನು ಪಾಷಂ ಡವೇಷವನ್ನು ಧರಿಸಿ, ಆಭಾಸಧರ್ಮವಾದ ಆ ಪಾಷಂಡಧರ್ಮವನ್ನೇ ಹಿಡಿದು ಅವರಿಗೂ ಆ ಧರ್ಮವನ್ನು ಪದೇಶಿಸುವನು. ++ ಕವತಾರವು new ನಾರದಾ!ಸ3ುರುಷರ ಗೃಹಗಳಲ್ಲಿ ಭಗವತ್ಕಥಾಶ್ರವಣವೂಸ್ವಾಹಾ, ಸ್ವಧಾ, ವಷಟ್ಕಾರಗಳೂ ಯಾವಾಗ ನಿಂತು ಹೋಗುವುವೋ ಆಗ ಭಗವಂತ ನ ಈ ಕಲ್ಯವತಾರವನ್ನೆತ್ತುವನು. ಅದೇ ಕಲಿಯುಗಕ್ಕೆ ಕೊನೆಯು. ಹೀಗೆ ಕರೂಪಿಯಾದ ಭಗವಂತನು, ಕರ್ಮಭ್ರಷ್ಟರಾದವರೆಲ್ಲರನ್ನೂ ಶಿಕ್ಷಿಸು