ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

లం ಶ್ರೀಮದ್ಭಾಗವತವು [ಅಧ್ಯಾ ೭ ವನು. ಯಾವಾಗ ಮೂರುವರ್ಣಗಳೂ ಪಾಷಂಡಿಗಳಂತಾಗುವರೋ, ಯಾ ವಾಗ ಶೂದ್ರರೇ ರಾಜರಾಗುವರೋ ಆ ಕಾಲದಲ್ಲಿಯೇ ಭಗವಂತನು ಈ ಕಲ್ಯವತಾರವನ್ನೆತಿ ಜನರನ್ನು ನಿಯಮಿಸುವನು. - ಓ ನಾರದಾ ! ಸೃಷ್ಟಿ ವಿಷಯದಲ್ಲಿ ಚತುರ್ಮುಖನಾದ ನಾನೂ, ನವಬ್ರಹ್ಮರೂ, ಮರೀಚಿ ಮೊದಲಾದ ಮಹರ್ಷಿಗಳೂ, ಆ ಭಗವಂತನಿಗೆ ಸಾಧನರೂಪವಾಗಿದ್ದುಕೊಂಡು, ಅವನಿಗಧೀನರಾಗಿ ಅವನಪ್ರೇರಣೆಯಿಂದ ಲೇ ಆಕಾರಗಳನ್ನು ನಡೆಸುವೆವು. ಧರ್ಮವೂ, ಆ ವಿಷ್ಣುವಿನಲ್ಲಿರುವ ಪಾಲನಶ ಕೈಯ, ಮನುಗಳೂ, ಇಂದ್ರಾದಿದೇವತೆಗಳೂ,ರಾಜರೂ ಪ್ರಪಂಚದ ರಕ್ಷ ಇಕಾರದಲ್ಲಿ ನಿಯಮಿಸಲ್ಪಟ್ಟಿರುವರು. ಅಧರ್ಮವೂ, ರುದ್ರನೂ, ಕೋಪ ಸ್ವಭಾವವುಳ್ಳ ಸರ್ಪಗಳೂ, ಶೂರಸ್ವಭಾವವುಳ್ಳ ರಾಕ್ಷಸಾಡಿಗಳ ಲೋಕ ಸಂಹಾರಕಾರಕ್ಕಾಗಿ ನಿಯಮಿಸಲ್ಪಟ್ಟಿರುವರು. ಇವೆಲ್ಲಕ್ಕೂ ಸರ್ವತ್ಮಕ ನಾದ ಆನಾರಾಯಣನೊಬ್ಬನೇ ಪ್ರೇರಕನಾಗಿಯೂ, ಮೂಲಕಾರಣನಾಗಿ ಯ ಇರುವನು. ಈ ಕಾವ್ಯಗಳನ್ನು ನಡೆಸುವ ವಿಷಯದಲ್ಲಿ, ಅವನು ತೋರಿ ಸತಕ್ಕ ಲೀಲೆಗಳೂ, ಅವತಾರಗಳೂ: ಅದ್ಭುತಕಾರಗಳೂ, ಕೊನೆಮೊದಲಿ ಲ್ಲದಂತಿರುವುವು. ನಾರದಾ! ಭೂಮಿಯಲ್ಲಿರುವ ರೇಣುಗಳ ಕಣಗಳನ್ನಾದ ರೂ ಲೆಕ್ಕಮಾಡಿ ತಿಳಿಯಬಹುದೇಹೊರತು, ಆ ನಾರಾಯಣನ ಒವ್ಯಚೇ ಪೈಗಳನ್ನು ಮಾತ್ರ ಲೆಕ್ಕವಿಡಲು ಯಾರಿಗೂ ಸಾಧ್ಯವಲ್ಲ. ಹಾಗಿದ್ದ ರೂ ನನಗೆ ತಿಳಿದಷ ನ್ನು ನಿನಗೂ ಸಂಗ್ರಹಿಸಿ ತಿಳಿಸಿರುವನು. ವಿಸ್ತರಿಸಿ ಹೇಳಬೇಕೆಂದರೆ ನನಗೂ ಸಾಧ್ಯವಲ್ಲ. ಪೂರ್ವದಲ್ಲಿ ಭಗವಂತನು ತ್ರಿವಿಕ್ರ ಮಾವತಾರವನ್ನೆತ್ತಿದಾಗ, ನಿರಂಕುಶವಾದ ಆತನ ಪಾದವೇಗದಿಂದ ಕದಲಿ ತಮ್ಮ ತಮ್ಮ ನಿವಾಸಗಳಿಂದ ಜಾರಿಬಿಳುತ್ತಿದ್ದ ಪ್ರಾಣಿಗಳನ್ನು ನೋಡಿ ಸತ್ಯ ಲೋಕವಾಸಿಗಳೆಲ್ಲರೂ ಭಯದಿಂದ ನಡುಗಿ ಸ್ತಬ್ಧರಾದರು. ಅಂತಹ ಮಹಾ ಪುರುಷನ ಹವ್ಯಕರ್ಮವನ್ನೂ, ವೀರವನ್ನೂ ಯಾರು ತಾನೇ ಲೆಕ್ಕವಿಡಬಲ್ಲ ರು?ನಾರದಾ! ಆ ವಾಸುದೇವನ ಮಾಯಾಬಲವನ್ನು ನಾನೂ ಕಂಡರಿಯೆನು! ನಿನ್ನ ಒಡಹುಟ್ಟಿದವರಾದ ಸನಕಾದಿಗಳೂ ಕಂಡರಿಯರು ! ಅಷ್ಟೇಕೆ ? ನ ಮ್ಮೆಲ್ಲರ ಸಂಗತಿಯೂ ಹಾಗಿರಲಿ! ಆಪರಮಪುರುಷನ ಅಪರಾವತಾರವೆಂದೆಣಿ