ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾ ಹ್ವಾತ್ಮವು. - ೧೭ ತನೆ! ಈಗ ಲೋಕದಲ್ಲಿ ಭಯಂಕರವಾದ ಕಲಿಯು ತಲೆದೋರಿರುವುದು. ಇವರೆಲ್ಲರೂ ಕೂರಸ್ವಭಾವವನ್ನವಲಂಬಿಸುತ್ತಿರುವರು. ದುಷ್ಟರ ಸಹ ವಾಸದಿಂದ ಸತ್ಪುರುಷರ ಸ್ವಭಾವವೂ ಕೆಡುತ್ತಿರುವುದು. ಹೀಗೆ ಗಲಭಾರ ದಿಂದ ಕುಗ್ಗುತ್ತಿರುವ ಈ ಭೂಮಿಗೆ ಇನ್ನು ರಕ್ಷಕರಾರು?ಗೊರೂಪಿಣಿಯಾ ದ ಈ ಭೂದೇವಿಯು ಇನ್ನು ಮೇಲೆ ಯಾರನ್ನಾಶ್ರಯಿಸಬೇಕು? ದೇವಾ ! ನೀನು ಹೊರತು ಇವಳ ಕಷ್ಟವನ್ನು ನೀಗಿಸುವುದಕ್ಕೆ ಬೇರೆ ಯಾರೂ ಸಮ ರ್ಥರೆಂದು ನನಗೆ ತೋರಲಿಲ್ಲ. ಆದುದರಿಂದ ಭಕ್ತವತ್ಸಲನಾದ ಸೀನು ಸ ಜನರನ್ನು ದರಿಸುವುದಕ್ಕಾಗಿ, ಈ ಲೋಕದಲ್ಲಿಯೇ ಸ್ಥಿರವಾಗಿ ನಿಂತಿರಬೇಕು. ನೀನು ಅಪ್ರಾಕೃತನಾಗಿದ್ದರೂ ಭಕೋದ್ಮರಣಾರ್ಥವಾಗಿಯೇ ಹೀಗೆ ಪ್ರಾಕೃತದೇಹವನ್ನು ಹೊಂದಿ ಬಂದವನಲ್ಲವೆ? ಈಗ ನೀನು ಈ ಲೋಕವ ನ್ನು ಬಿಟ್ಟು ಹೋದರೆ, ನಿನ್ನ ಭಕ್ತರೆಲ್ಲರೂ ನಿನ್ನ ನಗಲಿ ಇಲ್ಲಿರುವುದು ಹೇಗೆ? ಆದುದರಿಂದ ನೀನು ಇಲ್ಲಿಯೇ ನಿಲ್ಲಬಾರದೆ?" ಎಂದು ಪ್ರಾರ್ಥಿಸಿದನು. ಉದ್ದವನ ಈ ಮಾತನ್ನು ಕೇಳಿ ಶ್ರೀಕೃಷ್ಣನು, ತನ್ನ ಭಕೋದ್ಯ ಸಾರ್ಥವಾಗಿ ತಾನು ಮುಂದೆ ಮಾಡಬೇಕಾದುದೇನೆಂದು ತನ್ನಲ್ಲಿಯೇ ನು ಅಲೆ ೧ಚಿಸಿ, ಕೊನೆಗೆ ತನ್ನ ಚರಿತ್ರರೂಪವಾದ ಶ್ರೀಭಾಗವತವನ್ನು ತಿಗೆ ಪ್ರತಿನಿಧಿಯನ್ನಾಗಿ ಮಾಡಿ, ಅದರಲ್ಲಿ ತನ್ನ ತೇಜಸ್ಸನ್ನು ನೆಲೆಗೊಳಿಸಿ ದನು. ಆದುದರಿಂದ ಈ ಭಾಗವತಕಥೆಯೆಂಬುದು ಸಾಕ್ಷಾತ್ಪರಮಾತ್ಮ ನ ವಾಲ್ಮೀಯವಾದ ಶರೀರದಂತೆ, ಲೋಕದಲ್ಲಿ ಬೆಳಗುತ್ತಿರುವುದು. ಶ್ರವಣ ಪಠನಾದಿಗಳಿಂದ ಸಮಸ್ತವಿಧದಲ್ಲಿಯೂ ಇದು ಪಾಪವಿನಾಶಕವಾಗಿರುವ ಸಿ. ಅದರಲ್ಲಿಯೂ ಸಪ್ತಾಹಶ್ರವಣವೆಂಬುದು ಎಲ್ಲಕ್ಕಿಂತಲೂ ಉತ್ತಮ ವಾದ ಧರ್ಮವು, ಕಲಿಕಾಲದಲ್ಲಿ ಬೇರೆ ಧರ್ಮಗಳೆಲ್ಲಕ್ಕೂ ಪ್ರತಿನಿಧಿಯಾಗಿ 3 ಈ ಧರ್ಮವೊಂದು ಏರ್ಪಟ್ಟಿರುವುದು. ದುಃಖದಾರಿಬಾ ಕಷ್ಟ jಳನ್ನು ನೀಗಿಸುವುದಕ್ಕೂ, ಪಾಪನಿವಾರಣೆಗೂ, ಕಾಮಕ್ರೋಧಾದಿಗಳ ನ್ನು ಜಯಿಸುವುದಕ್ಕೂ, ಈ ಕಲಿಕಾಲದಲ್ಲಿ ಇದೊಂದೇ ಸಾಧನವು. ಈ ಭೂ ಲೋಕದಲ್ಲಿ ಕಲಿಯೆಂಬ ವೈಷ್ಣವಮಾಯೆಯನ್ನು ತಪ್ಪಿಸಿಕೊಳ್ಳಬೇಕೆಂದರೆ ದೇವತೆಗಳಿಗೂ ಸಾಧ್ಯವಲ್ಲ. ಇನ್ನು ಮನುಷ್ಯರ ಪಾಡೇನು? ಇದರ ಪರಿಹಾ ಇಕ್ಕಾಗಿಯೇ ಸಪ್ತಾಹಶ್ರವಣವೆಂಬ ವಿಧಿಯು ಏರ್ಪಟ್ಟಿರುವುದು”ಎಂದರು. ?