ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, 2 | ದ್ವಿತೀಯಸ್ಕಂಧವು ೨೮೧ ಸಿಕೊಂಡ ಆದಿಶೇಷನು ಎರಡು ಸಾವಿರ ನಾಲಿಗೆಯುಳ್ಳವನಾಗಿ, ಅನವರತ ವೂ ಆ ಭಗವಂತನ ಗುಣಗಳನ್ನು ತನ್ನ ಸಹಸ್ರಮುಖಗಳಿಂದ ಗಾನಮಾಡು ತಿದ್ದರೂ, ಇನ್ನೂ ಅವುಗಳ ಕೊನೆಯನ್ನು ಕಾಣಲಾರದಿರುವನು. ಇನ್ನು ನಮ್ಮಂತವರ ಪಾಡೇನು ? ಆದರೆ « ಆ ಭಗವಂತನ ಮಾಯಾಬಲವನ್ನ ತಿಕ ಪಸಿ ಉತ್ತೀರ್ಣರಾಗುವರಿಬ್ಬರೂ ಇಲ್ಲವೆ ? ” ಎಂದು ಸೀನು ಶಂಕಿಸ ಬಹುದು, ನಾಗದಾ! ಅಂತವರೂ ಕೆಲವರುಂಟು, ಹೇಳುವೆನು ಕೇಳು. ಸತ್ವ ಸಂಗಪುಗಮಾಡಿ, ನಿಷ್ಕಪಟವಾದ ಭಕ್ತಿಯಿಂದ ತನ್ನನ್ನು ಯಾರು ಸೇವಿಸುವರೋ ಅಂತವರಲ್ಲಿ ಭಗವಂತನು ತಾನಾಗಿಯೇ ಒಲಿಯುವನು. ಹೀಗೆ ಅವನ ದಯೆಗೆ ಪಾತ್ರರಾದವರು, ಸಂಸಾರದಲ್ಲಿ ಸಿಕ್ಕಿ ಕಾಲವನ್ನು ವ್ಯರ್ಥವಾಗಿ ಕಳೆಯಲಾರರು. ಅಂತವರು ನಾಯಿಮರಿಗಳಿಗೆ ಆಹಾರಯೋಗ್ಯ ವಾದ ಈ ದೇಹದಲ್ಲಿ ಆಹಂಕಾರಮಮಕಾರಗಳನ್ನು ಬಿಟ್ಟು, ಆ ಭಗವಂತನ ಮಾಯೆಯನ್ನ ತಿಕ್ರಮಿಸಿ, ಆತನ ನಿಜತತ್ವವನ್ನು ಸ್ವಲ್ಪ ಮಾತ್ರವಾದರೂ ತಿಳಿದುಕೊಳ್ಳಬಲ್ಲರು. ಅಂತಹ ಮಹಾತ್ಮರು ಎಲ್ಲಿಯೂ ಕೆಲವರುಮಾ ತ್ರವೇ ಇರವು, ಆ ಭಗವಂತನ ಮಹಿಮೆಗೆ ಕೊನೆಯಿಲ್ಲವೆಂಬುದನ್ನು ಮಾತ್ರ ದೃಢವಾಗಿ ತಿಳಿದುಕೊಂಡರೂ ಸಾಕು ! ಇದರಿಂದಲೇ ಅವನ ನಿಜಸ್ಥಿತಿಯನ್ನು ಕಂಡಂತಾಗುವುದು. ನಾರದಾ ! ಈ ವಿಧವಾದ ಜ್ಞಾನ ವುಳ್ಳವರು ಯಾರೆಂಬುದನ್ನು ತಿಳಿಸುವೆನು ಕೇಳು. ನಾನೊಬ್ಬನು ಆ ತತ್ವ ವನ್ನು ತಿಳಿದು ಮಾಯೆಯನ್ನು ದಾಟಿರುವೆನು. ಕೇವಲ ಭಕ್ತಿಯೋಗಾವ ಲಂಬಿಗಳಾದ ಸನಕಾದಿಗಳೂ ಅದನ್ನು ತಿಳಿದಿರುವರು. ಹಾಗೆಯೇ ಶಂಕ ರಮ, ದೈತ್ಯಕುಲಪ್ರಭುವಾದ ಪ್ರಹ್ಲಾದನ, ಸ್ವಾಯಂಭುವಮನುವೂ, ಆತನ ಪತ್ನಿ ಯಾದ ಶತರೂಪೆಯೆಂಬವಳೂ, ಅವಳ ಮಕ್ಕಳಾದ ಪ್ರಿಯವ ತಾದಿಗಳೂ, ಇವರ ಸಹೋದರಿಯರಾದ ದೇವಹೂತಿ ಮೊದಲಾದ ನಾರೀ ಮಣಿಗಳೂ, ಆ ಪರಮಪುರುಷನ ತತ್ವವನ್ನು ತಿಳಿದು ಮಾಯೆಯನ್ನೂ ದಾಟಿ ರುವರು. ಮತ್ತು ಪ್ರಾಚೀನಬರ್ಹಿಯೆಂಬ ರಾಜೇಂದ್ರನೂ, ಋಭುಮಹ ರ್ಷಿಯೂ, ಉತ್ತಾನಪಾದನ ಮಗನಾದ ಧ್ರುವನೂ, ಇಕ್ಷಾಕು, ದಿಲೀಪ, ಭೀಷ್ಮ, ಯಯಾತಿ, ಮುಚುಕುಂದ, ರಂತಿದೇವ, ಶ್ರುತದೇವ, ವಿಭೀಷಣ