ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮೪ ಶ್ರೀಮದ್ಭಾಗವತವು [ಅಧ್ಯಾ, ೭, ಗಳೆಂಬ 'ಸ್ವಲ್ಪ ಫಲಗಳಿಗೆ ಸಾಧನವಾದ ಕರ್ಮಸಂಬಂಧವನ್ನು ತೊರೆದುಬಿ ಡುವರು ( ಅದರೆ ಕರ್ಮವನ್ನು ಬಿಟ್ಟರೆ ಸ್ವರ್ಗಾದಿಸುಖಗಳನ್ನ ಪೇಕಿಸತ್ತವರ ಕೋರಿಕೆಯು ನೆರವೇರುವುದು ಹೇಗೆ?” ಎಂದು ಕೇಳುವೆಯಾ ? ನಾರದಾ ! ಭಗವದುಪಾಸನವನ್ನು ಮಾಡತಕ್ಕವರಿಗೆ ಯಾವಪಿಧದಲ್ಲಿಯ ಕೊರತೆ ಯಿಲ್ಲ ! ಆತನು ಸರಾಂತರಾಮಿಯಾದುದರಿಂದ ವರ್ಣಶ್ರಮೊಚಿ ತರ ಳಾದ ಕರ್ಮಗಳಿಗೆ ಫಲವನ್ನು ಕೊಡಬಲ್ಲವನೂ ಆತನಲ್ಲದೆ ಬೇರೆಯಲ್ಲ. ಆದುದರಿಂದ ಸ್ವರ್ಗಾರಗಳನ್ನು ಕೋರುವವರೂ ಭಗವದುಪಾಸನದಿಂದಲೇ ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಬೇಕು. ಇಂದಾಟದೇವತೆಗಳಲ್ಲಿ ರುವ ಮಹಿಮೆಯಕೂಡ ಅವರಲ್ಲಿ ಅಂತರಾತ್ಮನಾದ ಭಗವಂತನಿಂದಲೇ ಉಂಟಾದುದಲ್ಲದೆ ಬೇರೆಯಲ್ಲ ಆದರೆ 44 ಭಗವಂತನು ಸಂತರಾಗಿ ಯಾಗಿರುವಾಗ, ಚೇತನಾಚೇತನಗಳಸ್ಲಿರುವ ದೋಷಕ್ಕೆ ಆವನೂಭಾಗಿಯಾ ಗದಿರುವಸೆ ? ” ಎಂದು ಸೀನು ಶಂಕಿಸಬೇಕಾದುಲ್ಲ. ಆ ಭಗವಂತನ ಕರ್ಮಸಂಬಂಧದಿಂದುಂಟಾಗುವ ಉತ್ಪತಿ ವಿನಾಶಾದಿಗಳೊಂದ ಇಲ್ಲ ದವನು ಆದುದರಿಂದ, ಈ ಮನುಷ್ಯ ದೇಹಕ್ಕೆ ಕಾರಣಗಳಾದ ಭೂತಸೂ ಕಗಳು ಕದಲಿಹೋಗುವುದರಿಂದ, ಈ ದೇಹವು ನಶಿಸಿಹೋದರೂ, ಆ ದೇಶ ದಲ್ಲಿ ಅಂತರಾಮಿಯಾಗಿರುವ ಭಗವಂತನುಮಾತ್ರ ಆಕಾಶದಂತೆ ಸಿತ್ಯನಾಗಿ ರುವನೇ ಹೊರತು ದೇಹದೊಡನೆ ನಾಶಹೊಂದಲಾರನು, ಶರೀರಗತವಾದ ದೋಷಕ್ಕೆ ಆತನೂ ಭಾಗಿಯಾಗಿದ್ದ ಪಕ್ಷದಲ್ಲಿ, ಅವನೂ ಆ ಶರೀರದಂತೆಯೇ ನಾಶಕ್ಕೀಡಾಗಬೇಕಲ್ಲವೆ ! ಹಾಗಿಲ್ಲದುದರಿಂದಲೇ ಪ್ರಕೃತಿಸಂಬಂಧವಾದ ದೋಷವು ಅವನಲ್ಲಿ ಆಂಟಲಾರದು. ಓ ನಾರದಾ ! ಲೋಕಕಾರಣನಾಗಿ ಯೂ, ಜ್ಞಾನಾಡಿನಾಡು ಪರಿಪೂರ್ಣನಾಗಿಯೂ ಇರುವ ಆ ಭಗವಂತನ ವಿಭೂತಿಗಳೆಲ್ಲವನ್ನೂ ನಿನಗೆ ನಾನು ಸಂಗ್ರಹವಾಗಿ ವಿವರಿಸಿರುವೆನು. ಇದ ನೈ ನೀನು ಇನ್ನೂ ವಿವರವಾಗಿ ಇತರರಿಗೂ ಬೋಧಿಸಬೇಕು. ಈ ಭಗಟ್ಟ, ಭೂತಿವೃತ್ತಾಂತವನ್ನು ಮೊದಲು ಭಗವಂತನು ತಾನಾಗಿಯೇ ನನಗೆ ತಿಳಿಸಿ ದನು. ಸಾಕ್ಷಾತ್ತಾಗಿ ಭಗವಂತನಿಂದ ಬಂದುದರಿಂದಲೇ ಇದು ಭಾಗವತವೆನಿ .ಸಿರುವುದು. ಈ ವಿಷಯವನ್ನು ನೀನು ಚೆನ್ನಾಗಿ ಮನಸ್ಸಿನಲ್ಲಿ ಮನನಮಾಡಿ