ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫ ಅಧ್ಯಾ. ೭. ದ್ವಿತೀಯಸ್ಕಂಧವು. ಕೊಂಡು,ಸಾಂತರಾತ್ಮನಾದ ಆ ಭಗವಂತನಲ್ಲಿ ಮನುಷ್ಯರಿಗೆ ದೃಢವಾದ ಭಕ್ತಿಯುಂಟಾಗುವಂತೆ ಅದನ್ನು ಲೋಕದಲ್ಲಿ ಚೆನ್ನಾಗಿ ವಿವರಿಸಿ, ಚೇತನ. ರನ್ನು ದರಿಸಬೇಕು. ನಾರದಾ ! : ಹಾಗಿದ್ದರೆ ಧರ್ಮಾರ್ಥಕಾಮಗಳೆಂಬ ತ್ರಿವರ್ಗಗಳಿಂದ ಪ್ರಯೋಜನವೇನು?” ಎಂದು ನೀವು ಕೇಳಬಹುದು. ಮನು ಷ್ಯರು ಭೂಮಿಯಲ್ಲಿ ಹುಟ್ಟಿ, ತಾವು ನಡೆಸುವ ಕರ್ಮಕಲಾಪಗಳಿಂದ ಭಗ ವಂತನನ್ನು ಸಂತೋಷಪಡಿಸದಿದ್ದ ಪಕ್ಷದಲ್ಲಿ, ಅಂತಹ ಕರ್ಮಗಳೆಲ್ಲವೂ ನಿಷ್ಟ ಲವೆಂಬುದರಲ್ಲಿ ಸಂದೇಹವೇ ಇಲ್ಲ! ಆತನನ್ನು ಸಂತೋಷಪಡಿಸಬೇಕಾದರೆ ಭಕ್ತಿಗಿಂತಲೂ ಮೇಲಾದ ಬೇರೆ ಉಪಾಯವಿಲ್ಲ. ಆದುದರಿಂದ ಎಂತವನಾ ದರೂ ಭಕ್ತಿಯನ್ನೇ ಮುಖ್ಯವಾಗಿ ಹಿಡಿಯಬೇಕೆಹೊರತು,ತ್ರಿವರ್ಗಸಾಧನ ಗಳಾದ ಕಲ್ಯವನ್ನು ಮಾತ್ರವೇ ಅವಲಂಬಿಸಬಾರದು. ಆ ಭಗವಂತನಲ್ಲಿ ದೃಢವಾದ ಭಕ್ತಿಯೊಂದು ಮಾತ್ರ ಹುಟ್ಟಿದಪಕ್ಷದಲ್ಲಿ, ವರ್ಣಾಶ್ರಮಾಚಾರ ಗಳಿಂದಲಾಗಲಿ, ಬನದಿಂದಾಗಿ, ತಪಸ್ಸಿನಿಂದಾಗಲಿ, ವೇದಾಧ್ಯಯನto ದಾಗಲಿ, ಪಡೆಯಬೇಕಾದ ಪ್ರಯೋಜನವೊಂದೂ ಇರುವುದಿಲ್ಲ. ಭಕ್ತಿಹೀನ ನಾದವನು ಅವೆಲ್ಲವನ್ನೂ ಕ್ರಮವಾಗಿ ನಡೆಸಿದರೂ ಫಲವಿಲ್ಲ. ಮನೆ ಯೆಯಲ್ಲಿ ಕಟ್ಟು ಬಿದ್ದಿರುವ ನಮಗೆ, ಆ ವಿಧವಾದ ದೃಢಭಕ್ತಿಯು ಹೇಗೆ ಹುಟ್ಟುವು ದೆಂದು ಕೇಳುವೆಯಾ ? • ನಾರದಾ ! ಆ ಮಾಯೆಯನ್ನು ಬಿಡಿಸಿಕೊಳ್ಳುವು ದೇನೂ ಅಷ್ಟೊಂದು ಅಸಾಧ್ಯ ಕಾರ್ಯವಲ್ಲ! ಯಾವಾಗಲೂ ಆ ಭಗವಂತನ ಚರಿತ್ರಗಳನ್ನು ಕೇಳುತ್ತ, ಆಗಾಗ ಅವುಗಳನ್ನು ಗಾನಮಾಡುತ್ತ, ಅನವರ ತವೂ ಆ ಮಹಾತ್ಮನ ನಾಮವನ್ನು ಸ್ಮರಿಸುತ್ತಿರುವವರನ್ನು, ಮಾಯೆಯು ಎಷ್ಟು ಮಾತ್ರವೂ ಮೋಹಗೊಳಿಸಲಾರದು! ಭಕ್ತಿಯೂ ಅವರಲ್ಲಿ ತಾನಾಗಿ ಯೇ ಹುಟ್ಟಿ ಬರದು. ಆದುದರಿಂದ ನಾನು ಹೇಳಿದಂತೆ ಆ ಭಗವಚ್ಛರಿತ್ರಗ ಇನ್ನು ನೀನು ವಿಶದೀಕರಿಸಿ, ಮನುಷ್ಯರಿಗೆ ಭಕ್ತಿಯುಂಟಾಗುವಂತೆ ಮಾಡ ಬೇಕಾದುದು ಅತ್ಯವಶ್ಯವು ” ಎಂದು ಬ್ರಹ್ಮನು ನಾರದನಿಗೆ ಉಪದೇಶಿಸಿ ಕಳುಹಿಸಿದನು. ಇದು ಏಳನೆಯ ಅಧ್ಯಾಯವು.