ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ. ಕೆ. (ಪರೀಕ್ಷಿದ್ರಾಜನು ಇನ್ನೂ ಬೇರೆಬೇರೆ ವಿಷಯಗಳನ್ನು . '1 ಕುರಿತು ಶುಕಮುನಿಯನ್ನು ಪ್ರಶ್ನೆ ಮಾಡಿದುದು, S ಈ ವಿಧವಾದ ಬ್ರಹ್ಮನಾರದಸಂವಾದವನ್ನು ಕೇಳಿದಮೇಲೆ, ಪರೀ ಕ್ಷಿದ್ರಾಜನು ತಿರುಗಿ ಶುಕಮುನಿಯನ್ನು ಕುರಿತು. ( ಎಲೈ ಯೋಗೀಂದ್ರನೆ ! ತತ್ವಜ್ಞನಾದ ನಾರದನು, ತನ್ನ ಜನಕ ನಾದ ಚತುರ್ಮುಖನಿಂದ ಪ್ರಕೃತಿ ಸಂಬಂಧವಿಲ್ಲದ ಭಗವಂತನ ಗುಣಗಳನ್ನು ಲೋಕದಲ್ಲಿ ಪ್ರಚಾರಗೊಳಿಸ ಬೇಕೆಂದು ಪ್ರೇರಿಸಲ್ಪಟ್ಟ ನಷ್ಮೆ ? ! ಅದರಂತೆ ನಾರದನು ಲೋಕದಲ್ಲಿ ಯಾರುಯಾರಿಗೆ ಯಾವಯಾವ ವಿಧದಿಂದ ತತ್ವಜ್ಞಾನವನ್ನು ತಿಳಿಸಿದನು ? ಅವೆಲ್ಲವನ್ನೂ ಕೇಳಬೇಕೆಂದು ನನ್ನ ಮನಸ್ಸು ಬಹಳವಾಗಿ ಕುತೂಹಲಗೊಂಡಿ ರವುದು. ಎಲೈ ಮಹಾತ್ಮನೆ! ಅವೆಲ್ಲವನ್ನೂ ನೀನು ಕೃಪೆಯಿಟ್ಟು ನನಗೆ ತಿಳಿಸ ಬೇಕು! ಆ ಭಗವಂತನ ಚರಿತ್ರೆಗಳೆಲ್ಲವೂ ಸಮಸ್ತವಿಧದಲ್ಲಿಯ ಮಂಗಳ ಪ್ರದಗಳಾದುದರಿಂದ, ಆ ಚರಿತ್ರೆಗಳೆಲ್ಲವನ್ನೂ ವಿವರವಾಗಿ ತಿಳಿಸು ! ಅವುಗ ಇನ್ನು ನೀನು ಉಪದೇಶಿಸುವುದರಿಂದ ನನ್ನ ಮನಸ್ಸಿನ ಸಂಶಯಗಳೆಲ್ಲವೂ ನೀಗಿ ನಿಷ್ಕಲ್ಮಷವಾದಮೇಲೆ, ಆ ಪರಮಾತ್ಮನಲ್ಲಿ ಅದನ್ನು ನೆಲೆಗೊಳಿಸಿ ತುಚ್ಛ ವಾದ ಈ ದೇಹವನ್ನು ಬಿಟ್ಟುಬಿಡುವೆನು, ಓ! ಮಹಾತ್ಮಾ ! ಸಾಂತಯ್ಯಾ ಮಿಯಾದ ಆ ಭಗವಂತನ ಕಥೆಗಳನ್ನು ಕಿವಿಯಿಂದ ಕೇಳುತ್ತ, ಆತನನ್ನು ಧ್ಯಾನಿಸುತ್ತಿದ್ದ ಹಾಗೆಯೇ ಈ ದೇಹವನ್ನು ತ್ಯಜಿಸಬೇಕೆಂದುದ್ದೇತಿಸುವೆನು. ಅವನ ಚರಿತ್ರೆಗಳನ್ನು ಕೇಳಿದಮಾತ್ರಕ್ಕೆ,ಭಗವಂತನು ತಾನಾಗಿಯೇ ಬಂದು ಅವರ ಹೃದಯದಲ್ಲಿ ನೆಲೆಸುವನು. ಆ ಭಗವಂತನ ಕಥೆಗಳನ್ನು ಭಕ್ತಿಪೂರಕ ವಾಗಿ ಕಿವಿಯಿಂದ ಕೇಳುತಿದ್ದರೆ, ಅಂತವನ ಕರ್ಣಮಾರ್ಗದಿಂದಲೇ ಭಗವಂ ತನು ಹೃದಯದಲ್ಲಿ ಪ್ರವೇಶಿಸುವನೆಂದೂ, ಶರತ್ಕಾಲವು ಕೆರೆಕೂಳಗಲ್ಲಿರುವ ನೀರಿನ ಕಲ್ಮಷವನ್ನು ನೀಗಿಸುವಂತೆ,ಭಗವಂತನು ಅಂತವರ ಹೃದಯದಲ್ಲಿರುವ ಕಲ್ಮಷವನ್ನು ನೀಗಿಸಿ ನಿರ್ಮಲವಾಗಿ ಮಾಡುವನೆಂದೂ ನಾನು ಹಿರಿಯರಿಂದ ಕೇಳಿರುವೆನು. ಇದಲ್ಲದೆ ಲೋಕದಲ್ಲಿ ಮನುಷ್ಯರು ಬೇರೆಬೇರೆ ಕಾರ್ಯಗಳಿಗಾ ಗಿ ದೇಶದೇಶಗಳನ್ನು ಸುತ್ತಿ, ಆ ಸುತ್ತಾಟದಿಂದ ಬಹಳವಾಗಿ ಬಳಲಿ, ತಮ್ಮ ಮನೆಗೆ ಬಂದು ಸೇರಿದಮೇಲೆ, ವಿಶ್ರಾಂತಿಸುಖದಲ್ಲಿಯೇ ಇದ್ದು ಬಿಡುವಂತೆ